Asianet Suvarna News Asianet Suvarna News

30 ವರ್ಷಗಳ ನಂತರ ಕಂಬ್ಯಾಕ್: ಸನ್ಯಾಸತ್ವ ಬಿಟ್ಟು ಮತ್ತೆ ಬಣ್ಣ ಹಚ್ಚಿದ್ದೇಕೆ ಮಹಾಲಕ್ಷ್ಮಿ?

ಮಹಾಲಕ್ಷ್ಮಿ,, 80,90ರ ದಶಕದ ಟಾಪ್ ನಟಿ. ಅಂಬಿಕಾ, ಗೀತಾ, ಮಾಧವಿಯಂತದ ಮನೋಜ್ಞ ಹೀರೋಯಿನ್‌ಗಳ ದರ್ಬಾರ್ ಮಧ್ಯೆ ಬಂದು ಜನಪ್ರಿಯರಾದ ಬ್ಯೂಟಿ. ಆಗಿನ ಕಾಲಕ್ಕೆ ಮಾಡರ್ನ್ ಉಡುಗೆಗೂ ಸೈ, ಸೀರೆಗೂ ಸೈ ಎನ್ನುತ್ತಿದ್ದ ನಟಿ ಮಹಾಲಕ್ಷ್ಮೀ. ಅದೆಷ್ಟು ಸಿನಿರಸಿಕರ ಪಾಲಿಗೆ ಡ್ರೀಮ್ ಗರ್ಲ್ ಆಗಿದ್ರೋ ಲೆಕ್ಕವೇ ಇಲ್ಲ.
 

ಮಹಾಲಕ್ಷ್ಮಿ,, 80,90ರ ದಶಕದ ಟಾಪ್ ನಟಿ. ಅಂಬಿಕಾ, ಗೀತಾ, ಮಾಧವಿಯಂತದ ಮನೋಜ್ಞ ಹೀರೋಯಿನ್‌ಗಳ ದರ್ಬಾರ್ ಮಧ್ಯೆ ಬಂದು ಜನಪ್ರಿಯರಾದ ಬ್ಯೂಟಿ. ಆಗಿನ ಕಾಲಕ್ಕೆ ಮಾಡರ್ನ್ ಉಡುಗೆಗೂ ಸೈ, ಸೀರೆಗೂ ಸೈ ಎನ್ನುತ್ತಿದ್ದ ನಟಿ ಮಹಾಲಕ್ಷ್ಮೀ. ಅದೆಷ್ಟು ಸಿನಿರಸಿಕರ ಪಾಲಿಗೆ ಡ್ರೀಮ್ ಗರ್ಲ್ ಆಗಿದ್ರೋ ಲೆಕ್ಕವೇ ಇಲ್ಲ. ಮಹಾಲಕ್ಷ್ಮಿ ನಟಿಸಿದ 'ಬಡ್ಡಿ ಬಂಗಾರಮ್ಮ' 'ಸ್ವಾಭಿಮಾನ' 'ಮದುವೆ ಮಾಡು ತಮಾಷೆ ನೋಡು' ತರದ ಹತ್ತಾರು ಸೂಪರ್‌ಹಿಟ್ ಸಿನಿಮಾಗಳನ್ನ ಯಾರ್ ತಾನೆ ಮರೆಯೋಕೆ ಸಾಧ್ಯ.. ಇದೀಗ ಇದೇ ಸ್ವಾಭಿಮಾನದ ಹೆಣ್ಣು ಮಹಾಲಕ್ಷ್ಮಿ 30 ವರ್ಷದ ಬಳಿಕೆ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ.  ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ನಟಿ ಮಹಾಲಕ್ಷ್ಮೀ ತಮ್ಮ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರು. 

30 ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಮಹಾಲಕ್ಷ್ಮಿ ಇತ್ತೀಚೆಗಷ್ಟೇ ಟಿಆರ್‌ಪಿ ಅನ್ನೋ ಸಿನಿಮಾದಲ್ಲಿ ನಟಿಸಿದ್ರು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗೋ 'ಕಾವೇರಿ ಕನ್ನಡ ಮೀಡಿಯಂ' ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನಟಿ ಮಹಾಲಕ್ಷ್ಮಿ ಬಗ್ಗೆ ನೂರೆಂಟು ಕಥೆಗಳಿವೆ. ಇವ್ರು ಆಧ್ಯಾತ್ಮದ ಕಡೆ ವಾಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಅಂತೆಲ್ಲಾ ಸುದ್ದಿ ಆಗಿತ್ತು. ಆದ್ರೆ ಈ ಬಗ್ಗೆ ಯಾವ್ದೇ ಕ್ಲಾರಿಟಿ ಇರಲಿಲ್ಲ. ಈಗ ಗಾಸಿಪ್ಅನ್ನೆಲ್ಲಾ ಸುಳ್ಳು ಮಾಡಲು 'ಕಾವೇರಿ ಕನ್ನಡ ಮೀಡಿಯಂ'. ಈ ಧಾರಾವಾಹಿಯಲ್ಲಿ ಇಡೀ ಮನೆಯ ಮುಖ್ಯಸ್ಥೆ ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹಾಲಕ್ಷ್ಮಿ ಮೂಲ ತಮಿಳುನಾಡಾದ್ರು ಕನ್ನಡದಲ್ಲೇ ಹೆಚ್ಚು ಸಕ್ಸಸ್ ಪಡೆದಿದ್ರು. ಈಗ ಕಿರುತೆರೆಯಲ್ಲೂ ಅದೇ ಯಶಸ್ಸಿನ ಹುಡುಕಾಟಕ್ಕಿಳಿದಿದ್ದಾರೆ. ಹೀಗಾಗಿ ಇಷ್ಟು ದಿನ ಯಾರು ಮಹಾಲಕ್ಷ್ಮಿಯನ್ನ ಮಿಸ್ ಮಾಡಿ ಕೊಂಡಿದ್ರೋ ಅವರು ಧಾರಾವಾಹಿ ಮೂಲಕ ಮತ್ತೆ ಕಣ್ತುಂಬಿಕೊಳ್ಳಬಹುದು.