
ಡಾ. ವಿಷ್ಣು ಸ್ಮಾರಕ, 25 ಅಡಿ ಪುತ್ಥಳಿ ನಿರ್ಮಾಣಕ್ಕೆ ಸಂಕಲ್ಪ; ಕಿಚ್ಚ ಸುದೀಪ್ 'ವಿಷ್ಣು' ಭಕ್ತಿಗೆ ಜೈ ಅಂತಿದಾರೆ!
ಬೆಂಗಳೂರಿನ ಕೆಂಗೇರಿ ಬಳಿ ಕಿಚ್ಚ ಖರೀದಿ ಮಾಡಿರೋ ಜಾಗದಲ್ಲಿ ವಿಷ್ಣು ವರ್ಧನ್ರ 25 ಅಡಿ ಪುತ್ಥಳಿ ಎದ್ದು ನಿಲ್ಲಲಿದೆ. ಮುಂದಿನ ತಿಂಗಳ 18ನೇ ತಾರೀಖು ವಿಷ್ಣುವರ್ಧನ್ 75 ನೇ ಹುಟ್ಟುಹಬ್ಬ ಆ ದಿನವೇ ವಿಷ್ಣು ಸ್ಮಾರಕದ ಕೆಲಸಕ್ಕೆ ಅಡಿಗಲ್ಲು ಹಾಕಲಿಕ್ಕೆ ಪ್ಲಾನ್ ಮಾಡಲಾಗಿದೆ.
ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr Vishnuvardhan) ಸಮಾಧಿ ಧ್ವಂಸಗೊಂಡಿದ್ದನ್ನ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದ ಕಿಚ್ಚ ಸುದೀಪ್, ತಮ್ಮದೇ ಜಾಗದಲ್ಲಿ ವಿಷ್ಣು ಸ್ಮಾರಕ ಕಟ್ತಿನಿ ಅನ್ನೋ ಮಾತು ಹಳಿದ್ರು. ಇದೀಗ ಆ ಮಾತಿಗೆ ತಕ್ಕಂತೆ ಕೆಂಗೇರಿ ಬಳಿ ಅರ್ಧ ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಕಿಚ್ಚನ ಕಡೆಯಿಂದ ಬೆಂಗಳೂರಿನಲ್ಲಿ ಒಂದು ವಿಷ್ಣು ಸ್ಮಾರಕ ಎದ್ದು ನಿಲ್ಲಲಿದೆ.
ಕೊನೆಗೂ ಬೆಂಗಳೂರಿನಲ್ಲಿ ಡಾ. ವಿಷ್ಣು ಸ್ಮಾರಕ..!
ಯೆಸ್ ಡಾ.ವಿಷ್ಣುವರ್ಧನ್ ಅಂತ್ಯಕ್ರಿಯೆ ನೆರವೇರಿದ ಅಭಿಮಾನ್ ಸ್ಟುಡಿಯೋದ ಜಾಗದಲ್ಲೇ ಅವರ ಸ್ಮಾರಕ ಕಟ್ಟಬೇಕು ಅನ್ನೋದು ಅಭಿಮಾನಿಗಳ ಕನಸು. ಆದ್ರೆ ಆ ಜಾಗದ ವಿವಾದ 15 ವರ್ಷಗಳಾದ್ರೂ ಬಗೆಹರೀತಾ ಇಲ್ಲ. ಈ ನಡುವೆ ವಿಷ್ಣು ಫ್ಯಾಮಿಲಿ ಮೈಸೂರಿನಲ್ಲಿ ಸ್ಮಾರಕವನ್ನ ನಿರ್ಮಾಣ ಮಾಡಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಯಜಮಾನನ ಒಂದು ಸ್ಮಾರಕ ಇಲ್ಲವಲ್ಲ ಅನ್ನೋದು ವಿಷ್ಣು ಫ್ಯಾನ್ಸ್ ಕೊರಗಾಗಿತ್ತು. ಈಗ ಕಿಚ್ಚ ಸುದೀಪ್ ಆ ಕೊರಗನ್ನ ದೂರ ಮಾಡೋದಕ್ಕೆ ಸಜ್ಜಾಗಿದ್ದಾರೆ.
25 ಅಡಿ ಪುತ್ಥಳಿ, ವಿಷ್ಣುದಾದಾ ಜನ್ಮದಿನ ಅಡಿಗಲ್ಲು
ಬೆಂಗಳೂರಿನ ಕೆಂಗೇರಿ ಬಳಿ ಕಿಚ್ಚ ಖರೀದಿ ಮಾಡಿರೋ ಜಾಗದಲ್ಲಿ ವಿಷ್ಣು ವರ್ಧನ್ರ 25 ಅಡಿ ಪುತ್ಥಳಿ ಎದ್ದು ನಿಲ್ಲಲಿದೆ. ಮುಂದಿನ ತಿಂಗಳ 18ನೇ ತಾರೀಖು ವಿಷ್ಣುವರ್ಧನ್ 75 ನೇ ಹುಟ್ಟುಹಬ್ಬ ಆ ದಿನವೇ ವಿಷ್ಣು ಸ್ಮಾರಕದ ಕೆಲಸಕ್ಕೆ ಅಡಿಗಲ್ಲು ಹಾಕಲಿಕ್ಕೆ ಪ್ಲಾನ್ ಮಾಡಲಾಗಿದೆ.
ವೀರಕಪುತ್ರ ಶ್ರೀನಿವಾಸ್, ವಿಷ್ಣುಸೇನಾ ಅಧ್ಯಕ್ಷ, ವಿಷ್ಣುದಾದಾ ಕಟ್ಟಾ ಅಭಿಮಾನಿ ಕಿಚ್ಚ ಸುದೀಪ್!
ಸುದೀಪ್, ವಿಷ್ಣುವರ್ಧನ್ರ ಅಪ್ಪಟ ಅಭಿಮಾನಿ ಅನ್ನೋದು ಗೊತ್ತೇ ಇದೆ. ವಿಷ್ಣು ಜೊತೆಗೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ಸುದೀಪ್ ಬಹುಕಾಲದ ಕನಸಾಗಿತ್ತು. ಅಂತೆಯೇ ಹಿಂದಿಯ ಸರ್ಕಾರ್ ಸಿನಿಮಾ ರೈಟ್ಸ್ ತಂದು ವಿಷ್ಣು ಮಗನ ಪಾತ್ರದಲ್ಲಿ ನಟಿಸಲಿಕ್ಕೆ ಸಜ್ಜಾಗಿದ್ರು. ಆದ್ರೆ ಆ ಕನಸು ಈಡೇರಲಿಲ್ಲ. ಆದರೇನಂತೆ ಮುಂದೆ ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ವಿಷ್ಣು ಜೊತೆಗೆ ಕಿಚ್ಚ ಸ್ಕ್ರೀನ್ ಶೇರ್ ಮಾಡಿದ್ರು.
ಡಾ.ವಿಷ್ಣುವರ್ಧನ್ ಅಗಲಿಕೆ ಬಳಿಕ ವಿಷ್ಣುವರ್ಧನ ಅನ್ನೋ ಹೆಸರಲ್ಲಿ ಸಿನಿಮಾ ಮಾಡಿದ್ದ ಸುದೀಪ್ ಅದನ್ನ ವಿಷ್ಣುದಾದಾಗೆ ಅರ್ಪಣೆ ಮಾಡಿದ್ರು. ಅಷ್ಟೇ ಅಲ್ಲ ವಿಷ್ಣುವರ್ಧನ್ರ ಕೋಟಿಗೊಬ್ಬ ಸರಣಿಯಲ್ಲಿ ನಟಿಸ್ತಾ ವಿಷ್ಣು ಫ್ಯಾನ್ಸ್ ಪಾಲಿಗೆ ಆಪ್ತರಾಗಿದ್ರು.
ಕನ್ನಡ ಚಿತ್ರರಂಗದಲ್ಲಿ ಸುದೀಪ್ ಒಂಥರಾ ವಿಷ್ಣು ಉತ್ತರಾಧಿಕಾರಿ ಅಂತಲೇ ಬಿಂಬಿತರಾಗಿದ್ದಾರೆ. ಇಂಥಾ ಸುದೀಪ್ ಈಗ ಜವಾಬ್ದಾರಿ ತೆಗೆದುಕೊಂಡು ವಿಷ್ಣು ಸ್ಮಾರಕ ನಿರ್ಮಾಣ ಮಾಡ್ತಾ ಇದ್ದಾರೆ. ಇದು ಕೂಡ ವಿಷ್ಣು ಅಂತಿಮ ಸಂಸ್ಕಾರ ನಡೆದ ಜಾಗದಲ್ಲೇನೂ ಅಲ್ಲ. ಆದ್ರೆ ಕೊನೆ ಪಕ್ಷ ಕರುನಾಡ ರಾಜಧಾನಿ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಹೆಸರಿನಲ್ಲಿ ಸ್ಮಾರಕ ಆಗುತ್ತೆ ಅನ್ನೋದೇ ಸಮಾಧಾನ ವಿಷಯ.