Asianet Suvarna News Asianet Suvarna News

Anekal: ಅದ್ದೂರಿಯಾಗಿ ನಡೆದ‌ ಕರಗ ಮಹೋತ್ಸವ

ಆನೇಕಲ್ ಕರಗ ಮಹೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕಳೆದೆರಡು ವರ್ಷ ಕೊರೋನಾ ಕಾರಣದಿಂದ ನಡೆಯದೇ ಹೋಗಿದ್ದ ಆನೇಕಲ್ ಕರಗ ಮಹೋತ್ಸವವು ಈ ಬಾರಿ ಅದ್ಧೂರಿಯಾಗಿ ನಡೆಯಿತು. 

ತಿಗಳ ವಹ್ನಿಕುಲದ ಸಾಂಪ್ರದಾಯಿಕ ಆಚರಣೆಯಾದ ಕರಗ ಉತ್ಸವ(Karaga Utsav) ಅದ್ದೂರಿಯಾಗಿ ಆನೇಕಲ್(Anekal)ನಲ್ಲಿ ಅಯೋಜನೆಗೊಂಡಿತ್ತು. ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ದ್ರೌಪದಿ ದೇವಿಯ ಕರಗ ಉತ್ಸವ  ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ(Full moon day)ಯಂದು ನಡೆಯುತ್ತದೆ.  

ವಿಶ್ವ ವಿಖ್ಯಾತ ಬೆಂಗಳೂರು(Bengaluru) ಕರಗದಂದೇ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಅದ್ದೂರಿಯಾಗಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ  ಕರಗ ಉತ್ಸವ ನಡೆಯುತ್ತದೆ. ಮಧ್ಯ ರಾತ್ರಿ ಕರಗ ಹೊತ್ತ ಪೂಜಾರಿ ಚಂದ್ರಪ್ಪ ದ್ರೌಪದಿ ದೇವಿಯ ಹೂವಿನ ಕರಗ ಹೊತ್ತು ದೇವಾಲಯದಿಂದ ಹೊರ ಬರುತ್ತಿದ್ದಂತೆ ವೀರ ಕುಮಾರರು ದೀಕ್ ದೀಲ್ ಗೋವಿಂದ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತ್ತು, ಕಳೆದೆರೆಡು ವರ್ಷಗಳಿಂದ ನಡೆಯದಿದ್ದ ಕರಗ ಉತ್ಸವಕ್ಕೆ ಈ ಬಾರಿ ಭಕ್ತ ಸಾಗರವೇ ಹರಿದು ಬಂದಿತ್ತು.

ನಿಮ್ಮ ರಾಶಿಗೆ ಯಾವ ಚಟ ಅಂಟುವ ಸಂಭವ ಜಾಸ್ತಿ ಗೊತ್ತಾ?

ಆನೇಕಲ್ ಪಟ್ಟಣದ ಪ್ರಮುಖ ವೃತ್ತಗಳು ಮತ್ತು ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ಸಾಗಿತ್ತು ಕರಗಹೊತ್ತ ಪೂಜಾರಿ ನೃತ್ಯಕ್ಕೆ ತಲೆತೂಗಿದರು

Video Top Stories