Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!

ಗಂಡನನ್ನ ಹೆಂಡತಿಯೇ ಕೊಂದು ನಾಟಕವಾಡಿದಳು!
ಅವನನ್ನ ಕೊಲ್ಲಲೆಂದೇ ಊರಿಗೆ ಕರೆದೊಯ್ದಿದ್ದಳು..!
ಊಟ ಮನೆಯ ಮಾಡಿ ಮಲಗಿದವನು ಹೆಣವಾದ..!

Share this Video
  • FB
  • Linkdin
  • Whatsapp

ಅದೊಂದು ಪುಟ್ಟ ಸಂಸಾರ. ಗಂಡ(Husband) ಹೆಂಡತಿ ಮತ್ತು ಇಬ್ಬರು ಮಕ್ಕಳು. ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ರು. ಮದುವೆಯಾಗಿ 16 ವರ್ಷವಾಗಿತ್ತು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ವಾರದ ಹಿಂದೆ ಜಮೀನು ವಿಷ್ಯ ಮಾತಾಡಲು ಊರಿಗೆ ಹೋದ ಕುಟುಂಬದ ಯಜಮಾನ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಊಟ ಮಾಡಿ ಮಹಡಿ ಮೇಲೆ ಮಲಗಲು ಹೋದವನನ್ನ ಕಲ್ಲು ಎತ್ತಿಹಾಕಿ ಹಂತಕರು ಕೊಂದು ಬಿಟ್ಟಿದ್ರು. ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದು ಗೊತ್ತಾದಾಗ ಒಂದು ಕ್ಷಣ ಶಾಕ್ ಆಗಿದ್ರು. ಹೆಂಡತಿಯೇ ಗಂಡನ ಹೆಣ ಹಾಕಿದ್ಲು. ಆದ್ರೆ ಯಾರಿಗೂ ಅನುಮಾನ ಬರಬಾರದು ಅಂತ ಗಂಡನ ಹೆಣದ ಮುಂದೆ ಇನ್ನಿಲ್ಲದಂತೆ ನಾಟಕವಾಡಿದ್ಲು. ಅವರಿಬ್ಬರು ಪ್ರೀತಿಸಿ(Love) ಮದುವೆಯಾದವರು. ಒಟ್ಟಿಗೆ ಕೆಲಸ ಮಾಡುವಾಗ ಪ್ರೀತಿಸಿ ಹಿರಿಯರ ಸಮ್ಮತಿಯೊಂದಿಗೆ ಮದುವೆಯಾಗಿದ್ರು. ಈಗ ಅವರ ದಾಂಪತ್ಯ ಜೀವನಕ್ಕೆ 16 ವರ್ಷ. 14 ವರ್ಷದ ಮಗಳು ಮತ್ತು 12 ವರ್ಷದ ಮಗ ಇದ್ದಾನೆ. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಇದ್ದಕ್ಕಿದಂತೆ ಇವರ ಸಂಸಾರಕ್ಕೆ ಅವನೊಬ್ಬನ ಎಂಟ್ರಿಯಾಗಿತ್ತು. ಕುಚುಕು ಗೆಳೆಯ ಅಂತ ಮನೆಗೆ ಸೇರಿಸಿಕೊಂಡರೆ ಅತ ಮನೆಯನ್ನೇ ಹಾಳುಮಾಡಿದ್ದ. ಗೆಳೆಯನ ಹೆಂಡತಿಯ(Wife) ಮೇಲೆ ಕಣ್ಣು ಹಾಕಿದ್ದ. ಇನ್ನೂ ಆಕೆಯೂ ಅವನ ಬಣ್ಣದ ಮಾತಿಗೆ ಮರುಳಾಗಿ ಅನೈತಿಕ ಸಂಬಂಧ ಬೆಳಸಿಬಿಟ್ಟಿದ್ದಳು. ಆದ್ರೆ ಎಷ್ಟು ದಿನ ಅಂತ ಬೆಕ್ಕು ಕದ್ದುಮುಚ್ಚಿ ಹಾಲು ಕುಡಿಯೋಕೆ ಸಾದ್ಯ ಹೆಂಡತಿ ಮತ್ತು ಗೆಳೆಯನ ಸಂಬಂಧದ ವಿಷಯ ಗಂಡನಿಗೆ ಗೊತ್ತಾಗಿಬಿಡುತ್ತೆ. ಇದೇ ವಿಷ್ಯಕ್ಕೆ ಪ್ರತೀ ನಿತ್ಯ ಜಗಳ ಆಗುತ್ತಿರುತ್ತೆ. ಆದ್ರೆ ನಿತ್ಯ ಜಗಳದಿಂದ ಬೇಸತ್ತ ಹೆಂಡತಿ ತನ್ನ ಹುಡುಗನ ಜೊತೆ ಸೇರಿ ಗಂಡನಿಗೇ ಸ್ಕೆಚ್ ಹಾಕಿಬಿಟ್ಟಳು.

ಇದನ್ನೂ ವೀಕ್ಷಿಸಿ: Accident: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ: ಓರ್ವ ಸಾವು,ಮೂವರಿಗೆ ಗಂಭೀರ ಗಾಯ..ವಿಡಿಯೋ

Related Video