Puneeth ಸಮಾಧಿ ಬಳಿ ಸಪ್ತಪದಿ ತುಳಿಯಲು ಮುಂದಾದ ಜೋಡಿ, ನೇತ್ರದಾನಕ್ಕೆ ಸಾವಿರಾರು ಮಂದಿ ನೋಂದಣಿ

ಪುನೀತ್‌ ರಾಜ್‌ಕುಮಾರ್‌ ಸಮಾಧಿ ದರ್ಶನಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಲೇ ಇದೆ. ಒಬ್ಬೊಬ್ಬರದ್ದು ಒಂದೊಂದು ರೀತಿ ಅಭಿಮಾನ. ತಿಪಟೂರು ತಾಲೂಕಿನ ವಿವೇಕಾನಂದ ನಗರದಲ್ಲಿ ತಂದೆ, ಮಗ ಇಬ್ಬರೂ ಕೇಶಮುಂಡನ ಮಾಡಿಸಿಕೊಂಡು ನಟ ಪುನೀತ್‌ ರಾಜ್‌ಕುಮಾರ್‌ ಅವರ ತಿಥಿ ಕಾರ್ಯ ನೆರವೇರಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.07): ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಸಮಾಧಿ ದರ್ಶನಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಲೇ ಇದೆ. ಒಬ್ಬೊಬ್ಬರದ್ದು ಒಂದೊಂದು ರೀತಿ ಅಭಿಮಾನ. ತಿಪಟೂರು ತಾಲೂಕಿನ ವಿವೇಕಾನಂದ ನಗರದಲ್ಲಿ ತಂದೆ, ಮಗ ಇಬ್ಬರೂ ಕೇಶಮುಂಡನ ಮಾಡಿಸಿಕೊಂಡು ನಟ ಪುನೀತ್‌ ರಾಜ್‌ಕುಮಾರ್‌ ಅವರ ತಿಥಿ ಕಾರ್ಯ ನೆರವೇರಿಸಿದ್ದಾರೆ.

ಇಂದು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್‌ಗೆ ಶ್ರದ್ಧಾಂಜಲಿ

ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ಬಳಿ ಸಪ್ತಪದಿ (Wedding) ತುಳಿಯಲು ನವಜೋಡಿ ಮುಂದಾಗಿದ್ದು ಅನುಮತಿ ಸಿಗದ ಪರಿಣಾಮ ಕಂಠೀರವ ಸ್ಟುಡಿಯೋ ಪಕ್ಕದಲ್ಲಿರುವ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾರೆ. ಇನ್ನು ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ನಂತರ ಅವರ ಕಣ್ಣುಗಳನ್ನು ಕುಟುಂಬ ಸದಸ್ಯರು ದಾನ ಮಾಡಿದ್ದು ಮತ್ತು ಆ ಕಣ್ಣುಗಳು ನಾಲ್ವರು ಅಂಧರಿಗೆ ಬೆಳಕು ನೀಡಿರುವುದು ರಾಜ್ಯದಲ್ಲಿ ನೇತ್ರದಾನದ ಹೊಸ ಪರಂಪರೆಯನ್ನೇ ಸೃಷ್ಟಿಸಿದೆ. ರಾಜ್ಯದ ಕಣ್ಣಿನ ಆಸ್ಪತ್ರೆಗಳಿಗೆ ನೇತ್ರದಾನ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದಾರೆ.

Related Video