ಹನುಮ ಜಯಂತಿ ಹೊಸ್ತಿಲಲ್ಲಿದೆ. ಸಿದ್ಧತೆಗಳು ಭರದಿಂದ ಸಾಗಿವೆ. ಈ ಸಂದರ್ಭದಲ್ಲಿ ಹೆಚ್ಚಿನ ಫಲಪ್ರಾಪ್ತಿಗಾಗಿ, ರಾಶಿಗನುಸಾರವಾಗಿ ನೀವು ಯಾವ ಪದಾರ್ಥ ನೈವೇದ್ಯ ಮಾಡಬೇಕು ತಿಳಿಯಿರಿ. 

ಹನುಮಂತನಿಗೆ ಪ್ರಾರ್ಥನೆ ಮಾಡುವುದರಿಂದ ನಮಗೆ ಆತ್ಮವಿಶ್ವಾಸ ಮತ್ತು ಮನಸ್ಸಿನ ಶಾಂತಿ ಸಿಗುತ್ತದೆ. ಹನುಮನು ಭಕ್ತರ ಮನಸ್ಸಿಗೆ ಬೇಗ ಹತ್ತಿರವಾಗುವವನು. ಭಕ್ತಿ ಎಂದರೆ ಹೇಗಿರಬೇಕೆಂಬುದಕ್ಕೆ ಆದರ್ಶವಾದವನು. ಶಕ್ತಿಯಲ್ಲಿ ಯಾರಿಂದಲೂ ಸೋಲಿಸಲಾಗದವನು. ರಾಮನ ಭಂಟನಾಗಿ ರಾಮನ ಯಶಸ್ಸಿಗೆ ಕಾರಣವಾದವನು. ಪ್ರತಿ ವರ್ಷ ಚೈತ್ರ ಪೂರ್ಣಿಮಾವನ್ನು ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಭಗವಾನ್ ಹನುಮಂತನ ಜನ್ಮದಿನ ಈ ವರ್ಷ ಹನುಮ ಜಯಂತಿ(Hanuman Jayanti 2022) ಏಪ್ರಿಲ್ 16ರಂದು ಬರಲಿದೆ. 

ಭಾವಪರವಶನಾದ, ತುಂಟ ಸ್ವಭಾವದ, ಪ್ರೀತಿ, ಕರುಣೆಯಲ್ಲಿ ಒಂದು ಕೈ ಮೇಲೇ ಎನ್ನುವ ಹನುಮನ ಆರಾಧನೆಯಿಂದ ಆತ ಬೇಗ ಒಲಿಯುತ್ತಾನೆ. ಶಿವನ ಅವತಾರವಾಗಿರುವ ಹನುಮನು ಒಲಿದರೆ ಎಲ್ಲ ಆಸೆಗಳು ಈಡೇರುತ್ತವೆ, ಸಮಸ್ಯೆಗಳು ತೀರುತ್ತವೆ. ಶನಿಯ ಕಾಟ ತಪ್ಪುತ್ತದೆ. ಮನಸ್ಸಿನ ಭಯ ದೂರಾಗುತ್ತವೆ. ಆತನನ್ನು ಒಲಿಸಿಕೊಳ್ಳಲು ಹನುಮ ಜಯಂತಿಯಂದು ನೀವೇನು ಮಾಡಬೇಕು? ರಾಶಿಯನುಸಾರ ಯಾವ ನೈವೇದ್ಯ(Bhog) ನೀಡಬೇಕು ಎಂದಿಲ್ಲಿ ನೀಡಲಾಗಿದೆ. 

ಶನಿವಾರ ಬಂದ Hanuman Jayanti; ಇಂದು ಹೀಗೆ ಮಾಡಿ ಶನಿ, ರಾಹು ಕಾಟದಿಂದ ತಪ್ಪಿಸಿಕೊಳ್ಳಿ

ಹೀಗೆ ಪೂಜಿಸಿ
ಹನುಮ ಜಯಂತಿಯಂದು ಉಪವಾಸ ಆಚರಿಸಿ. ಉಪವಾಸದ ಹಿಂದಿನ ರಾತ್ರಿ ನೆಲದ ಮೇಲೆ ಮಲಗಿ, ಮತ್ತು ರಾಮ, ಸೀತೆ ಮತ್ತು ಹನುಮಂತನನ್ನು ಪ್ರಾರ್ಥಿಸಿ.
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
ಈಗ, ಕೈಯಲ್ಲಿ ನೀರಿನಿಂದ, ಉಪವಾಸಕ್ಕಾಗಿ ಸಂಕಲ್ಪವನ್ನು ತೆಗೆದುಕೊಳ್ಳಿ.
ಸಂಕಲ್ಪದ ನಂತರ, ಹನುಮಂತನ ವಿಗ್ರಹ ಅಥವಾ ಚಿತ್ರದ ಹತ್ತಿರ ಕುಳಿತುಕೊಳ್ಳಿ.
ಪ್ರಾರ್ಥನೆಗಾಗಿ ನಿಮ್ಮ ಪೂರ್ವ ಅಥವಾ ಉತ್ತರದ ಕಡೆಗೆ ಮುಖ ಮಾಡಿ.
ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಹನುಮಾನ್ ದೇವರನ್ನು ಪ್ರಾರ್ಥಿಸಲು ಪ್ರಾರಂಭಿಸಿ.
ಷೋಡಶೋಪಚಾರ (16 ವಿಧಿಗಳು)ದ ಎಲ್ಲ ಆಚರಣೆಗಳನ್ನು ಅನುಸರಿಸಿ ಆಂಜನೇಯನನ್ನು ಪೂಜಿಸಿ. 

ಪೂಜೆಯ ಬಳಿಕ, ನಿಮ್ಮ ರಾಶಿಚಕ್ರ(zodiac signs)ಕ್ಕೆ ಅನುಗುಣವಾಗಿ ಆಂಜನೇಯನಿಗೆ ನೈವೇದ್ಯ ಅರ್ಪಿಸಿ. ರಾಶಿಯನುಸಾರ ನೀವು ನೀಡಬೇಕಾದ ನೈವೇದ್ಯ ಇಂತಿದೆ.

ಹನುಮಾನ್ ಜಯಂತಿ ಯಾವಾಗ? ಹೀಗಿರಲಿ ಪೂಜೆಯ ವಿಧಿ ವಿಧಾನ

ಮೇಷ(Aries): ಈ ರಾಶಿಯವರು ಹನುಮಂತನಿಗೆ ಬೇಸನ್ ಲಡ್ಡು(Besan Laddu)ಗಳನ್ನು ಅರ್ಪಿಸಬೇಕು.
ವೃಷಭ(Taurus): ವೃಷಭ ರಾಶಿಯವರು ಹನುಮ ಜಯಂತಿಯಂದು ತುಳಸಿ ಕಾಳು(Basil seeds)ಗಳನ್ನು ಆಂಜನೇಯನಿಗೆ ಅರ್ಪಿಸಬೇಕು.
ಮಿಥುನ(Gemini): ಈ ರಾಶಿಯವರು ಆಂಜನೇಯ ದೇವರ ಪೂಜೆ ಮಾಡುವಾಗ ತುಳಸಿ ಎಲೆಗಳನ್ನು ಅರ್ಪಿಸಬೇಕು.
ಕರ್ಕಾಟಕ(Cancer): ಕರ್ಕಾಟಕ ರಾಶಿಯವರು ಹಸುವಿನ ತುಪ್ಪದಲ್ಲಿ ಮಾಡಿದ ಬೇಸನ್ ಹಲ್ವಾವನ್ನು ಆಂಜನೇಯನಿಗೆ ನೀಡಬಹುದು.
ಸಿಂಹ(Leo): ಈ ರಾಶಿಯವರು ಈ ಹನುಮ ಜಯಂತಿಯಂದು ಜಿಲೇಬಿಯನ್ನು ಅರ್ಪಿಸಬೇಕು.
ಕನ್ಯಾ(Virgo): ಈ ರಾಶಿಯವರಿಗೆ ಬೆಳ್ಳಿಯ ಸಾರವನ್ನು ಭಗವಂತನಿಗೆ ಅರ್ಪಿಸಬೇಕು.
ತುಲಾ(Libra): ತುಲಾ ರಾಶಿಯವರು ಮೋತಿಚೂರ್ ಲಡ್ಡುಗಳನ್ನು ಅರ್ಪಿಸಬೇಕು.
ವೃಶ್ಚಿಕ(Scorpio): ವೃಶ್ಚಿಕ ರಾಶಿಯವರು ಹಸುವಿನ ತುಪ್ಪದಲ್ಲಿ ಮಾಡಿದ ಬೇಸನ್ ಲಡ್ಡುಗಳನ್ನು ನೈವೇದ್ಯ ಮಾಡಬೇಕು.
ಧನು(Sagittarius): ಹನುಮ ಜಯಂತಿಯಂದು ಲಡ್ಡು ಮತ್ತು ತುಳಸಿ ಎಲೆಗಳನ್ನು ನೈವೇದ್ಯ ಮಾಡುವುದು ಧನು ರಾಶಿಯವರಿಗೆ ಒಳ್ಳೆಯದು.
ಮಕರ(Capricorn): ನೀವು ಈ ರಾಶಿಯವರಾಗಿದ್ದರೆ ಮೋತಿಚೂರು ಲಡ್ಡುಗಳನ್ನು ಅರ್ಪಿಸಬೇಕು.
ಕುಂಭ(Aquarius): ಕುಂಭ ರಾಶಿಯವರಿಗೆ ಈ ಹನುಮ ಜಯಂತಿಯಂದು ಸಿಂಧೂರ ಬಣ್ಣದ ಬಟ್ಟೆ ಮತ್ತು ಲಡ್ಡುಗಳನ್ನು ಅರ್ಪಿಸಬೇಕು.
ಮೀನ(Pisces): ಮೀನ ರಾಶಿಯವರು ಹನುಮ ಜಯಂತಿಯಂದು ಪವನಪುತ್ರನಿಗೆ ಲವಂಗವನ್ನು ಅರ್ಪಿಸಬೇಕು.\

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.