ಯೋಗ್ಯತೆ ಗಳಿಸಲು ಕಷ್ಟಪಟ್ಟು ದುಡಿಯುತ್ತಿದ್ದೇವೆ ಎಂದ ಯಶ್!

ಲೋಕಸಭೆ ಚುನಾವಣೆಗೆ ಮಂಡ್ಯ ಅಖಾಡ ದಿನದಿನಕ್ಕೂ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮದ್ದೂರಿನಲ್ಲಿ ಪ್ರಚಾರ ಮಾಡಿದ ರಾಕಿಂಗ್ ಸ್ಟಾರ್ ಯಶ್, ಯೋಗ್ಯತೆ ಕುರಿತು ಮಾತನಾಡಿದವರಿಗೆ ಟಾಂಗ್ ನೀಡಿದರು. 

Share this Video
  • FB
  • Linkdin
  • Whatsapp

ಮಂಡ್ಯ(ಏ.10): ಲೋಕಸಭೆ ಚುನಾವಣೆಗೆ ಮಂಡ್ಯ ಅಖಾಡ ದಿನದಿನಕ್ಕೂ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮದ್ದೂರಿನಲ್ಲಿ ಪ್ರಚಾರ ಮಾಡಿದ ರಾಕಿಂಗ್ ಸ್ಟಾರ್ ಯಶ್, ಯೋಗ್ಯತೆ ಕುರಿತು ಮಾತನಾಡಿದವರಿಗೆ ಟಾಂಗ್ ನೀಡಿದರು. ನಾವೆಲ್ಲಾ ತುಂಬ ಕಷ್ಟಪಟ್ಟು ಬೆಳೆದು ಬಂದವರು, ಯೋಗ್ಯತೆಯಲ್ಲಿ ನಾವು ಚಿಕ್ಕವರಿದ್ದರೂ ಅದನ್ನು ಸಂಪಾದಿಸಲು ಕಷ್ಟ ಪಡುತ್ತಿದ್ದೇವೆ ಎಂದು ಯಶ್ ಹೇಳಿದರು. ಇದೇ ವೇಳೆ ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅಂಬರೀಶ್ ಅವರ ಸಾಧನೆಯನ್ನು ಕೊಂಡಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್, ಅಂಬರೀಶ್ ಅವರ ಸಾಧನೆಯನ್ನು ದೇಶದ ಪ್ರಧಾನಿ ಗುರುತಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 

Related Video