Asianet Suvarna News Asianet Suvarna News

Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ-ಮಗನ ಪ್ರೀತಿ

ಪ್ರತಿವಾರ ನಾವು  ಮೂವರು  ಹೀರೋಗಳ ಸಾಧನೆ ಬಗ್ಗೆ ನಿಮಗೆ ತೋರಿಸ್ತಾ ಇದ್ದೀವಿ. ಆದ್ರೆ,ನಾವ್ ಇವತ್ತು ಓನ್ ಆಂಡ್ ಓನ್ಲಿ  ಸಿಂಗಲ್  ಹೀರೋನ ನಿಮಗೆ ತೋರಿಸ್ತಿವಿ. ಯಾವ ಸಿನಿಮಾ ಹೀರೋಗಳಿಗೂ ಈತ ಕಮ್ಮಿ ಇಲ್ಲ. ಈ  ಕಾಲದಲ್ಲಿ  ಮಕ್ಕಳು ಮೊಬೈಲ್ನಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಮೊಬೈಲ್ ಕೈಗೆ ಸಿಕ್ಕ ಮೇಲಂತೂ ಒಬ್ಬೊಬ್ಬರು ಒಂದೊಂದು ದಿಕ್ಕು.ಮಾತು ಕತೆ, ಬಾಂಧ್ಯವ್ಯವೇ ಕಡಿಮೆ ಆಗುತ್ತಾ ಹೋಗ್ತಿದೆ. 

ಕೋಲಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಹೀಗೆ ಕಾಲು ಮುರಿದುಕೊಂಡು ವೀಲ್ ಚೇರ್ ಮೂಲಕ ಜೀವನ ಸಾಗಿಸುತ್ತಿರುವ ಈತನ ಹೆಸರು ತಬ್ರೋಜ್. ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ಮೂಲದ ನಿವಾಸಿ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ತಬ್ರೋಜ್‌ನ ಜೀವನ ಕಳೆದ ಎರಡು ವರ್ಷಗಳ ಹಿಂದೆ ಚೆನ್ನಾಗಿ ಯೇ ಇತ್ತು. ಆದ್ರೆ ಮದನಪಲ್ಲಿ ರಸ್ತೆಯಲ್ಲಿ ಆಟೋ ಓಡಿಸಿಕೊಂಡು ಹೋಗುವಾಗ ಟಾಟಾ ಸುಮೋ ಗೆ ಡಿಕ್ಕಿ ಹೊಡೆದ ಪರಿಣಾಮ ತಬ್ರೋ ಜ್ ನ ಬಲಗಾಲು ಮುರಿದುಹೋಗಿತ್ತು, ಕೂಡಲೇ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ನೀಡಿದ್ರು ಸಹ ಇಂದಿಗೂ ಈತನ ಕಾಲು ಸರಿಯಾಗಿಲ್ಲ.

ಪ್ರತಿ ಕೆಲಸಕ್ಕೂ ವೀಲ್ ಚೇರ್ ಮೇಲೆ ಅವಲಂಬನೆ ಆಗಿರುವ ತಬ್ರೋಜ್ ಪಡಬಾರದ ಪಾಡು ಪಡ್ತಿದ್ದಾರೆ. ತಂದೆಗೆ ಈ ಪುಟ್ಟ  ಮಗನೇ ಆಧಾರವಾಗಿದ್ದಾನೆ. ಗಂಡನಿಗೆ ಅಪಘಾತ ಆಗಿ, ಆಸ್ಪತ್ರೆ ಸೇರ್ತಿದ್ದಂತೆ  ಇದೇ ವೇಳೆ ತಬ್ರೋಜ್ನ ಪತ್ನಿ ಸಹ ಇದ್ದಕ್ಕಿದಂತೆ ಕಾಣೆ ಆಗಿದ್ದಾಳೆ. ಘಟನೆ ನಡೆದ ವೇಳೆ ತಬ್ರೋಜ್‌ನ ಮಗ ಸುಲ್ತಾನ್‌ಗೆ  4 ವ ರ್ಷ,ಇತ್ತ ತಾಯಿಯ ಪ್ರೀತಿ ಸಿಗದೆ, ಆಧಾರವಾಗಿದ್ದ ತಂದೆಯ ಪರಿಸ್ಥಿತಿಯನ್ನು ಕಂ ಡು ಸುಲ್ತಾನ್ ತಂದೆಯ ಸೇವೆಯಲ್ಲಿಯೇ ತೊಡಗಿಕೊಂಡಿದ್ದಾನೆ. ಹೇಗಾದ್ರು  ಮಾಡಿ ತಂದೆಯ ಕಾಲು ಸರಿ ಮಾಡಿಸಲೇಬೇಕು ಎಂದು ಪ್ರತಿ ಕ್ಷಣ ತಬ್ರೋಜ್ನ ಸೇವೆಯಲ್ಲಿ ಮುಳುಗಿದ್ದಾನೆ.ಇಬ್ಬರಿಗೂ ಅವರೇ ಪ್ರಪಂಚವಾಗಿದ್ದು, ತಂದೆ ಮಗನ ಪ್ರೀತಿ ಕಂಡು ಇಡೀ ಆಸ್ಪತ್ರೆಯೇ ಮಮ್ಮಲ ಮರುಗುತ್ತಿದೆ.