Asianet Suvarna News Asianet Suvarna News

ಕೊಡಗು: ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ತೆರೆದು ಮಾದರಿಯಾದ ಶಿಕ್ಷಕ

ಕುಗ್ರಾಮದಲ್ಲೊಂದು ಎಸ್‌ಬಿಎಂ ಬ್ಯಾಂಕ್ ಓಪನ್ ಆಗಿದೆ. ಅಲ್ಲಿ ಅಕೌಂಟ್ ಹೊಂದಿರೋದ್ಯಾರು..? ಕರ್ತವ್ಯ ನಿರ್ವಹಿಸೋದ್ಯಾರು..? ಅವರ ವಿದ್ಯಾರ್ಹತೆ ಏನು ಅಂತ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರ. ಒಂದೇ ಒಂದೂ ಕಂಪ್ಯೂಟರ್ ಇಲ್ಲದೆ ಅಲ್ಲಿ ಬ್ಯಾಂಕ್ ವ್ಯವಹಾರ ನಡೀತಿದೆ.‌ 

ಪುಟ್ಟ ಪುಟ್ಟ ಚೇರ್‌ನಲ್ಲಿ ದೊಡ್ಡ ಜವಬ್ದಾರಿ ಹೊತ್ತು ಕುಳಿತಿರೋ ಪುಟ್ಟ ಮಕ್ಕಳು, ಅಲ್ಲೇ ಲೈನಾಗಿ ನಿಂತಿರೋ ವಿದ್ಯಾರ್ಥಿಗಳು. ಕೈಯಲ್ಲಿ ಪಾಸ್ ಬುಕ್ ಜೊತೆಗೆ ಹಣ. ಅಲ್ಲೇ ಪಕ್ಕದಲ್ಲೇ ಬ್ಯಾಂಕ್ ಲಾಕರ್.. ಅಕೌಂಟ್ ನಂಬರ್ ನೋಡಿ ಹಣ ಜಮೆ ಮಾಡಿಸಿಕೊಳ್ತಿರುವ ಪುಟಾಣಿಗಳು..‌ ಇಂಟರೆಸ್ಟಿಂಗ್ ಇದೆ ಅಲ್ವಾ..? ಇದ್ಯಾವುದೋ ಬ್ಯಾಂಕ್ ಪ್ರಾತ್ಯಕ್ಷಿಕೆ ಇರಬೇಕು ಅಂದುಕೊಂಡ್ರಾ..! ಅಲ್ವೇ ಅಲ್ಲಾ.. ಇದು ನಿತ್ಯವೂ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿರೋ ಎಸ್‌ಬಿಎಂ ಬ್ಯಾಂಕ್.. ಎಸ್‌ಬಿಎಂ ಅಂದ್ರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಲ್ಲ.. ಇದು ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರು..! 

Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ- ಮಗನ ಪ್ರೀತಿ

ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ್ ಈ ಬ್ಯಾಂಕ್‌ನ ಸ್ಥಾಪಕರು.. ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿರುವ ಈ ಕುಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ತೆರೆದು ಇಡೀ ರಾಜ್ಯವೇ ಹುಬ್ಬೇರುವಂತೆ ಮಾಡಿದ ಮಾದರಿ ಶಿಕ್ಷಕ.

ಪುಟ್ಟ ಮಕ್ಕಳಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಕ್ಕಳಿಗೆ ಉಳಿತಾಯದ ಮನಸ್ಥಿತಿ ಕಲಿಸಲು ಹೀಗೆ ಸರ್ಕಾರಿ ಶಾಲೆಯಲ್ಲಿ ಬ್ಯಾಂಕ್ ತೆರೆಯಲಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 37 ವಿದ್ಯಾರ್ಥಿಗಳಿಗೂ ಒಂದೊಂದು ಲಾಕರ್ ಒಳಗೊಂಡಂತೆ ಒಂದು ಖಜಾನೆಯನ್ನು ಸಿದ್ಧಪಡಿಸಲಾಗಿದೆ.

Big 3 Hero: ಕುಡ್ಲದ ಆಟೋರಾಜ ಮೋಂತು ಲೋಬೋ, ಕೊಪ್ಪಳದ ಮಾದರಿ ಶಿಕ್ಷಕರು

ವಿದ್ಯಾರ್ಥಿಗಳು ತಮ್ಮ ತಮ್ಮ ಲಾಕರ್ ಗಳಲ್ಲಿ ತಾವು ವಾರದ ದಿನಗಳಲ್ಲಿ ಉಳಿಸಿರುವ ಚಿಲ್ಲರೆ ಹಣಗಳನ್ನು ತಂದು ಹಾಕುತ್ತಾರೆ ಶಿಕ್ಷಕರು ಅದನ್ನು ವಿದ್ಯಾರ್ಥಿಗಳಿಗೆ ನೀಡಿರುವ ಪಾಸ್ ಬುಕ್ ಗಳಲ್ಲಿ ನಮೂದಿಸುವುದರ ಜೊತೆಗೆ ಖಜಾನೆಯಲ್ಲಿ ಇಟ್ಟಿರುವ ಲೆಡ್ಜರ್ ನಲ್ಲಿ ಕೂಡ ಬರೆದುಕೊಳ್ಳುತ್ತಾರೆ. ಇನ್ನು ಜಾಸ್ತಿ ದುಡ್ಡು ಉಳಿಸೋ ಮಕ್ಕಳಿಗೆ ಬಹುಮಾನದ ಜೊತೆಗೆ ಬಡ್ಡಿ ಕೂಡ ಸಿಗುತ್ತದಂತೆ

ಇದು ಮಕ್ಕಳು ತಿಂಡಿ, ಜಂಕ್ ಫುಡ್ ತಿಂದು ವೇಸ್ಟ್ ಮಾಡುವ ಹಣವನ್ನ‌ ಶಾಲೆಯಲ್ಲಿ ಉಳಿಕೆ ಮಾಡ್ರಿರೋದು ಪೋಷಕರಿಗೂ ಖುಷಿ ಕೊಟ್ಟಿದೆ. ಇಂತಹ ವಿನೂತನ ಬ್ಯಾಂಕ್ ಸ್ಥಾಪಿಸಿದ ಶಿಕ್ಷಕರಿಗೆ ವಿದ್ಯಾರ್ಥಿಗಳ ಪೋಷಕರು, ಊರ ಜನರು ಶ್ಲಾಘನೆ ಕೂಡ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋರಿಗೆ, ಅದ್ರಲ್ಲೂ ಕುಗ್ರಾಮಗಳ‌ ಶಾಲೆ ಅಂದ್ರೆ ಅಸಡ್ಡೆ ತೋರೋರನ್ನ ನಾಚಿಸುವಂತಿದೆ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರು ಹಾಗೂ ಮುಳ್ಳೂರಿಗೆ ಸ್ಕೂಲ್ ಬ್ಯಾಂಕ್. ಇಂತಹ ವಿಭಿನ್ನ ಪ್ರಯತ್ನ ಮಾಡಿರುವ ಈ ಶಾಲೆಯ ಶಿಕ್ಷಕ ಸತೀಶ್‌ರಿಗೊಂದು ಸಲಾಂ.

Video Top Stories