Hijab Row: ನಮಗೆ ಹಿಜಾಬ್‌ಗಿಂತ ಶಿಕ್ಷಣವೇ ಮುಖ್ಯ, ವಿದ್ಯಾರ್ಥಿನಿಯರ ಮಾದರಿ ನಡೆ

ಉಡುಪಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್‌-ಕೇಸರಿ ಶಾಲು ವಿವಾದದ ಬೆಂಕಿ ಇಂದು ರಾಜ್ಯಾದ್ಯಂತ ಹಬ್ಬಿ, ದೇಶ- ವಿದೇಶಗಳಲ್ಲೂ ಚರ್ಚೆ, ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ಹೈಕೋರ್ಟ್‌ ಮಧ್ಯಂತರ ಆದೇಶದ ಬಳಿಕವೂ ವಿವಾದ ತಣ್ಣಗಾಗಿಲ್ಲ.

First Published Feb 21, 2022, 5:06 PM IST | Last Updated Feb 21, 2022, 6:04 PM IST

ಬೆಂಗಳೂರು (ಫೆ. 21): ಉಡುಪಿ  (Udupi) ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್‌-ಕೇಸರಿ ಶಾಲು (Hijab-Saffron Shawl) ವಿವಾದದ ಬೆಂಕಿ ಇಂದು ರಾಜ್ಯಾದ್ಯಂತ ಹಬ್ಬಿ, ದೇಶ- ವಿದೇಶಗಳಲ್ಲೂ ಚರ್ಚೆ, ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ಹೈಕೋರ್ಟ್‌ (High Court) ಮಧ್ಯಂತರ ಆದೇಶದ ಬಳಿಕವೂ ವಿವಾದ ತಣ್ಣಗಾಗಿಲ್ಲ. ಹಿಜಾಬ್ ಹಾಕಿಕೊಂಡೇ ತರಗತಿಗೆ ಬರುತ್ತೇವೆ ಅವಕಾಶ ಕೊಡಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಅವಕಾಶ ಕೊಡದಿದ್ದಾಗ ತರಗತಿಯನ್ನೇ, ಪರೀಕ್ಷೆಯನ್ನೇ ಬಿಟ್ಟು ಹೋದ ಉದಾಹರಣೆಗಳಿವೆ. ಇನ್ನೊಂದೆಡೆ, ನಮಗೆ ಹಿಜಾಬ್‌ಗಿಂತ ಶಿಕ್ಷಣವೇ ಮುಖ್ಯ. ನಾವು ಕೋರ್ಟ್ ಆದೇಶ ಪಾಲಿಸುತ್ತೇವೆ ಎಂದು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತರಗತಿಗೆ ಬರುತ್ತಿದ್ದಾರೆ. 

Hijab Row: ಅನಪೇಕ್ಷಿತ ವಿವಾದ, ವೈಷಮ್ಯದ ಬೆಂಕಿಗೆ ಸೋಶಿಯಲ್ ಮೀಡಿಯಾ ತುಪ್ಪ

ರಾಯಚೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸಂಘರ್ಷಕ್ಕೆ ತಲೆಕೆಡಿಸಿಕೊಳ್ಳದೆಯೇ ಹಿಜಾಬ್‌ ತೆಗೆದು ತರಗತಿಗಳಿಗೆ ಹಾಜರಾಗುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಇಂತಹ ಬೆಳವಣಿಗೆಯು ಎಲ್ಲರಲ್ಲಿಯೂ ಸಹೋದರತ್ವದ ಭಾವನೆಗಟ್ಟಿಗೊಳ್ಳಲು ಸಹಕರಿಸುತ್ತಿದೆ.

Video Top Stories