ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆ: ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪುಂಡರು..!

ಯುವಕನನ್ನು ಬೆತ್ತಲೆಗೊಳಿಸಿ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
 

First Published Jul 11, 2023, 4:13 PM IST | Last Updated Jul 11, 2023, 4:13 PM IST

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬೆತ್ತಲೆಗೊಳಿಸಿ(Naked) ಥಳಿಸಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ(Hubli) ನಡೆದಿದೆ. ಬೆತ್ತಲೆಗೊಳಿಸಿ ಥಳಿಸುವುದನ್ನೂ ದುಷ್ಕರ್ಮಿಗಳು ಮೊಬೈಲ್‌ನಲ್ಲಿ(Mobile) ಸೆರೆ ಹಿಡಿದಿದ್ದಾರೆ. ಹೊಸೂರಿನ ಸೊಳಂಕೆ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಜ್ವಲ್‌ ಗಾಯಕವಾಡ, ಮಂಜ್ಯ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಬೈದಿದ್ದಕ್ಕೆ ಈ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ದುಷ್ಕರ್ಮಿಗಳು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಪುಡಿ ರೌಡಿಗಳು ಇತ್ತೀಚೆಗೆ ಈ ರೀತಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ. 

ಇದನ್ನೂ ವೀಕ್ಷಿಸಿ:  ಸಾಹಿತಿ ಜೋಗಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ: ಸಾಹಿತ್ಯ ಪ್ರೇಮ ತೋರಿದ ರಾಜ್ ಬಿ ಶೆಟ್ಟಿ, ಧನಂಜಯ್ !