Asianet Suvarna News Asianet Suvarna News

Tumakuru ಎಸ್ಐಟಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಕೊಡುಗೆ!

ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ  ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ 180 ವಿದ್ಯಾರ್ಥಿಗಳು ಪ್ರಾಜೆಕ್ಟ್ ವೊಂದನ್ನು ಆರಂಭಿಸಿದ್ದಾರೆ. ಮರಗಳಿಂದ ಬಿದ್ದ ಬೀಜಗಳ ಸಂಗ್ರಹಿಸಿ ಪರಿಸರವನ್ನು ಹಸಿರಾಗಿಡುವುದು ಈ ಪ್ರಾಜೆಕ್ಟ್'ನ ಉದ್ದೇಶವಾಗಿದೆ.

green cycle pet project of sit college students at tumakuru gow
Author
Bengaluru, First Published May 2, 2022, 10:17 AM IST

ತುಮಕೂರು(ಮೇ.2): ಕೋಡಿಂಗ್-ಸಾಫ್ಟ್ ವೇರ್ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಕನಸ್ಸುಗಳನ್ನು ಹೊತ್ತುಕೊಂಡು ಬಂದ ಈ ವಿದ್ಯಾರ್ಥಿಗಳು, ಇದೀಗ ಸಂಬಂಧವೇ ಇಲ್ಲದ ಪ್ರಾಜೆಕ್ಟ್ ವೊಂದರಲ್ಲಿ ತೊಡಗಿಕೊಂಡು, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಸಾರುತ್ತಿದ್ದಾರೆ.

ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ (Siddaganga Institute of Technology - ಎಸ್‌ಐಟಿ) ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ (Information Science Engineering) ವಿಭಾಗದ 180 ವಿದ್ಯಾರ್ಥಿಗಳು ಪ್ರಾಜೆಕ್ಟ್ ವೊಂದನ್ನು ಆರಂಭಿಸಿದ್ದಾರೆ. ಮರಗಳಿಂದ ಬಿದ್ದ ಬೀಜಗಳ ಸಂಗ್ರಹಿಸಿ ಪರಿಸರವನ್ನು ಹಸಿರಾಗಿಡುವುದು ಈ ಪ್ರಾಜೆಕ್ಟ್'ನ ಉದ್ದೇಶವಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳು 15 ಲಕ್ಷ ಬೀಜಗಳನ್ನು ಸಂಗ್ರಹಿಸಿದ್ದಾರೆ.

ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್ ( All India Council of Technical Education -AICTE) ಪ್ರತಿ ಬಿಇ ವಿದ್ಯಾರ್ಥಿಯು ತಮ್ಮ ಆಯ್ಕೆಯಂತೆ 400 ಗಂಟೆಗಳ ಕಾಲ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇದರಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಪದವಿ ವೇಳೆ 100 ಅಂಕಗಳು ಸಿಗಲಿದೆ. ಎಐಸಿಟಿಇ ಅದೇಶದ ಹಿನ್ನೆಲೆಯಲ್ಲಿ 180 ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳು ಶ್ರೀ ಶಿವಕುಮಾರ ಸ್ವಾಮೀಜಿ ಜೀವವೈವಿಧ್ಯ ಉದ್ಯಾನವನ, ಬಸದಿ ಬೆಟ್ಟ, ಮಂದರಗಿರಿ ಬಳಿ ಸಸಿಗಳ ಸ್ವಚ್ಛಗೊಳಿಸುವುದು, ಅವುಗಳ ರಕ್ಷಣೆಗೆ ಬೇಲಿ ಹಾಕುವ ಕೆಲಸಗಳನ್ನು ಮಾಡಿದ್ದಾರೆ. ಈ ವೇಳೆ ಸಸಿಗಳ ನೆಡುವುದು, ಮರಗಳ ಬೆಳೆಸುವುದು ಎಷ್ಟು ಕಷ್ಟ ಎಂಬ ವಿಚಾರವನ್ನು ಅರಿತುಕೊಂಡಿದ್ದಾರೆ. ಬಳಿಕ ಪರಿಸರದ ಬಗ್ಗೆ ಆಕರ್ಷಣೆ ಬೆಳೆಸಿಕೊಂಡಿದ್ದಾರೆ.

ರಂಜಾನ್ ಹಬ್ಬದ ಹಿನ್ನೆಲೆ ಮೈಸೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಈ ಹಂತದಲ್ಲಿ ಜೀವವೈವಿಧ್ಯ ಉದ್ಯಾನದಲ್ಲಿ ಸಸಿಗಳನ್ನು ನೆಡಲು ನರ್ಸರಿಗಳಿಗೆ ಭೇಟಿ ನೀಡುತ್ತಿದ್ದ ವಿದ್ಯಾರ್ಥಿಗಳ ಮಾರ್ಗದರ್ಶಕ ಡಾ.ಎಂ.ಎಸ್.ರುದ್ರಮೂರ್ತಿ ಅವರಿಗೆ ಉತ್ತಮ ಆಲೋಚನೆ ಬಂದಿದೆ.

ತಮ್ಮದೇ ಕ್ಯಾಂಪಸ್ ನಲ್ಲಿ 1500ಕ್ಕೂ ಹೆಚ್ಚು ಮರಗಳಿದ್ದು, ಗಾಳಿ ವೇಳೆ ಮರಗಳಿಂದ ಬೀಳುವ ಬೀಜಗಳನ್ನು ಸಂಗ್ರಹಿಸಿ ಪರಿಸರವನ್ನು ಸದಾಕಾಲ ಹಸಿರಾಗಿಡುವಂತೆ ನೋಡಿಕೊಳ್ಳಬಹುದು ಎಂಬುದನ್ನು ಅರಿತು, ಆಗಿನ (2019) ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಹೆಚ್'ಸಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಂತೆ ಪ್ರಾಜೆಕ್ಟ್ ನ್ನು ಆರಂಭಿಸಿದ್ದಾರೆ. ಪ್ರಾಜೆಕ್ಟ್ ಭಾಗವಾಗಿ ವಿದ್ಯಾರ್ಥಿಗಳು ಈ ವರೆಗೂ 15 ಲಕ್ಷ ಬೀಜಗಳನ್ನು ಸಂಗ್ರಹಿಸಿದ್ದಾರೆ.

ಪ್ರಾಜೆಕ್ಟ್ ಬಗ್ಗೆ ಮಾಹಿತಿ ತಿಳಿದ ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿದ್ದರು. ಕೋವಿಡ್ ಸಾಂಕ್ರಾಮಿಕ ರೋಗದ ಬಿಡುವಿನ ಸಂದರ್ಭದಲ್ಲಿಯೂ ಬೀಜಗಳ ಸಂಗ್ರಹಿಸಲು ಆರಂಭಿಸಿದ್ದರು. 'ಹೊಂಗೆ' (ಇಂಡಿಯನ್ ಬೀಚ್), 'ಮತಿ' (ಇಂಡಿಯನ್ ಲಾರೆಲ್), 'ಹೊನ್ನೆ' (ಪ್ಟೆರೋಕಾರ್ಪಸ್ ಮರ್ಸುಪಿಯಂ), ತೇಗ, ಮಹೋಗಾನಿ ಸೇರಿದಂತೆ ವಿವಿಧ ಮರಗಳ ಬೀಜಗಳನ್ನು 50 ಚೀಲಗಳಲ್ಲಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಚೀಲವು 30 ಕೆಜಿ ಇದ್ದು, ಪ್ರತಿ ಕಿಲೋಗ್ರಾಂನಲ್ಲಿ 1,000 ಬೀಜಗಳಿವೆ ಎಂದು ಸಹ ಪ್ರಾಧ್ಯಾಪಕ ಡಾ.ಎಂ.ಎಸ್.ರುದ್ರಮೂರ್ತಿ ಹೇಳಿದ್ದಾರೆ.

ಬೀಜಗಳ ಸಂಗ್ರಹಿಸಿದ ಬಳಿಕ ಅವುಗಳನ್ನು ಅರಣ್ಯ ಇಲಾಖೆಗೆ ರವಾನಿಸಲಾಗುತ್ತದೆ.  ನಂತರ ಅರಣ್ಯಾಧಿಕಾರಿಗಳು ಸೂಕ್ತ ಸ್ಥಳಗಳಲ್ಲಿ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

ಜಿಲ್ಲೆಯಲ್ಲಿ ಶೇಕಡಾ 8.5 ರಿಂದ ಶೇಕಡಾ 10 ರವರೆಗೆ ಪರಿಸರ ಸುಧಾರಿಸುವ ಉದ್ದೇಶದಿಂದ ಅರಣ್ಯ ಇಲಾಖೆಗೆ ಸಹಾಯ ಮಾಡಿದ ಅತ್ಯುತ್ತಮ ಉಪಕ್ರಮಗಳಲ್ಲಿ ಇದು ಒಂದಾಗಿದೆ. ಬೀಜಗಳನ್ನು ವಿತರಣೆ ಮಾಡುವ ಯಾವುದೇ ಸಂಘ, ಸಂಸ್ಥೆಯನ್ನು ನಾವು ಸ್ವಾಗತಿಸುತ್ತೇವೆಂದು ಗಿರೀಶ್ ಹೇಳಿದ್ದಾರೆ.

ಸಾಫ್ಟ್‌ವೇರ್‌ ವೃತ್ತಿ ಆರಿಸಿಕೊಂಡರೂ ಪರಿಸರಕ್ಕಾಗಿ ಮಾಡುವ ಕೆಲಸ ಮುಂದುವರಿಸಲು ನಾನು ಬಯಸುತ್ತೇನೆ. ಸಾಫ್ಟ್‌ವೇರ್ ಉದ್ಯೋಗವನ್ನು ದೊರಕಿದರೂ ಪರಿಸರ ಕ್ಷೇತ್ರದಲ್ಲಿ ಎನ್‌ಜಿಒ ಜೊತೆ ಕೆಲಸ ಮಾಡಲು ನಾನು ಇಚ್ಛಿಸುತ್ತೇನೆ ಎಂದು ಬಿಹಾರದ ವಿದ್ಯಾರ್ಥಿ ಮನನ್ ರಾಜ್ ಅವರು ಹೇಳಿದ್ದಾರೆ.

ಪರಿಸರ ರಕ್ಷಣೆಗಾಗಿ ನಮ್ಮ ಕೈಗಳು ಮಣ್ಣಾಗುವುದು ಸಂತಸ ತಂದಿದೆ. ಚೀಲಗಟ್ಟಲೆ ಬೀಜಗಳನ್ನು ಸಂಗ್ರಹಿಸುವುದು ಬಹಳ ಸಂತಸ ತಂದಿದೆ ಎಂದು ಮತ್ತೊಬ್ಬ ವಿದ್ಯಾರ್ಥಿ ಸೈಜಲ್ ಶಂಕರ್ ಅವರು ಹೇಳಿದ್ದಾರೆ.

ಪರಿಸರಕ್ಕಾಗಿ ಏನನ್ನಾದರೂ ಮಾಡುವುದರ ಹೊರತಾಗಿ ತಂಡದ ಮನೋಭಾವದಂತಹ ಅನೇಕ ವಿಷಯಗಳ ಕುರಿತು ಕಲಿತುಕೊಂಡಿದ್ದೇವೆ. ಬೀಜಗಳ ಪ್ರತ್ಯೇಕಿಸುವಾಗ ಉತ್ತಮ ಗುಣಮಟ್ಟದ ಬೀಜಗಳ ಜ್ಞಾನವೂ ನಮಗೆ ಸಿಕ್ಕಿತು" ಎಂದು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ರಾಜಕಮಲ್ ಸಿಂಗ್ ಹೇಳಿದ್ದಾರೆ.

ವಿದ್ಯಾರ್ಥಿಗಳು - ಕೋಮಲ್, ಹಿಂದೂಶ್ರೀ ಮಂಜುನಾಥ್ ಹೆಗ್ಡೆ, ನಿಖಿಲ್ ಡಿ ಎಸ್, ಪಲ್ಲವಿ ಕಿರಣ್ ಯು, ಸಿದ್ಧಾರ್ಥ್ ಮುಂತಾದವರು - ಇದು ತಮ್ಮ ಜೀವನದುದ್ದಕ್ಕೂ ನೆನಪಿಡುವ ಉತ್ತಮ ಅವಕಾಶ ಎಂದು ಭಾವಿಸಿದರು.

ನಾವು ಸಂಗ್ರಹಿಸಿದ ಬೀಜಗಳು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂಬುದು ಸಂತಸವನ್ನು ತಂದಿದೆ. ವಿದ್ಯಾರ್ಥಿಗಳು ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ, ಅವರ ಕಲಿಕಾ ಸಾಮರ್ಥ್ಯವು ಎಲ್ಲಾ ಅಂಶಗಳಲ್ಲಿಯೂ ಅಧಿಕವಾಗಿರುತ್ತದೆ. ಕ್ಯಾಂಪಸ್‌ನಲ್ಲಿ ಬೀಜಗಳ ಸಂಗ್ರಹವನ್ನು ಮುಂದುವರಿಸಲು ಎಲ್ಲಿಯವರೆಗೆ ವಿದ್ಯಾರ್ಥಿಗಳು ಬಯಸುತ್ತಾರೆಯೋ ಅಲ್ಲಿಯವರೆಗೂ ಈ ಪ್ರಾಜೆಕ್ಟ್ ಮುಂದುವರೆಯುತ್ತದೆ ಎಂದು ರುದ್ರಮೂರ್ತಿ ಹೇಳಿದ್ದಾರೆ.

Follow Us:
Download App:
  • android
  • ios