ಬುಧ ದೋಷದಿಂದ ಮಾತಿನ ಸಮಸ್ಯೆ; ಈ ಸರಳ ಪರಿಹಾರಗಳನ್ನು ಪ್ರಯತ್ನಿಸಿ..!

ಜಾತಕದಲ್ಲಿ ಬುಧ ಗ್ರಹದ ದೋಷವಿದ್ದರೆ, ವ್ಯಕ್ತಿಯು ವಾಕ್ ದೋಷಗಳು ಅಥವಾ ಚರ್ಮದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
 

First Published Aug 1, 2023, 1:17 PM IST | Last Updated Aug 1, 2023, 1:17 PM IST

ಬುಧ ದೋಷದಿಂದಾಗಿ ಮಾತಿಗೆ ಚ್ಯುತಿ ಬರುತ್ತದೆ, ವ್ಯಕ್ತಿಗೆ ಮಾತನಾಡಲು ಕಷ್ಟವಾಗಬಹುದು. ಯಾಕೆಂದರೆ ಬುಧನನ್ನು ಪ್ರಾಥಮಿಕವಾಗಿ ಮಾತಿನ ಗ್ರಹವೆಂದು ಪರಿಗಣಿಸಲಾಗುತ್ತದೆ. ಬುಧ ಬಲಹೀನನಾಗಿದ್ದರೆ ಮಾತಿನ ಸಮಸ್ಯೆ ಉಂಟಾಗಬಹುದು. ಹಾಗೂ ಚರ್ಮದ ಸಮಸ್ಯೆ ಉಂಟಾಗಬಹುದು. ಆದರೆ ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಬುಧ ಗ್ರಹ ದೋಷವಿದ್ದರೆ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

ಬುಧಗ್ರಹ ಮಂತ್ರಗಳನ್ನು 14,000 ಅಥವಾ 12,000 ಸಂಖ್ಯೆಯಲ್ಲಿ ಜಪಿಸಬೇಕು. ಹಸಿರು ಅಥವಾ ನೀಲ ವರ್ಣದ ಬಟ್ಟೆ, ಹೆಸರು ಬೇಳೆ, ತುಪ್ಪ, ಕಂಚಿನ ಪಾತ್ರೆ ಹಾಗೂ ಪಚ್ಚೆ ರತ್ನವನ್ನು ದಾನ ಮಾಡಬೇಕು. ವಿಷ್ಣು ಸನ್ನಿಧಾನದಲ್ಲಿ ಪೂಜೆ ಮಾಡಿ ತುಳಸಿ ಅರ್ಚನೆ ಮಾಡಿಸಬೇಕು. ವಿಷ್ಣು ಸೂಕ್ತ ಪಾರಾಯಣ ಮಾಡಿ, ವಿಷ್ಣು ಕ್ಷೇತ್ರ ದರ್ಶನ ಮಾಡಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.

Video Top Stories