ವಾರಾಣಸಿಯಿಂದ ಮೋದಿ ಹ್ಯಾಟ್ರಿಕ್ ಸ್ಪರ್ಧೆ, ಆನಂದ ಯೋಗಕ್ಕೂ ನಾಮಪತ್ರ ಸಲ್ಲಿಕೆಗೂ ಇರುವ ನಂಟೇನು..?

ವಾರಾಣಸಿಯಿಂದ ಹ್ಯಾಟ್ರಿಕ್ ಸ್ಪರ್ಧೆ.. ಏನಿದು ಆನಂದ ಯೋಗ..? ಗಂಗೆ.. ಕಾಲಭೈರವನ ಪೂಜೆ.. ಏನಂತಾರೆ ವಾರಣಾಸಿಯ ಮತದಾರ..? 
 

First Published May 15, 2024, 3:49 PM IST | Last Updated May 15, 2024, 3:49 PM IST

ಪ್ರಧಾನಿ ನರೇಂದ್ರ ಮೋದಿ 2024ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ವಾರಾಣಸಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.. ಬೆಳಗ್ಗೆ ಗಂಗಾರತಿ ನಂತರ ಕಾಲಭೈರವನ ದರ್ಶನ ಪಡೆದ ನಮೋ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ವಾರಣಾಸಿಯಿಂದ ಮೂರನೇ ಬಾರಿ ಮೋದಿ ಸ್ಪರ್ಧಿಸುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ನಿರಿಕ್ಷೆಯಲ್ಲಿದ್ದಾರೆ.. ಅಚ್ಚರಿ ಏನಂದ್ರೆ ನಮೋ ನಾಮಪತ್ರ ಸಲ್ಲಿಸಲು ಆಯ್ಕೆ ಮಾಡಿಕೊಂಡಿದ್ದ ಸಮಯ.. ಆನಂದ ಯೋಗದ ಅತ್ಯಂತ ಮಂಗಳಕರ ಸಮಯದಲ್ಲೇ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದ್ದಾರೆ.. ಹಾಗಾದ್ರೆ ಆನಂದ ಯೋಗದ ಮಹತ್ವ ಏನು..? ನಮೋ ನಾಮಪತ್ರ ಸಲ್ಲಿಕೆಗೂ ಮುನ್ನ ಏನೆಲ್ಲಾ ಮಾಡಿದ್ರು ಅನ್ನೋದನ್ನ ನೋಡಿ