Asianet Suvarna News Asianet Suvarna News

ವಿಜಯಪುರದಲ್ಲಿ ಮುದ್ದು ಕೃಷ್ಣರ ಸಂಭ್ರಮ..! ಇಲ್ನೋಡಿ ವಿಡಿಯೋ

Aug 31, 2021, 9:42 AM IST

ಕೃಷ್ಣಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಪುಟಾಣಿ ಮಕ್ಕಳಿಗೆ ಮುಕ್ತ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ವತಿಯಿಂದ 3 ರಿಂದ 13 ವರ್ಷದೊಳಗಿನ ಬಾಲಕ ಬಾಲಕಿಯರಿಗಾಗಿ ಮುಕ್ತ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶೇಷ ಎಂದರೇ ಸ್ಪರ್ಧೆಯಲ್ಲಿ ಮುಸ್ಲಿಂ ಕುಟುಂಬದವರೊಬ್ಬರು ತಮ್ಮ ಮಗಳಿಗೆ ಕೃಷ್ಣನ ವೇಷದಲ್ಲಿ ಕರೆತಂದಿದ್ದರು.

ದತ್ತವಾಣಿ: ಮಹಾಭಾರತದಲ್ಲಿ ಯಯಾತಿಯ ಕಥೆ ಇದು

ಬಾಲಕಿ ವೇದಿಕೆಗೆ ವೇದಿಕೆಗೆ ಕರೆತಂದಾಗ ಭಾಗವಹಿಸಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಲಂಡನ್ ನಿಂದ ಬಂದ ಬಾಲಕನೊರ್ವ ಕೃಷ್ಣನ ವೇಷದಲ್ಲಿ ಕಂಗೊಳಿಸಿದ.   ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಹಾಕಿ ಕೃಷ್ಣನ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿದ್ರು... ಪುಟ್ಟ ಮಕ್ಕಳು ಕಳ್ಳ ಕೃಷ್ಣ, ಮುದ್ದುಕೃಷ್ಣ, ಬೆಣ್ಣೆ ಕೃಷ್ಣ, ಕೊಳಲು ವಾದಕ ಕೃಷ್ಣನ ರೂಪದಲ್ಲಿ ಶೃಂಗರಿಸಿದ್ದರೇ ಇತ್ತ ಬಾಲಕಿಯರು ರಾಧೆಯ ವೇಷದಲ್ಲಿ ಮಿಂಚಿದರು.  ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.