
ಮತ್ತೆ ಒಂದಾದ ಕಿಲಾಡಿ ಜೋಡಿ ರಿಷಬ್-ತಾರಕ್ ! ವೇದಿಕೆಯಲ್ಲಿ ಕುಂದಾಪುರ ಕಲಿಗಳ ಸಮಾಗಮ..!
ರಿಷಬ್ ಶೆಟ್ಟಿ ಈಗ ಚಿತ್ರ ಜಗತ್ತಿನ ಡಾರ್ಲಿಂಗ್.. ಒಂದು ಕಡೆ ರಾಕಿಂಗ್ ಸ್ಟಾರ್ ಯಶ್ ಹೇಗೆ ಪರಭಾಷಾ ಸ್ಟಾರ್ಸ್ಗಳ ಮನಸ್ಸು ಗೆಲ್ಲುತ್ತಾ ಹೋಗುತ್ತಿದ್ದಾರೋ. ಹಾಗೆ ಮತ್ತೊಂದು ಕಡೆ ರಿಷಬ್ ಶೆಟ್ಟಿ ನಮ್ಮ ಅಕ್ಕ ಪಕ್ಕದ ರಾಜ್ಯದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹಾರ್ಟ್ನಲ್ಲಿ ಜಾಗ ಭದ್ರ ಮಾಡಿಕೊಂಡಿದ್ದಾರೆ.
ಟಾಲಿವುಡ್ಸೂಪರ್ ಸ್ಟಾರ್ ಜ್ಯೂನಿಯರ್ಜೂ. ಎನ್‌ಟಿಆರ್(Jr NTR) ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಾರಂತೆ. ಕಾಂತಾರದಲ್ಲಿ ಜ್ಯೂನಿಯರ್ ಎನ್‌ಟಿಆರ್ ನಟಿಸಿದ್ದಾರಂತೆ. ಜ್ಯೂನಿಯರ್ ಎನ್‌ಟಿಆರ್ ಹಾಗು ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಮ್ಮ ಶೆಟ್ರು ಕಾಣಿಸುತ್ತಾರಂತೆ. ಹೀಗೆ ಜ್ಯೂನಿಯರ್ ಎನ್‌ಟಿಆರ್ ಹಾಗು ರಿಷಬ್ ಶೆಟ್ರು ಬಗ್ಗೆ ತರಹೇವಾರಿ ಕಥೆ ಕವನಗಳೆಲ್ಲಾ ಸೃಷ್ಟಿಯಾಗಿದ್ವು. ಅವರೆಲ್ಲರ ಹಾರೈಕೆಯೋ ಏನೋ.. ರಿಷಬ್ ಶೆಟ್ರು ತಂಡದ ಜೊತೆ ತಾರಕ್ ಪ್ರತ್ಯಕ್ಷರಾಗಿದ್ದಾರೆ. ಅದು ಯಾಕೆ ಅಂತ ಗೊತ್ತಾ..? ಇಲ್ಲಿದೆ ನೋಡಿ..
ರಿಷಬ್ ಶೆಟ್ಟಿ ಈಗ ಚಿತ್ರ ಜಗತ್ತಿನ ಡಾರ್ಲಿಂಗ್.. ಒಂದು ಕಡೆ ರಾಕಿಂಗ್ ಸ್ಟಾರ್ ಯಶ್ ಹೇಗೆ ಪರಭಾಷಾ ಸ್ಟಾರ್ಸ್ಗಳ ಮನಸ್ಸು ಗೆಲ್ಲುತ್ತಾ ಹೋಗುತ್ತಿದ್ದಾರೋ. ಹಾಗೆ ಮತ್ತೊಂದು ಕಡೆ ರಿಷಬ್ ಶೆಟ್ಟಿ ನಮ್ಮ ಅಕ್ಕ ಪಕ್ಕದ ರಾಜ್ಯದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹಾರ್ಟ್ನಲ್ಲಿ ಜಾಗ ಭದ್ರ ಮಾಡಿಕೊಂಡಿದ್ದಾರೆ. ರಿಷಬ್ ಹೃದಯದಲ್ಲಿ ಭದ್ರವಾಗಿರೋ ಸ್ಟಾರ್ರಲ್ಲೊಬ್ಬರು ಜ್ಯೂನಿಯರ್ ಎನ್‌ಟಿಆರ್..
ಯೆಸ್, ಜ್ಯೂನಿಯರ್ ಎನ್‌ಟಿಆರ್. ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಪ್ಪ ಅಪ್ಪಟ ಸ್ನೇಹಿತ. ಈ ತಾರಕ್ ರಾಮ್ ಅಪ್ಪುಗಾಗಿ ಗೆಳೆಯಾ ಗೆಳೆಯಾ ಅಂತ ಸಾಂಗ್ ಹಾಡಿ ಹೋಗಿದ್ದನ್ನ ಎಂದಾದ್ರು ಮರೆಯೋಕೆ ಸಾಧ್ಯನಾ..
( ಜ್ಯೂಎನ್ಟಿಆರ್ ಹಾಡಿರೋ ಕನ್ನಡದ ಗೆಳೆಯಾ ಸಾಂಗ್ ಫ್ಲೊ..)
ರಿಷಬ್ ಶೆಟ್ಟಿ ಜ್ಯೂನಿಯರ್ ಎನ್‌ಟಿಆರ್ ಇದೀಗ ಮತ್ತೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅದು ಕಾಂತಾರದ ವೇದಿಕೆ ಮೇಲೆ ಕುಂದಾಪುರದ ಈ ಖಲಿಗಳು ಮಿಂಚಿದ್ದಾರೆ. ಹೈದರಾಬ್ನಲ್ಲಿ ಕಾಂತಾರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದ್ದು, ನಟ ರಿಷಬ್ ಶೆಟ್ಟಿಯ ಗೆಲುವಿಗಾಗಿ ಗೆಳೆಯ ಜ್ಯೂ,ಎನ್‌ಟಿಆರ್ ಗೆಸ್ಟ್ ಆಗಿ ಬಂದು ಇಡೀ ಕಾಂತಾರ ತಂಡದ ಬೆನ್ನು ತಟ್ಟಿದ್ದಾರೆ..
ಜ್ಯೂನಿಯರ್ ಎನ್‌ಟಿಆರ್ ರಕ್ತದಲ್ಲಿ ಕರ್ನಾಟಕದ ನಂಟಿದೆ. ತಾರಕ್ ರಾಮ್ ತಾಯಿ ಹುಟ್ಟಿದ್ದು ಕರ್ನಾಟಕದ ಉಡುಪಿಯ ಕುಂದಾಪುರದಲ್ಲಿ. ಹೀಗಾಗಿ ಜ್ಯೂ,ಎನ್ಟಿಆರ್ಗೆ ಕನ್ನಡದ ನಂಟು ರಕ್ತಗತವಾಗೆ ಬಂದಿದೆ. ಕನ್ನಡಿಗರ ಮೇಲೆ ಅಪಾರ ಪ್ರೀತಿ ಅಭಿಮಾನ ಬೆಳೆಸಿಕೊಂಡಿರೋ ಜ್ಯೂನಿಯರ್ ಎನ್‌ಟಿಆರ್ ಕನ್ನಡಿಗರ ದೊಡ್ಡ ಕನಸು ಕಾಂತಾರ ಅಧ್ಯಾಯ ಒಂದರ ಸಕ್ಸಸ್ಗಾಗಿ ಹಾರೈಸಿದ್ದಾರೆ. ಅಷ್ಟೆ ಅಲ್ಲ ಕಾಂತಾರದ ಸೂತ್ರಧಾರಿ ರಿಷಬ್ ಶೆಟ್ಟಿ ಜೊತೆಗಿನ ಸ್ನೇಹವನ್ನೂ ಮೆಲುಕು ಹಾಕಿದ್ರು..
ಕಾಂತಾರ ಚಾಪ್ಟರ್ ಒನ್ ಸಿನಿಮಾ ಶೂಟಿಂಗ್ ನಡೆಯುವಾಗ್ಲೆ ಟಾಲಿವುಡ್ ಸ್ಟಾರ್ ಜ್ಯೂನಿಯರ್ ಎನ್‌ಟಿಆರ್ ಉಡುಪಿಗೆ ಬಂದಿದ್ರು. ತನ್ನ ಅಮ್ಮ ಶಾಲಿನಿ ಅವರು ಕುಂದಾಪುರದವರೇ ಆಗಿರೋದ್ರಿಂದ ಉಡುಪಿ ಶ್ರೀ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿ ಎಂದೋ ಮಾಡಿದ್ದ ಹರಕೆಗಳನ್ನ ತೋರಿಸಿದ್ರು. ಆಗ ನಟ ರಿಷಬ್ ಶೆಟ್ಟಿ ದಂಪತಿ
ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಜ್ಯೂ,ಎನ್‌ಟಿಆರ್ ರನ್ನ ಸ್ವಾಗತಿಸಿದ್ರು. ಇಡೀ ಫ್ಯಾಮಿಲಿಗೆ ಅಥಿತಿ ಸತ್ಕಾರ ಮಾಡಿ, ದೇಗುಲಗಳ ದರ್ಶನದಲ್ಲಿ ಜೊತೆಯಾಗಿದ್ರು. ಅಷ್ಟೆ ಅಲ್ಲ ತನ್ನೂರಾದ ಕೆರಾಡಿಯನ್ನೂ ಜ್ಯೂನಿಯರ್ ಎನ್ಟಿಆರ್ಗೆ ಪರಿಚಯಿಸಿದ್ರು ರಿಷಬ್...
ಕಾಡುಬೆಟ್ಟದ ಶಿವನನ್ನು ಮೆಚ್ಚಿದ್ದ ಜ್ಯೂ,ಎನ್‌ಟಿಆರ್..!
ಈ ಹಿಂದೆ ಕಾಂತಾರ ಸಿನಿಮಾ ಬಂದಾಗ ಜ್ಯೂನಿಯರ್ ಎನ್‌ಟಿಆರ್ ಆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ರು. ಅಷ್ಟೆ ಅಲ್ಲ ರಿಷಬ್ರನ್ನ ಕೆರಾಡಿಯಲ್ಲಿ ಭೇಟಿ ಮಾಡಿದಾಗ ನನಗೆ ರಿಷಬ್ ಶೆಟ್ಟಿ ದೇವರು ಕೊಟ್ಟ ಗೆಳೆಯ ಅಂತ ಹೇಳಿದ್ರು. ಇದಾದ್ಮೇಲೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ. ಕಾಂತಾರ ಚಾಪ್ಟರ್ ಒಂದರಲ್ಲಿ ಜ್ಯೂಎನ್ಟಿಆರ್ ನಟಿಸುತ್ತಿದ್ದಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಆದ್ರೆ ಅದು ಸತ್ಯಕ್ಕೆ ದೂರಾದ ಮಾತು. ಈಗ ಕಾಂತಾರ ದಂತಕತೆಯನ್ನ ತನ್ನ ಆಂಧ್ರ ನಾಡಿನ ಮಂದಿಗೆ ತೋರಿಸೋಕೆ ಜ್ಯೂ,ಎನ್‌ಟಿಆರ್ ಕಾಂತಾರ ವೇಧಿಕೆ ಹತ್ತಿದ್ದು, ಆಂಧ್ರದಲ್ಲೂ ಕಾಂತಾರದ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಈ ಸಿನಿಮಾವನ್ನ ನಮ್ಮ ತೆಲುಗು ಮಂದಿ ಗೆಲ್ಲಿಸುತ್ತಾರೆ ಅಂತ ತಾರಕ್ ರಾಮ್ ರಿಷಬ್‌ಗೆ ಭರವಸೆ ಕೊಟ್ಟಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ!