'ಮೊದ್ಲು ಲವ್ವು, ನಂತ್ರ ನೋವು.. ಕೊನೆಗ್‌ ಸಾವು..!' ಬಸ್ಸಲ್ಲಿ ಹುಟ್ಟಿದ ಪ್ರೀತಿ ಬೆಳೆಯೋ ಮುಂಚೆಯೇ ಅಂತ್ಯ!

ಇದೊಂಥರ ವಿಚಿತ್ರವಾದ ಪ್ರೇಮಕಥೆ. ಕಾಲೇಜ್‌ಗೆ ಹೋಗುವ ಬಸ್‌ನಲ್ಲೇ ಇವರಿಬ್ಬರ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ, ಬಸ್‌ನಲ್ಲಿ ಹುಟ್ಟಿದ ಪ್ರೀತಿ ಕೊಲೆಯಲ್ಲಿ ಅಂತ್ಯ. ಕಾಲೇಜು ನೆಪದಲ್ಲಿ ನಿತ್ಯವೂ ಪ್ರೇಮಿಗಳು ಓಡಾಟ ನಡೆಸುತ್ತಿದ್ದರು. ಈ ಪ್ರೀತಿ ಮನೆಯವರಿಗೆ ಗೊತ್ತಾಗಿದ್ದೆ ತಡ ಅನಾಹುತ ಆಗಿ ಹೋಯಿತು.
 

Share this Video
  • FB
  • Linkdin
  • Whatsapp

ವಿಜಯಪುರ (ಅ.16): ಅದು ಅಂತಿಂತ ಲವ್‌ ಸ್ಟೋರಿಯಲ್ಲ. ಬಸ್‌ ನಲ್ಲಿ ಶುರುವಾಗಿದ್ದ ಅವರಿಬ್ಬರ ಲವ್‌ ಕಹಾನಿ ಇಬ್ಬರ ಸಾವಿನ ಮೂಲಕ ಅಂತ್ಯವಾಗಿದೆ. ಪ್ರೀತಿಗಾಗಿ ಮಗಳು ಅಪ್ಪನ ಎದುರೇ ವಿಷ ಕುಡಿದು ಸತ್ತರೆ, ಅದೇ ವಿಷವನ್ನ ಅಪ್ಪ ತನ್ನ ಮಗಳ ಪ್ರಿಯಕರಿಗೆ ಕುಡಿಸಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ಈ ವಿಚಿತ್ರ ಲವ್‌, ಸುಸೈಡ್‌ ಆಂಡ್‌ ಮರ್ಡರ್ ಕಹಾನಿ ನಡೆದಿರೋದು ಭೀಮಾತೀರದ ಹಂತಕರ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ. 

ಅಪ್ರಾಪ್ತ ಮಗಳು ಹಾಗೂ ಆಕೆಯ ಪ್ರಿಯಕರನ ಶವಗಳನ್ನ ಕೃಷ್ಣಾ ನದಿಗೆ ಹಾಕಿದ ಕಿರಾತಕರು, ಊರಿಗೆ ಬಂದು ಅವರಿಬ್ಬರು ಓಡಿ ಹೋಗಿದ್ದಾರೆ ಅಂತಾ ಪುಕಾರು ಹಬ್ಬಿಸಿದ್ದರು. ಇದನ್ನೇ ಹುಡುಗನ ಮನೆಯವರಿಗೂ ನಂಬಿಸಿದ್ದರು. ಆದ್ರೆ ಅದೊಂದು ಮೂಟೆ ಇಡೀ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿತ್ತು.

ಲವರ್‌ಗಾಗಿ ಪ್ರಿಯತಮೆ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದ ಯುವಕನನ್ನು ಕೊಂದ ಯುವತಿ ಮನೆಯವರು..!

ಮೂಟೆಯಲ್ಲಿ ಕಟ್ಟಿದ್ದ ಶವ ಸಿಕ್ಕದೆ ಹೋಗಿದ್ರೆ ಇದೊಂದು ಸುಸೈಡ್‌ ಆಂಡ್‌ ಮರ್ಡರ್‌ ಸ್ಟೋರಿ ಮಿಸ್ಟರಿಯಾಗಿಯೇ ಉಳಿದು ಬಿಡ್ತಿತ್ತು. ಆದ್ರೆ ಹೆಣವಿಟ್ಟವರ ಹಣೆಬರಹ ಸರಿ ಇರಲಿಲ್ಲ ಸಿಕ್ಕಿಬಿದ್ದಿದ್ದಾರೆ. ಇಡೀ ಪ್ರಕರಣವನ್ನ ಮುಚ್ಚಿಹಾಕೋದಕ್ಕೆ ಅಪ್ರಾಪ್ತೆಯ ಮನೆಯವರು ದೊಡ್ಡ ನಾಟಕವಾಡಿದ್ದರು.

Related Video