
Hijab Row ಮಂಡ್ಯದ ಮದ್ದೂರಿನ ಪ್ರೌಢ ಶಾಲೆಯೊಂದರಲ್ಲಿ ಹಿಜಾಬ್ ವಿಚಾರಕ್ಕೆ ಗಲಾಟೆ, ಗದ್ದಲ
ಮಂಡ್ಯ ಜಿಲ್ಲೆಯಲ್ಲೂ ಹಿಜಾಬ್ ಕಿಚ್ಚು ಜೋರಾಗಿದೆ. ಮಂಡ್ಯದ ಮದ್ದೂರಿನ ಪ್ರೌಢ ಶಾಲೆಯೊಂದರಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಸಿದಂತೆ ಗಲಾಟೆ, ಗದ್ದಲವಾಗಿದೆ.
ಮಂಡ್ಯ, (ಫೆ.17): ಯಾವುದೇ ಧರ್ಮದ ಸಂಕೇತವನ್ನು ಶಾಲಾ-ಕಾಲೇಜಿನಿಲ್ಲಿ ಧರಿಸುವಂತಿಲ್ಲ ಎಂದ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Hijab Row ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮುಂದೆ ಹೈಡ್ರಾಮಾ
ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸಿದ್ದಾರೆ. ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಬಿಡಲ್ಲ ಅಂತ ಕೆಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಮಂಡ್ಯ ಜಿಲ್ಲೆಯಲ್ಲೂ ಹಿಜಾಬ್ ಕಿಚ್ಚು ಜೋರಾಗಿದೆ. ಮಂಡ್ಯದ ಮದ್ದೂರಿನ ಪ್ರೌಢ ಶಾಲೆಯೊಂದರಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಸಿದಂತೆ ಗಲಾಟೆ, ಗದ್ದಲವಾಗಿದೆ.