ಕನ್ನಡ ಬಿಗ್ ಸ್ಟಾರ್‌ಗಳು ಪರಭಾಷೆ ನಿರ್ಮಾಪಕರ ಪಾಲು.. ರಿಷಬ್, ಸುದೀಪ್, ಯಶ್ ಕನ್ನಡಕ್ಕೆ ಸಿಗ್ತಿಲ್ಲ ಯಾಕೆ?

ಕನ್ನಡದ ಸೂಪರ್ ಸ್ಟಾರ್ ಗಳೆಲ್ಲಾ ಪರಭಾಷಿಕರ ಪಾಲಾಗಿದ್ದಾರಾ..? ಇವರ ಸಿನಿಮಾಗಳ ಲಿಸ್ಟ್ ನೋಡಿದ್ರೆ ಹಾಗೇ ಅನ್ನಿಸುತ್ತೆ. ಇತ್ತೀಚಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ರು. ಅದನ್ನ ನಿರ್ಮಿಸ್ತಾ ಇರೋದು ತೆಲುಗಿನ ಸಿತಾರಾ ಎಂಟರ್​ಟೈನ್​ಮೆಂಟ್ ಸಂಸ್ಥೆ. 

Share this Video
  • FB
  • Linkdin
  • Whatsapp

ಕನ್ನಡ ಸಿನಿರಂಗದಲ್ಲಿ ಇರೋ ಬಿಗ್ ಸ್ಟಾರ್​ಗಳು ಕೆಲವೇ ಕೆಲವರು. ಆದ್ರೆ ಆ ಕೆಲವೇ ಕೆಲವು ತಾರೆಯರೀಗ ಕನ್ನಡ ನಿರ್ಮಾಪಕರ ಕೈಗೆ ಸಿಕ್ತಾ ಇಲ್ಲ. ಇರೋ ಬರೋ ತಾರೆಯರೆಲ್ಲಾ ಪರಭಾಷಾ ನಿರ್ಮಾಣ ಸಂಸ್ಥೆಗಳ ಜೊತೆ ಕೈ ಜೋಡಿಸ್ತಾ ಇರೋದ್ಯಾಕೆ..? ಆ ಕುರಿತ ಇನ್​ಸೈಡ್ ಇಲ್ಲಿದೆ ನೋಡಿ.

ಹೌದು, ಕನ್ನಡದ ಸೂಪರ್ ಸ್ಟಾರ್ ಗಳೆಲ್ಲಾ ಪರಭಾಷಿಕರ ಪಾಲಾಗಿದ್ದಾರಾ..? ಇವರ ಸಿನಿಮಾಗಳ ಲಿಸ್ಟ್ ನೋಡಿದ್ರೆ ಹಾಗೇ ಅನ್ನಿಸುತ್ತೆ. ಇತ್ತೀಚಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ರು. ಅದನ್ನ ನಿರ್ಮಿಸ್ತಾ ಇರೋದು ತೆಲುಗಿನ ಸಿತಾರಾ ಎಂಟರ್​ಟೈನ್​ಮೆಂಟ್ ಸಂಸ್ಥೆ. ನಿರ್ದೇಶಕ ಕೂಡ ತೆಲುಗಿನವರೇ.

ಹೌದು ಇದೊಂದೇ ಅಲ್ಲ ರಿಷಬ್ ಕಮಿಟ್ ಆಗಿರೋ ಮುಂದಿನ ಮೂರೂ ಸಿನಿಮಾಗಳಿಗೆ ಪರಭಾಷಿಕರೇ ನಿರ್ಮಾಪಕರು. ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ದಲ್ಲಿ ಚಿತ್ರದಲ್ಲಿ ರಿಷಬ್ ಹನುಮಂತನ ಪಾತ್ರ ಮಾಡ್ತಾ ಇದ್ದು, ಈ ಸಿನಿಮಾವನ್ನ ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡ್ತಾ ಇದೆ.

ಇನ್ನೂ ರಿಷಬ್ ನಟಿಸ್ತಾ ಇರೋ ಛತ್ರಪತಿ ಮಹಾರಾಜ್ ಚಿತ್ರವನ್ನ ಬಾಲಿವುಡ್ ನಿರ್ಮಾಣ ಸಂಸ್ಥೆ ಪ್ರೊಡ್ಯುಸ್ ಮಾಡ್ತಾ ಇದೆ. ಅಲ್ಲಿಗೆ ಮುಂದಿನ ಮೂರು ವರ್ಷ ಕನ್ನಡ ನಿರ್ಮಾಪಕರ ಕೈಗೆ ಕಾಂತಾರ ಸ್ಟಾರ್ ಸಿಗಲ್ಲ.

ಕಿಚ್ಚ ಸುದೀಪ್​ರ ಹಿಂದಿನ ಚಿತ್ರ ಮ್ಯಾಕ್ಸ್​ನ ನಿರ್ಮಾಣ ಮಾಡಿದ್ದು ತಮಿಳು ನಿರ್ಮಾಪಕ ಕಲೈಪುಲಿ ಧನು. ಇದೀಗ ಕಿಚ್ಚನ ಮುಂದಿನ ಸಿನಿಮಾ ಕೆ-47 ನಿರ್ಮಾಣ ಮಾಡ್ತಾ ಇರೋದು ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲಂಸ್.

ಬಾಲಿವುಡ್ ನಿರ್ಮಾಪಕರ ಜೊತೆ ರಾಕಿಂಗ್ ಸ್ಟಾರ್
ಯೆಸ್ ರಾಕಿಂಗ್ ಸ್ಟಾರ್ ಯಶ್ ರ ಟಾಕ್ಸಿಕ್ ಸಿನಿಮಾವನ್ನ ಕೆವಿಎನ್ ಪಿಕ್ಚರ್ಸ್ ನಿರ್ಮಿಸ್ತಾ ಇದೆ. ಅದನ್ನ ಬಿಟ್ರೆ ಎರಡು ಭಾಗಗಳ ರಾಮಾಯಣ ನಿರ್ಮಾಣ ಮಾಡ್ತಾ ಇರೋದು ಬಾಲಿವುಡ್ ಪ್ರೊಡ್ಯುಸರ್ ನಮೀತ್ ಮಲ್ಹೋತ್ರಾ.

ಅಲ್ಲಿಗೆ ಕನ್ನಡದ ದೊಡ್ಡ ದೊಡ್ಡ ತಾರೆಯರೆಲ್ಲಾ ಪರಭಾಷಾ ನಿರ್ಮಾಣ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡ್ತಾ ಇದ್ದ ರೆಗ್ಯೂಲರ್ ಪ್ರೊಡ್ಯುಸರ್ಸ್ ಸಿನಿಮಾಗಳಿಂದಲೇ ದೂರ ಉಳಿದಿದ್ದಾರೆ. ಹೀಗೆ ನಮ್ಮ ತಾರೆಯರು ಪರಭಾಷಾ ನಿರ್ಮಾಪಕರ ಜೊತೆಗೆ ಕೈ ಜೋಡಿಸ್ತಾ ಇರೋದ್ಯಾಕೆ..? ಹೆಚ್ಚು ಸಂಭಾವನೆ ಸಿಕ್ಕುತ್ತೆ ಅಂತಾನಾ..? ಅಥವಾ ಇವರ ಲೆವೆಲ್​ನ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸೋಕೆ ಕನ್ನಡ ನಿರ್ಮಾಪಕರಿಗೆ ಶಕ್ತಿ ಇಲ್ಲ ಅಂತಾನಾ..?

ಗೊತ್ತಿಲ್ಲ.. ಒಟ್ನಲ್ಲಿ ಕನ್ನಡದ ಸ್ಟಾರ್ಸ್ ಈಗ ಪರಭಾಷಿಕರ ಪಾಲಾಗಿರೋದಂತೂ ಸತ್ಯ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Related Video