
ರಿಷಬ್ ಜೊತೆ ಗುದ್ದಾಡಿದ 'ಕಾಂತಾರ' ವಿಲನ್ ಗುಟ್ಟು ರಟ್ಟಾಯ್ತು; ದೈತ್ಯ ಪ್ರತಿಭೆ ಇವ್ರೇ ನೋಡಿ!
ಕಾಂತಾರ ಟ್ರೈಲರ್ ನೋಡಿದ್ರೆ ರಿಷಬ್ ಶೆಟ್ಟಿ ಮತ್ತೆ ಮ್ಯಾಜಿಕ್ ಮಾಡಿದ್ದಾರೆ ಅನ್ನೋ ಸತ್ಯ ರಿವಿಲ್ ಆಗುತ್ತೆ. ಕೋಟಿ ಕೋಟಿ ಹಣ ಸುರಿದು ದಟ್ಟ ಕಾಡಿನ ಮಧ್ಯೆ ಸೆಟ್ಹಾಕಿ ಹೊಸ ಪ್ರಪಂಚ ಕಟ್ಟಿದ್ದಾರೆ. ರಿಷಬ್ ಶೆಟ್ಟಿ ಜೊತೆ ನಟಿಸಿರೋ ಖಳ ನಟ ರಾಘವೇಂದ್ರ ಕಾಂತಾರ ಸೆಟ್ ನೋಡಿ ದಂಗಾಗಿ ಹೋಗಿದ್ರಂತೆ..
ಚಿತ್ರ ರಸಿಕರ ಕಣ್ಮನ ಸೆಳೆಯೋಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ರೆಡಿ ಆಗಿದ್ದಾರೆ. ಇನ್ನೇನು ಮುಂದಿನ ವಾರ ಕಾಂತಾರ ಭಾಗ ಒಂದು (Kantara Chapter 1) ವಿಶ್ವದಾದ್ಯಂತ ಬಂದು ಬಿಡುತ್ತೆ. ಕಾಂತಾರದಲ್ಲಿ ರಿಷಬ್ ಆ್ಯಕ್ಷನ್ ಅಬ್ಬರ ನೋಡಿ ಡಿವೈನ್ ಆ್ಯಕ್ಷನ್ ಅಂತ ಹೇಳುತ್ತಿದ್ದಾರೆ. ಆದ್ರೆ ರಿಷಬ್ ಜೊತೆ ಗುದ್ದಾಡೋ ಎದುರಾಳಿ ಯಾರು ಅನ್ನೋ ಕುತೂಹಲದ ಮೂಟೆ ಎಲ್ಲರಲ್ಲೂ ಇದೆ. ಅದಕ್ಕೆ ಒಂದು ದೊಡ್ಡ ಉತ್ತರ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಎಕ್ಸ್ಕ್ಲ್ಯೂಸೀವ್ ಆಗಿ ಸಿಕ್ಕಿದೆ. ಶೆಟ್ರು ಜೊತೆ ತೊಡೆ ತಟ್ಟಿರೋ ಆ ವಿಲನ್ ಇವರೇ...
ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ 'ಕಾಂತಾರ' ವಿಲನ್ರಿವಿಲ್; ರಿಷಬ್ ಶೆಟ್ಟಿ ಜೊತೆ ಗುದ್ದಾಡಿದ್ದಾರೆ ಕಾಟೇರ ಚಿತ್ರದ ದೈತ್ಯ ಪ್ರತಿಭೆ!
ಯೆಸ್, ಕಾಟೇರ ಸಿನಿಮಾದ ಈ ಆ್ಯಕ್ಷನ್ ದೃಶ್ಯ ದರ್ಶನ್ಫ್ಯಾನ್ಸ್ ಗೆ ಇನ್ನಿಲ್ಲದ ಕಿಕ್ ಕೊಟ್ಟಿತ್ತು. ಈ ಸೀನ್ನಲ್ಲಿ ದರ್ಶನ್ಗೆ ಅವಾಜ್ ಹಾಕಿದ್ದ ವಿಲನ್ ರಾಘವೇಂದ್ರ ಎಸ್ ಹೊಂಡದಕೇರಿ. ರಾಘವೇಂದ್ರ ಕಾಟೇರದ ಈ ಆ್ಯಕ್ಷನ್ ದೃಶ್ಯದಲ್ಲಿ ಬಂದು ಹೋದ್ರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ರು. ಈಗ ಇದೇ ದೈತ್ಯ ಪ್ರತಿಭೆ ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್ ಒನ್ ಸಿನಿಮಾದಲ್ಲಿ ರಗಡ್ ಆಗಿರೋ ಖಳ ನಾಯಕನ ಪಾತ್ರ ಮಾಡಿದ್ದಾರೆ..
ಕಾಂತಾರ ಟ್ರೈಲರ್ ನೋಡಿದ್ರೆ ರಿಷಬ್ ಶೆಟ್ಟಿ ಮತ್ತೆ ಮ್ಯಾಜಿಕ್ ಮಾಡಿದ್ದಾರೆ ಅನ್ನೋ ಸತ್ಯ ರಿವಿಲ್ ಆಗುತ್ತೆ. ಕೋಟಿ ಕೋಟಿ ಹಣ ಸುರಿದು ದಟ್ಟ ಕಾಡಿನ ಮಧ್ಯೆ ಸೆಟ್ಹಾಕಿ ಹೊಸ ಪ್ರಪಂಚ ಕಟ್ಟಿ ಕಾಂತಾರದ ಚಿತ್ರೀಕರಣ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಸ್ಕ್ರೀನ್ ಹಂಚಿಕೊಂಡಿರೋ ಖಳ ನಟ ರಾಘವೇಂದ್ರ ಕಾಂತಾರ ಸೆಟ್ ನೋಡಿ ದಂಗಾಗಿ ಹೋಗಿದ್ರಂತೆ..
ರಾಘವೇಂದ್ರ ಎಸ್ ಹೊಂಡದಕೇರಿ ಬರಿ ನಟ ಮಾತ್ರವಲ್ಲ ಬಾಡಿ ಬಿಲ್ಡರ್ ಕೂಡ ಹೌದು. 6.4 ಅಡಿ ಎತ್ತರ, 124 ಕೆಜಿ ತೂಕ ಇರೋ ಈ ಆಜಾನ ಬಾಹು. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಮ್ಯೂಟಂಟ್ ರಘು ಎಂದೇ ಫೇಮಸ್. ಕ್ರಾಂತಿ, ಗರಡಿ, ಕಾಟೇರ ಸಿನಿಮಾಗಳಲ್ಲಿ ಖಳ ನಟನಾಗಿ ಮಿಂಚಿರೋ ರಘು, ಈಗ ದೃವನ ಕೆಡಿ, ಮೋಹನ್ ಲಾಲ್ರ ವೃಷಭ, ಕಾಂತಾರ ಚಾಪ್ಟರ್ ಒನ್, ಸ್ಟೋರಿ ಆಫ್ ಹಸ್ತಿನಾ ಪುರ, ಬರ್ಮ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಅಧ್ಯಾಯ ಒಂದು ಸಿನಿಮಾ ರಾಘವೇಂದ್ರಗೆ ಬಣ್ಣನ ಜಗತ್ತಿನಲ್ಲಿ ದೊಡ್ಡ ಸಕ್ಸಸ್ ತಂದುಕೊಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಕಾಂತಾರಕ್ಕೆ ಬರೋದಾದ್ರೆ, ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ಗೆ ಕೌಂಟ್ಡೌನ್ ಸ್ಟಾರ್ಟ್ಆಗಿದೆ. ಸೆಪ್ಟೆಂಬರ್ 29 ರಿಂದ ರಿಂದ ಆನ್ ಲೈನ್ಟಿಕೆಟ್ ಬುಕ್ಕಿಂಗ್ಆರಂಭ ಆಗುತ್ತೆ ಅಂತ ಹೇಳಲಾಗ್ತಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ...