Panchang: ಇಂದು ಬುಧವಾರ ಅಷ್ಟಮಿ ,ಅಶೋಕ ಪುಷ್ಪ ನೀರಿನಲ್ಲಿ ನೆನೆಸಿ ಸ್ನಾನ ಮಾಡಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಆರಿದ್ರಾ ನಕ್ಷತ್ರ. ಈ ದಿನ ಅಷ್ಟಮಿ ಬುಧವಾರ ಬಂದಿದೆ ಹಾಗಾಗಿ ತುಂಬಾ ಶ್ರೇಷ್ಠವಾದ ದಿನವಾಗಿದೆ. ಇಂದಿನ ದಿನವನ್ನು ಅಶೋಕ ಅಷ್ಟಮಿ ಎಂದು ಕೆರಯುತ್ತಾರೆ. ಶೋಕ ಎಂದರೆ ದುಃಖ, ಅಶೋಕ ಎಂದರೆ ದುಃಖ ವಿಲ್ಲದ್ದು . ಪ್ರತಿಯೋಬ್ಬರ ಶೋಕವನ್ನು ನಿವಾರಣೆಮಾಡಲು ಈ ದಿನ ವಿಶಿಷ್ಠವಾದ ದಿನ. ಅಶೋಕ ಪುಷ್ಪಗಳನ್ನು ಈ ದಿನ ನೀರಿನಲ್ಲಿ ನೆನೆಸಿ ಅದರ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆದು, ಅಶೋಕ ಅಷ್ಟಮಿ ಬುಧವಾರ ಬಂದರೆ ವಾಜಪೇಯ ಯಜ್ಞ ಮಾಡಿದಷ್ಟು ಫಲ ಎಂದು ಹೇಳಲಾಗುತ್ತದೆ .