ಶನೈಶ್ಚರನ ಬಲವಿದ್ದಾಗ ಈ ವೃತ್ತಿಗಳಲ್ಲಿ ಯಶಸ್ಸು ಪಕ್ಕಾ.. ನಿಮಗಿದೆಯೇ ಶನಿಬಲ?

ಯಾವ ರಾಶಿಗೆ ಯಾವ ವೃತ್ತಿ ಹೊಂದುವುದು?
ಜಾತಕದಲ್ಲಿ ಶನಿ ಬಲವಿದ್ದಾಗ ಯಾವ ವೃತ್ತಿಯಿಂದ ಯಶಸ್ಸು ಸಾಧ್ಯ?
ನಿಮ್ಮ ರಾಶಿಗೆ ಕರ್ಮಾಧಿಪತಿ ಯಾರು?
ಕರ್ಮಾಧಿಪತಿಯ ಬಲದ ಮೇಲಿದೆ ನಿಮ್ಮ ವೃತ್ತಿ ಫಲ

Share this Video
  • FB
  • Linkdin
  • Whatsapp

ನಮ್ಮ ದೇಹದಿಂದ ಹಿಡಿದು ಜೀವನದ ಪ್ರತಿಯೊಂದರ ಮೇಲೂ ಗ್ರಹಗಳ ಹಿಡಿತ ಇದೆ. ಪ್ರತಿ ಗ್ರಹವೂ ಕೆಲವೊಂದಿಷ್ಟು ವೃತ್ತಿಗಳಿಗೆ ಸಂಬಂಧಿಸಿದೆ. ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹ ಹೆಚ್ಚು ಬಲವಾಗಿರುತ್ತದೆಯೋ ಅದಕ್ಕೆ ಸಂಬಂಧಿಸಿದ ವೃತ್ತಿ ಮಾಡುವುದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ. 

ವಾರದ ಈ ದಿನ ಈ ಪ್ರಾಣಿಗೆ ಆಹಾರ ನೀಡಿದ್ರೆ ರಾಹು, ಶನಿಯ ದೋಷಗಳು ತಗ್ಗುತ್ತವೆ..

ಇಂದು ಶನಿ ಗ್ರಹಕ್ಕೆ ಸಂಬಂಧಿಸಿದ ವೃತ್ತಿಗಳ ಬಗ್ಗೆ ತಿಳಿಯೋಣ. ಜಾತಕದಲ್ಲಿ ಶನಿ ಗ್ರಹ ಪ್ರಬಲವಾಗಿದ್ದಾಗ, ಆತನ ಕೃಪೆ ಇರುವ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ವೃತ್ತಿ ಕೈ ಹಿಡಿಯುತ್ತದೆ. ಜಾತಕದಲ್ಲಿ 10ನೇ ಮನೆಯು ವೃತ್ತಿಗೆ ಸಂಬಂಧಿಸಿದೆ. ಇಲ್ಲಿ ಶನಿಯ ಉಪಸ್ಥಿತಿ ಇದ್ದಾಗ ಕಾರ್ಯಕ್ಷೇತ್ರದ ಮೇಲೆ ಶನಿಯು ವಿಶೇಷ ಪ್ರಭಾವವನ್ನು ಬೀರುತ್ತಾನೆ. ಸಮಾಜ, ಸಂಘಟನೆ, ಸಮಿತಿ ಮತ್ತು ಕೆಳ ಹಂತದ ಜನರ ಮೇಲೆ ಶನಿಯು ವಿಶೇಷ ಪ್ರಭಾವ ಬೀರುತ್ತಾನೆ. ನಿಮ್ಮ ಜಾತಕದಲ್ಲಿ ಶನಿ ಪ್ರಬಲವಾಗಿದ್ದರೆ ನೀವು ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕೆಂದು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

Related Video