Accident: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ: ಓರ್ವ ಸಾವು,ಮೂವರಿಗೆ ಗಂಭೀರ ಗಾಯ..ವಿಡಿಯೋ

ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಬಳಿಕ ಟಾಟಾ ಏಸ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
 

First Published Jul 14, 2024, 3:53 PM IST | Last Updated Jul 14, 2024, 3:57 PM IST

ಆನೇಕಲ್: ಬನ್ನೇರುಘಟ್ಟ ರಸ್ತೆಯಲ್ಲಿ(Bannerghatta Road) ಭೀಕರ ಸರಣಿ ಅಪಘಾತ (Accident) ನಡೆದಿದ್ದು, ಇದರ ಸಿಸಿಕ್ಯಾಮೆರಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೈ ಜುಮ್ ಎನ್ನಿಸುವಂತೆ ವೇಗವಾಗಿ ಬಂದ ಬಿಎಂಟಿಸಿ ಬಸ್(BMTC Bus) ಟಾಟಾ ಏಸ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಬಳಿಕ ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ. ಅಡ್ಡ ಬಂದ ಬೈಕ್ ಸವಾರನ ತಪ್ಪಿಸಲು ಹೋಗಿ ಈ ಸರಣಿ ಅಪಘಾತ ನಡೆದಿದೆ. ಎರಡು ಬೈಕ್ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ರಭಸಕ್ಕೆ ಬಸ್‌ನಿಂದ ಪ್ರಯಾಣಿಕ ಹಾರಿ ಬಿದ್ದಿದ್ದಾನೆ. ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ‌ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಬನ್ನೇರುಘಟ್ಟ ಮುಖ್ಯ ರಸ್ತೆ ಪಾರಿಜಾತ ಆಸ್ಪತ್ರೆ ಮುಂಭಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು(Died), ಮೂವರಿಗೆ ಗಂಭೀರ ಗಾಯವಾಗಿದೆ. ಆಂಧ್ರಪ್ರದೇಶ ಮೂಲದ ಪ್ರಸಾದ್ ರಾವ್(60) ಮೃತಪಟ್ಟ ವ್ಯಕ್ತಯಾಗಿದ್ದಾರೆ. ಓರ್ವ ಪಾದಚಾರಿ, ಇಬ್ಬರು ಬೈಕ್ ಸವಾರರು ಮತ್ತು ಓರ್ವ ಬಸ್ಸಿನ ಪ್ರಯಾಣಿಕನಿಗೆ ಗಾಯವಾಗಿತ್ತು. ಕ್ರೇನ್ ಮೂಲಕ ತ್ತು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸ್, ಬೈಕ್ ಮತ್ತು ಟಾಟಾ ಏಸ್ ವಾಹನ ತೆರವು ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ:  ಕೆ.ಆರ್. ಪೇಟೆಯಲ್ಲಿ ರಾತ್ರೋರಾತ್ರಿ ಭಗವಾಧ್ವಜ ತೆರವು: ಧ್ವಜದ ಜೊತೆ ಕಂಬವನ್ನೇ ತೆರವುಗೊಳಿಸಿದ ಪುರಸಭೆ!