ಇಂದು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್‌ಗೆ ಶ್ರದ್ಧಾಂಜಲಿ

ಇಂದು ಸಂಜೆ 6 ಗಂಟೆಗೆ ರಾಜ್ಯದ ಎಲ್ಲ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್‌ ನಮನ ಕಾರ್ಯಕ್ರಮ ನಡೆಯಲಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 07): ಇಂದು ಸಂಜೆ 6 ಗಂಟೆಗೆ ರಾಜ್ಯದ ಎಲ್ಲ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ (Theatre) ಏಕಕಾಲಕ್ಕೆ ಪುನೀತ್‌ ನಮನ (Puneeth Namana) ಕಾರ್ಯಕ್ರಮ ನಡೆಯಲಿದೆ. 

ಚಿತ್ರಪ್ರದರ್ಶಕರ ಸಂಘದ ವತಿಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಮೊಂಬತ್ತಿ ಬೆಳಗಿಸಿ, ಪುನೀತ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಈ ವೇಳೆ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್‌ ರಚಿಸಿರುವ ಪುನೀತ್‌ ಕುರಿತ ಹಾಡನ್ನು ಹಾಡಲಾಗುತ್ತದೆ. ಥಿಯೇಟರ್‌ನ ಸಿಬ್ಬಂದಿ, ಅಭಿಮಾನಿಗಳು ಈ ರೀತಿ ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. 

ಅದೇ ರೀತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನ.16ರಂದು ನಡೆಯುವ ‘ಪುನೀತ ನಮನ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ರಜನೀಕಾಂತ್‌, ಕಮಲಹಾಸನ್‌, ಧನುಷ್‌, ಚಿರಂಜೀವಿ, ವಿಶಾಲ್‌ ಮೊದಲಾದವರಿಗೆ ಈಗಾಗಲೇ ಆಹ್ವಾನ ನೀಡಲಾಗಿದ್ದು, ಅವರು ಭಾಗವಹಿಸುವ ನಿರೀಕ್ಷೆ ಇದೆ.

Related Video