ತೋಟದ ಮನೆಯಲ್ಲಿ ಪ್ರೇಮ್-ರಕ್ಷಿತಾ ಗಣೇಶ ಹಬ್ಬ: ತಮಟೆ ಏಟಿಗೆ ಭರ್ಜರಿ ಸ್ಟೆಪ್ ಹಾಕಿದ ದಂಪತಿ!

ಸ್ಯಾಂಡಲ್‌ವುಡ್‌ನ ನಿರ್ದೇಶಕ ಜೋಗಿ ಪ್ರೇಮ್ ಈ ಸಲ ಗಣೇಶ ಹಬ್ಬವನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಹೌದು! ಮಂಡದ್ಯದಲ್ಲಿರೋ ತಮ್ಮ 'ಅಮ್ಮ' ನ ತೋಟದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದ್ದಾರೆ. 

First Published Sep 20, 2023, 1:23 PM IST | Last Updated Sep 20, 2023, 1:23 PM IST

ಸ್ಯಾಂಡಲ್‌ವುಡ್‌ನ ನಿರ್ದೇಶಕ ಜೋಗಿ ಪ್ರೇಮ್ ಈ ಸಲ ಗಣೇಶ ಹಬ್ಬವನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಹೌದು! ಮಂಡದ್ಯದಲ್ಲಿರೋ ತಮ್ಮ 'ಅಮ್ಮ' ನ ತೋಟದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದ್ದಾರೆ. ತಮ್ಮ ಚಿತ್ರ ತಂಡ ಹುಡುಗರ ಜೊತೆಗೆ ಎತ್ತಿನ ಗಾಡಿಯಲ್ಲಿ ಗಣಪತಿಯನ್ನ ಕೂಡ ತೆಗೆದುಕೊಂಡು ಬಂದು ಹಬ್ಬ ಮಾಡಲಾಗಿದೆ. ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ ಗಣೇಶನಿಗೆ ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ಗಣೇಶ ಹಬ್ಬದ ಈ ಒಂದು ಸಂಭ್ರಮವನ್ನ ಸುಂದರವಾಗಿಯೆ ಕ್ಯಾಪ್ಚರ್ ಕೂಡ ಮಾಡಿದ್ದು, ಗಣೇಶ ವಿಸರ್ಜನೆ ವೇಳೆ ಡೈರೆಕ್ಟರ್ ಪ್ರೇಮ್ ಭರ್ಜರಿ ಡಾನ್ಸ್ ಮಾಡಿದ್ದಾರೆ.