Asianet Suvarna News Asianet Suvarna News

ಬಡತನದ ಮಧ್ಯೆ ಅರಳಿದ ಪ್ರತಿಭೆ, ಮೆಕ್ಯಾನಿಕ್‌ ಮಗಳು ಫಸ್ಟ್ ರ‍್ಯಾಂಕ್

  • ಗ್ಯಾರೇಜ್​ ನಡೆಸುವ ಮೆಕಾನಿಕ್​ನ ಮಗಳು ಫಸ್ಟ್​ ರ‍್ಯಾಂಕ್
  • ಬಾಗಲಕೋಟೆ ಗ್ಯಾರೇಜ್​ ಮೆಕಾನಿಕ್​ ರಫೀಕ್​ ಅವರ ಮಗಳು ರುಬೀನಾಳಿಂದ ಉತ್ತಮ ಸಾಧನೆ
  • ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಯ ಎಕಾನಾಮಿಕ್ಸ್​ ವಿಷಯದಲ್ಲಿ ಫಸ್ಟ್ ರ‍್ಯಾಂಕ್

ಬಾಗಲಕೋಟೆ(ಮೇ.2): ಗ್ಯಾರೇಜ್ನಲ್ಲಿ ಕೆಲ್ಸ ಮಾಡ್ತಿರೋ ಇವರ ಹೆಸರು ರಫೀಕ್ ಲೋಕಾಪೂರ. ವೃತ್ತಿಯಿಂದ ಮೆಕಾನಿಕ್ ಆಗಿರೋ ಇವ್ರು ಬಡತನದ ಮಧ್ಯೆ ಜೀವನ ಕಳೆದ್ರೂ ತನ್ನ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.

Tumakuru ಎಸ್ಐಟಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಕೊಡುಗೆ!

ದುಡಿದಿದ್ದೆಲ್ಲಾ ಮಕ್ಕಳ ಓದಿಗಾಗಿ ಖರ್ಚು ಮಾಡಿರೋ ರಫೀಕ್  ತಾನು 7ನೇ ತರಗತಿ ಓದಿದ್ರೂ ಮಕ್ಕಳಿಗೆ ಶಿಕ್ಷಣ ಕಡಿಮೆ ಆಗಬಾರದು ಅನ್ನೋ ಉದ್ದೇಶ ಹೊಂದಿದ್ರು. ಇದರ ಪರಿಣಾಮ ಎರಡನೇ ಮಗಳು ರುಬಿನಾ ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರದ ಅರ್ಥಶಾಸ್ತ್ರ  ವಿಭಾಗದಲ್ಲಿ ಫಸ್ಟ್ ರ್ಯಾಂಕ್ ಪಡೆದುಕೊಂಡಿದ್ದಾಳೆ. ಇನ್ನು ರುಬಿನಾಗೆ ಹೇಗಾದ್ರೂ ಮಾಡಿ ಒಳ್ಳೆಯ ನೌಕರಿ ಪಡೆದು ಇತರರಿಗೆ ಸಹಾಯ ಮಾಡಬೇಕೆಂಬ ಕನಸಿದ್ದು, ಇದೀಗ ಐಎಎಸ್, ಪಿಎಚ್ಡಿ ಮಾಡಬೇಕೆಂಬ ಹಂಬಲವಿದ್ದು, ಹೀಗಾಗಿ ಸರ್ಕಾರ ಉಚಿತ ಕೋಚಿಂಗ್ ಸೇರಿದಂತೆ ಮುಂದಿನ ಶಿಕ್ಷಣಕ್ಕೆ ನೆರವಿಗೆ ಬರಲಿ ಅನ್ನೋ ಆಶಯವನ್ನ ರುಬಿನಾ ವ್ಯಕ್ತಪಡಿಸಿದ್ದಾಳೆ. 

Video Top Stories