ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷ; ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಲಿಕ್ಕೆ ಇನ್ನೆಷ್ಟು ವರ್ಷ?
ರೇಣುಕಾಸ್ವಾಮಿ ಕೊಲೆ ಆದಾಗ ಆತನ ಪತ್ನಿ ಸಹನಾ 5 ತಿಂಗಳ ಗರ್ಭಿಣಿ. ಪತಿಯ ಸಾವು ಸಹನಾಗೆ ದೊಡ್ಡ ಆಘಾತ ತಂದಿತ್ತು. ಸದ್ಯ ಮುದ್ದಾದ ಗಂಡು ಮಗುವಿಗೆ ತಾಯಿಯಾಗಿರೋ ಸಹನಾ, ಮುಂದಿನ ದಿನಗಳಲ್ಲಿ ತಾನು ಮತ್ತು ತನ್ನ ಮಗುವಿಗೆ ಒಂದು ದಾರಿ ಮಾಡಿಕೊಡಿ ಅಂತ ಸರ್ಕಾರವನ್ನ ಪ್ರಾರ್ಥಿಸ್ತಾ ಇದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ 1 ವರ್ಷ ಪೂರ್ಣವಾಯಿತು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಮೇಲೆ ಈ ಕೊಲೆಯ ಆರೋಪ ಕೇಳಿ ಬಂತು. ದರ್ಶನ್ ಆರು ತಿಂಗಳು ಜೈಲುವಾಸ ಅನುಭವಿಸಿ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಇನ್ನೇನು ಶೂಟಿಂಗ್ಗಾಗಿ ವಿದೇಶಕ್ಕೆ ಹಾರೋದಕ್ಕೂ ಸಜ್ಜಾಗಿದ್ದಾರೆ. ಇತ್ತ ರೇಣುಕಾಸ್ವಾಮಿ ಕುಟುಂಬ ಮಾತ್ರ ನ್ಯಾಯಕ್ಕಾಗಿ ಕಾಯ್ತಾನೇ ಇದೆ. ಒಂದು ವರ್ಷ ಕಳೀತು.. ಇನ್ನೆಷ್ಟು ವರ್ಷ ಬೇಕು ಅಂತ ಪ್ರಶ್ನೆ ಮಾಡ್ತಾ ಇದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಯ್ತು. ಜೂನ್ 9 , 2024ರಂದು ಬೆಂಗಳೂರಿನ ಸುಮನಹಳ್ಳಿ ಮೋರಿ ಬಳಿಕ ರೇಣುಕಾಸ್ವಾಮಿಯ ಬಾಡಿ ಪತ್ತೆಯಾಗಿತ್ತು. ಹತ್ತಿರದ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಅನಾಥ ಶವ ಬಿದ್ದಿದೆ ಅಂತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಜೂನ್ 10ನೇ ತಾರೀಖು ಕಾರ್ತಿಕ್, ನಿಖಿಲ್ ಮತ್ತು ಕೇಶವ ಮೂರ್ತಿ ಅನ್ನೋ ಮೂವರು ಬಂದು ಪೊಲೀಸರ ಎದುರು ನಾವೇ ಕೊಲೆ ಮಾಡಿದ್ದೀವಿ ಅಂತ ಸರೆಂಡರ್ ಆಗಿದ್ರು. ಆದ್ರೆ ಅವ್ರಿಗೆ ಪೊಲೀಸರು ಟ್ರೀಟ್ಮೆಂಟ್ ಕೊಟ್ಟಾಗಲೇ ಹೊರಬಂದಿದ್ದು ನಟ ದರ್ಶನ್ ಹೆಸರು.
ಬಹುಶಃ ಯಾವುದೇ ಚಿತ್ರರಂಗದಲ್ಲಿ ಸ್ಟಾರ್ ನಟನೊಬ್ಬ ಹೀಗೆ ಕೊಲೆಗೈದು ಸಿನಿಮಾ ಸೆಟ್ನಿಂದಲೇ ಅರೆಸ್ಟ್ ಆಗಿದ್ದು ಅದೇ ಮೊದಲು. ಜೂನ್ 11ನೇ ತಾರೀಖು ದಿ ಡೆವಿಲ್ ಸಿನಿಮಾದ ಸೆಟ್ನಿಂದ ದರ್ಶನ್ನ ಅರೆಸ್ಟ್ ಮಾಡಿ ಪೊಲೀಸ್ ವಶಕ್ಕೆ ಪಡೆಯಲಾಯ್ತು. ಮುಂದೆ ಈ ಕೊಲೆ ಯಾಕೆ ನಡೀತು.. ಏನೇನಾಯ್ತು ಅನ್ನೋ ರೋಚಕ ವಿವರಗಳು ಹೊರಬಂದವು.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಸೋಷಿಯಲ್ ಮಿಡಿಯಾದಲ್ಲಿ ಅಶ್ಲೀಲ ಮೆಸೇಜ್ ಮಾಡ್ತಾ ಇದ್ದ ರೇಣುಕಾನನ್ನ ಚಿತ್ರದುರ್ಗದಿಂದ ದರ್ಶನ್ ಸಹಚರರು ಅಪಹರಿಸಿಕೊಂಡು ಬಂದಿದ್ರು. ಆರ್ ಆರ್ ನಗರದ ಪಟ್ಟಣಗೆರೆ ಶೆಡ್ನಲ್ಲಿ ಬಡಕಲು ರೇಣುಕಾಸ್ವಾಮಿಗೆ ಬರ್ಬರವಾಗಿ ಹಿಂಸೆ ಕೊಡಲಾಗಿತ್ತು. ಖುದ್ದು ದರ್ಶನ್ ಮತ್ತು ಪವಿತ್ರಾ ಮುಂದೆ ನಿಂತು ಹಲ್ಲೆ ಮಾಡಿದ್ದಾರೆ ಅಂತ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಕೇಸ್ನಲ್ಲಿ ದರ್ಶನ್ ಎ2 ಆದ್ರೆ ಪವಿತ್ರಾ ಗೌಡ ಎ-1 ಆಗಿದ್ದಾಳೆ. ಇಬ್ಬರು ಕೂಡ ಆರು ತಿಂಗಳು ಜೈಲುವಾಸ ಅನುಭವಿಸಿ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಪವಿತ್ರಾ ತನ್ನ ಬೂಟಿಕ್ ಬ್ಯುಸಿನೆಸ್ ಮುಂದುವರೆಸ್ತಾ ಇದ್ರೆ, ದರ್ಶನ್ ದಿ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗೆ ವಿದೇಶಕ್ಕೆ ಹೋಗಲು ದರ್ಶನ್ಗೆ ಅನುಮತಿ ಕೂಡ ಸಿಕ್ಕಿದೆ.
ಹೌದು ಕಣ್ಣೆದುರೇ ಬೆಳೆದ ಮಗನನ್ನ ಕಳೆದುಕೊಂಡು ಬದುಕೋದು ಅಷ್ಟು ಸುಲಭ ಅಲ್ಲ. ರೇಣುಕಾಸ್ವಾಮಿ ತಂದೆ ಮತ್ತು ತಾಯಿ ಈಗಲೂ ಕಣ್ಣೀರಿನಲ್ಲಿ ಕೈ ತೊಳೀತಾ ಇದ್ದಾರೆ. ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ ಅಂತ ಗೋಗರೀತಾ ಇದ್ದಾರೆ.
ರೇಣುಕಾಸ್ವಾಮಿ ಕೊಲೆ ಆದಾಗ ಆತನ ಪತ್ನಿ ಸಹನಾ 5 ತಿಂಗಳ ಗರ್ಭಿಣಿ. ಪತಿಯ ಸಾವು ಸಹನಾಗೆ ದೊಡ್ಡ ಆಘಾತ ತಂದಿತ್ತು. ಸದ್ಯ ಮುದ್ದಾದ ಗಂಡು ಮಗುವಿಗೆ ತಾಯಿಯಾಗಿರೋ ಸಹನಾ, ಮುಂದಿನ ದಿನಗಳಲ್ಲಿ ತಾನು ಮತ್ತು ತನ್ನ ಮಗುವಿಗೆ ಒಂದು ದಾರಿ ಮಾಡಿಕೊಡಿ ಅಂತ ಸರ್ಕಾರವನ್ನ ಪ್ರಾರ್ಥಿಸ್ತಾ ಇದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದಕ್ಷವಾಗಿ ತನಿಖೆ ಮಾಡಿರೋ ಪೊಲೀಸರು ಸಾವಿರಾರು ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಇದರ ಹೊರತಾಗಿಯೂ ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳಿಗೆ ಬೇಲ್ ಸಿಕ್ಕಿದೆ. ಎಲ್ಲರೂ ಬೇಲ್ ಪಡೆದು ತಮ್ಮ ಮೊದಲಿನ ಬದುಕಿಗೆ ಮರಳಿದ್ದಾರೆ.
ದರ್ಶನ್ ಬೇಲ್ ವಜಾಗೊಳಿಸಿ ಅಂತ ಸರ್ಕಾರ ಸುಪ್ರೀಂ ಮೊರೆಹೋಗಿದೆ. ಆದ್ರೆ ಅಲ್ಲಿ ಕೂಡ ವಿಳಂಬ ಆಗ್ತಾ ಇದೆ. ಈ ನಡುವೆ ದಿ ಡೆವಿಲ್ ಸಿನಿಮಾ ಶೂಟಿಂಗ್ಗೆ ವಿದೇಶಕ್ಕೆ ಹೋಗಲಿಕ್ಕೆ ದರ್ಶನ್ಗೆ ಅನುಮತಿ ಕೂಡ ಸಿಕ್ಕಾಗಿದೆ.
ಇದನ್ನೆಲ್ಲಾ ನೋಡ್ತಾ ಇದ್ರೆ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಕ್ಕಲಿಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಅನ್ನೋ ಪ್ರಶ್ನೆ ಸಹಜವಾಗೇ ಮೂಡುತ್ತೆ. ರೇಣುಕಾ ಕುಟುಂಬದವರನ್ನಂತೂ ಆ ಪ್ರಶ್ನೆ ಎಡೆಬಿಡದೇ ಕಾಡ್ತಾ ಇದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..