ರಾಮ್ ಚರಣ್ ಮನೆಯಲ್ಲಿ ದೀಪಾವಳಿ.. ಟಾಲಿವುಡ್ ಸ್ಟಾರ್ಸ್ ಸಮಾಗಮ!

ನಟಿ ಮಹೇಶ್ ಬಾಬು ಪತ್ನಿ ನಟಿ ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್, ನಟ ವಿಕ್ಟರಿ ವೆಂಕಟೇಶ್, ರಾಮ್ ಚರಣ್ ಹಾಗೂ ಮಹೇಶ್ ಬಾಬು ಅವರನ್ನು ಒಂದೇ ಫ್ರೇಮ್ನಲ್ಲಿ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿವೆ.

First Published Nov 14, 2023, 8:39 PM IST | Last Updated Nov 14, 2023, 8:39 PM IST

ಹೈದ್ರಾಬಾದ್‌(ನ.14):  RRR ಸಿನಿಮಾದ ನಂತರ ಟಾಲಿವುಡ್ ಮೆಗಾ ಪ್ರಿನ್ಸ್ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಬ್ಯುಸಿ ಆದ್ರೆ ಏನಂತೆ. ದೀಪಾವಳಿ ಹಬ್ಬ ಅಚರಣೆ ಮಾಡ್ಬೇಕಲ್ವಾ..? ಅದಕ್ಕಾಗಿ ತೆಲುಗು ಚಿತ್ರರಂಗದ ಸ್ಟಾರ್ಸ್ ನೆಲ್ಲಾ ಒಂದು ಕಡೆ ಸೇರಿಸಿ ದೀಪಾವಳಿ ಹಬ್ಬವನ್ನ ಆಚರಿಸಿದ್ದಾರೆ. 

ಅಮ್ಮನ ಜೊತೆ ದೀಪ ಹಚ್ಚಿದ ನಟಿ ಆರಾಧನಾ..! ಮಗಳ ಜೊತೆ ಮಾಲಾಶ್ರೀ ದೀಪಾವಳಿ ಫೋಟೋ ಶೂಟ್..!

ಟಾಲಿವುಡ್ ನಲ್ಲಿ ದೀಪಾವಳಿ ಹಬ್ಬ ಸಿಕ್ಕಾಪಟ್ಟೆ ಜೋರಾಗಿದೆ. ತೆಲುಗು ಸ್ಟಾರ್ ರಾಮ್ ಚರಣ್ ಹಾಗು ಉಪಾಸನಾ ದೀಪಾವಳಿ ಹಬ್ಬವನ್ನ ಭರ್ಜರಿಯಾಗೆ ಮಾಡಿದ್ದಾರೆ. ಫ್ಯಾಮಿಲಿ ಹಾಗು ಸ್ನೇಹಿತರ ಜೊತೆ ಸೇರಿ ದೀಪಾವಳಿ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ನಟ ವೆಂಕಟೇಶ್, ಪ್ರಿನ್ಸ್ ಮಹೇಶ್ ಬಾಬು ಮತ್ತು ಜೂನಿಯರ್ NTR ಕುಟುಂಬ ಸಮೇತರಾಗಿ ಭಾಗವಹಿಸಿದ್ದಾರೆ. ಸ್ಟಾರ್ ಗಳ ದೀಪಾವಳಿ ಹಬ್ಬ ಪಾರ್ಟಿಯಲ್ಲಿ ನಟಿ ನಮ್ರತಾ, ಮಂಚು ಲಕ್ಷ್ಮಿ, ಪ್ರಣತಿ, ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ, ರಾಜಮೌಳಿ ಪುತ್ರ ಕಾರ್ತಿಕೇಯ ಕೂಡ ಭಾಗವಹಿಸಿದ್ದರು. 

Video Top Stories