ಐಪಿಎಲ್‌ನಲ್ಲೂ ಜೋರಾಗಿದೆ ಪಂಜುರ್ಲಿ ಹವಾ: ಆರ್‌ಆರ್‌ ವಿರುದ್ಧ ಆರ್‌ಸಿಬಿ ಗೆಲ್ಲಲು ದೈವವೇ ಕಾರಣನಾ ?

ಇತ್ತೀಚೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಆರ್‌ಆರ್ ನಡುವೆ  ಪಂದ್ಯ ನಡೆದಿತ್ತು. ಈ ಮ್ಯಾಚ್‌ನನ್ನು ಆರ್‌ಸಿಬಿ ಗೆದ್ದಿದ್ದು, ಇದಕ್ಕೆ ಪಂಜುರ್ಲಿ ದೈವ ಕಾರಣ ಎನ್ನಲಾಗ್ತಿದೆ.

Share this Video
  • FB
  • Linkdin
  • Whatsapp

ಐಪಿಎಲ್‌ನಲ್ಲೂ ಕಾಂತಾರ ಹವಾ ಜೋರಾಗಿದ್ದು, ಆರ್‌ಆರ್‌ ವಿರುದ್ಧ ಆರ್‌ಸಿಬಿ ಗೆಲ್ಲಲು ಪಂಜುರ್ಲಿ ಕಾರಣ ಎಂದು ಹೇಳಲಾಗುತ್ತಿದೆ. ಪಂಜುರ್ಲಿ ದೈವ ಕರಾವಳಿ ಜನರ ಆರಾಧ್ಯ ದೈವವಾಗಿದೆ. ಈ ದೈವವನ್ನು ನಂಬಿ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಮಾಡಿ, ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಸಿನಿಮಾ ಬಂದ ನಂತರ ಪಂಜುರ್ಲಿ ಆರಾಧಿಸುವವರ ಸಂಖ್ಯೆ ಸಹ ಹೆಚ್ಚಾಗಿದೆ. ಇತ್ತೀಚೆಗಷ್ಟೇ ನಡೆದ ಆರ್‌ಆರ್‌ ಮತ್ತು ಆರ್‌ಸಿಬಿ ನಡುವಿನ ಐಪಿಎಲ್‌ ಪಂದ್ಯದಲ್ಲಿ, ಪಂಜುರ್ಲಿ ವೇಷದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬ ಎಂಟ್ರಿ ಕೊಟ್ಟಿದ್ದ. ಅಲ್ಲದೇ ವರಾಹ ರೂಪಂ ಹಾಡನ್ನು ಹಾಕಲಾಗಿತ್ತು. ಹಾಗಾಗಿ ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲಲು ಪಂಜುರ್ಲಿ ದೈವ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ವೀಕ್ಷಿಸಿ: ಯ್ಯೂಟೂಬ್‌ನಿಂದ ಮಾರ್ಟಿನ್‌ ಟೀಸರ್‌ ಡಿಲೀಟ್‌: ಹ್ಯಾಕರ್ಸ್‌ ಕೈವಾಡದ ಶಂಕೆ

Related Video