ಸ್ಟಾರ್ ಸುವರ್ಣ ವರ್ಲ್ಡ್ ಪ್ರೀಮಿಯರ್ 'ಲಕ್ಕಿಮ್ಯಾನ್' ಇದೇ ಭಾನುವಾರ ಸಂಜೆ 7 ಗಂಟೆಗೆ
Lucky Man Star Suvarna World Television Premiere Movie: ಈಗಾಗಲೇ ಒಂದರ ಹಿಂದೆ ಒಂದರಂತೆ ಸೂಪರ್ ಡೂಪರ್ ಹಿಟ್ ಮೂವಿಗಳನ್ನು ಪ್ರಸಾರ ಮಾಡಿರುವ ಸ್ಟಾರ್ ಸುವರ್ಣ ಇದೀಗ 'ಲಕ್ಕಿಮ್ಯಾನ್' ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ
ಬೆಂಗಳೂರು (ನ. 12): ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು (Star Suvarna) ಹೊಸತನದ ಕಾರ್ಯಕ್ರಮಗಳೊಂದಿಗೆ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈಗಾಗಲೇ ಒಂದರ ಹಿಂದೆ ಒಂದರಂತೆ ಸೂಪರ್ ಡೂಪರ್ ಹಿಟ್ ಮೂವಿಗಳನ್ನು ಪ್ರಸಾರ ಮಾಡಿರುವ ಸ್ಟಾರ್ ಸುವರ್ಣ ಇದೀಗ 'ಲಕ್ಕಿಮ್ಯಾನ್' ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಈ ಸಿನಿಮಾದ ಮುಖ್ಯ ಆಕರ್ಷಣೆಯೇ 'ಪವರ್ ಸ್ಟಾರ್'. ಲಕ್ಕಿಮ್ಯಾನ್ ಸಿನಿಮಾದಲ್ಲಿ ನಮ್ಮೆಲ್ಲರ ಪ್ರೀತಿಯ 'ಪವರ್ ಸ್ಟಾರ್ ಪುನೀತ್ ರಾಜಕುಮಾರ್' ರವರು (Puneeth Rajkumar) ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಜೊತೆಗೆ ಸಾಧು ಕೋಕಿಲ (Sadhu Kokila) ಕೂಡ ಅಭಿನಯಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನ ಸೀನ್‌ಗಳು ನೋಡುಗರನ್ನು ನಗಿಸುತ್ತವೆ. ಎಂದಿನಂತೆ ತಮ್ಮ ಮಂದಹಾಸವನ್ನು ಚೆಲ್ಲುತ್ತ ಪುನೀತ್ ಲವಲವಿಕೆಯಿಂದ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿರೋ ಅಪ್ಪು ಹಾಗು ಪ್ರಭುದೇವ್ (Prabhu Deva) ಅದ್ಭುತ ಡಾನ್ಸ್ ವೀಕ್ಷಕರ ಮನಗೆಲ್ಲುವುದಂತೂ ಖಚಿತ. ನಟ ಡಾರ್ಲಿಂಗ್ ಕೃಷ್ಣ (Darling Krishna) ಹಾಗು ನಟಿ ಸಂಗೀತ ಶೃಂಗೇರಿ (Sangeetha Sringeri) ಅಭಿನಯದ ಈ ವರ್ಷದ ಸೂಪರ್ ಹಿಟ್ ಸಿನಿಮಾ 'ಲಕ್ಕಿಮ್ಯಾನ್' ಇದೇ ಭಾನುವಾರ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.
ಇದನ್ನೂ ನೋಡಿ: Lucky Man: 'ಪುನೀತ್ ಸರ್‌ನ ಪ್ರತಿ ಸಲ ಭೇಟಿಯಾದಾಗ ಎಕ್ಸೈಟ್‌ಮೆಂಟ್ ಇರುತಿತ್ತು'