Asianet Suvarna News Asianet Suvarna News

Big 3 Hero: ಕುಡ್ಲದ ಆಟೋರಾಜ ಮೋಂತು ಲೋಬೋ, ಕೊಪ್ಪಳದ ಮಾದರಿ ಶಿಕ್ಷಕರು

ನಮ್ಮ ನಡುವೆ ಅನೇಕ ಸಾಧಕರಿದ್ದಾರೆ, ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿರುವವರಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಜನರಿಗೆ ಅನುಕೂಲ ಆಗುವ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಪರಿಚಯ ಮಾಡಿಸುವ ಕೆಲಸವನ್ನು ಬಿಗ್‌3 ಹೀರೋ ಮಾಡುತ್ತಿದೆ. 
 

ಬೆಂಗಳೂರು (ಜೂ. 18): ನಮ್ಮ ನಡುವೆ ಅನೇಕ ಸಾಧಕರಿದ್ದಾರೆ, ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿರುವವರಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಜನರಿಗೆ ಅನುಕೂಲ ಆಗುವ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಪರಿಚಯ ಮಾಡಿಸುವ ಕೆಲಸವನ್ನು ಬಿಗ್‌3 ಹೀರೋ ಮಾಡುತ್ತಿದೆ. 

ಮಂಗಳೂರಿನ ಮೋಂತು ಲೋಬೋ 87 ರ ಇಳಿ ವಯಸ್ಸಿನ ಹಿರಿಯರು. ಈಗಲೂ ಆಟೋ ಓಡಿಸುತ್ತಾರೆ. ತಮ್ಮ 67 ವಯಸ್ಸಿನ ಚಾಲನಾ ಬದುಕಿನಲ್ಲಿ ಒಂದೇ ಒಂದು ಅಪಘಾತವನ್ನು ಎಸಗಿಲ್ಲ. ಅಶಕ್ತರು, ಗರ್ಭಿಣಿಯರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಾರೆ. 

BIG 3 Hero: ವೃಕ್ಷಪ್ರೇಮಿ, ಅನಾಥಬಂಧು, ಬಡವರ ಪಾಲಿನ ದೇವತೆ, ಇವರ ಸಾಧನೆಗೆ ಸಲಾಂ!

ಉಡುಪಿಯ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಹಳ್ಳಿಯನ್ನಾಗಿ ಜಿಲ್ಲಾಡಳಿತ ಮೇ 31ರಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಸುಂದರ ಪ್ರವಾಸಿತಾಣವಾಗಿರುವ ಕೋಡಿಬೇಂಗ್ರೆಯ ಗ್ರಾಮಸ್ಥರೇ ಸ್ವಯಂ ನಿರ್ಧಾರ ಕೈಗೊಂಡು ಊರಿನಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ್ದಾರೆ. ಇಲ್ಲಿ ಸರ್ಕಾರವಾಗಲಿ ಆರೋಗ್ಯ ಇಲಾಖೆಯಾಗಲಿ ಒತ್ತಡ ಹೇರಿರಲಿಲ್ಲ. ಸರ್ಕಾರದ ಆದೇಶವಾಗಲಿ, ಕಾಯ್ದೆಯಾಗಲಿ ಇಲ್ಲಿರಲಿಲ್ಲ. ಆದರೂ ಕಳೆದ 3 ದಶಕಗಳಿಂದ ಇಲ್ಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಈ ನಿರ್ಧಾರವನ್ನು ಪಾಲಿಸುತ್ತಿದ್ದಾರೆ. ಕೊಪ್ಪಳದ 10 ಜನ ಸರ್ಕಾರಿ ಶಾಲೆಯ ಸೇರಿ 'ಕಲರವ ಶಿಕ್ಷಕರ ಸೇವಾ ಫಲಕ' ಎನ್ನುವ ತಂಡ ಮಾಡಿಕೊಂಡಿದ್ದಾರೆ. ರಜೆಯಿದ್ದಾಗ ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. 

Video Top Stories