Asianet Suvarna News Asianet Suvarna News

ಅವ್ಯವಹಾರದ ಹಣ ಯಾವ ದಿನ ಎಷ್ಟು ವರ್ಗಾವಣೆ ? ಅಷ್ಟು ದುಡ್ಡು ಹೋಗಿದ್ದಾದರೂ ಎಲ್ಲಿಗೆ? ಯಾರ ಅಕೌಂಟಿಗೆ?

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹತ್ತಾರು ಅನುಮಾನ! 
ತೆಲಂಗಾಣಕ್ಕೆ ಕರ್ನಾಟಕ ದುಡ್ಡು ಎಂದು ಕೇಸರಿಪಡೆ ಶಂಕೆ! 
ಮೃತ ಚಂದ್ರಶೇಖರ್​ರ ಮನೆಗೆ ಬಿ.ವೈ ವಿಜಯೇಂದ್ರ ಭೇಟಿ..!

First Published May 31, 2024, 9:40 AM IST | Last Updated May 31, 2024, 9:41 AM IST

ಬಜೆಟ್​​ ನಂತರ ವಾಲ್ಮೀಕಿ ನಿಗಮಕ್ಕೆ(Valmiki Development Corporation) 187 ಕೋಟಿ ರೂ. ಅನುದಾನ ನೀಡಲಾಗಿದೆ. ಚುನಾವಣಾ ನೀತಿ ಸಂಹಿತೆ ಲಾಭ ಪಡೆದ ನಿಗಮದ ಅಧಿಕಾರಿಗಳು, ಜೂ.14ರ ನಂತರ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಬೇಕಿತ್ತು(Money Transfer). ಆದ್ರೆ ನೀತಿ ಸಂಹಿತೆ ಕಾರಣಕ್ಕೆ ಜೂ.14ರ ನಂತರ ಫಲಾನುಭವಿಗಳ ಆಯ್ಕೆ ಮಾಡಲು ಮುಂದಾಗಿ. ನಿಗಮ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಹಣ ಕಬಳಿಕೆಗೆ ಸಂಚು ರೂಪಿಸಿದ್ದಾರೆ. ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸಲಹೆ ಮೇರೆಗೆ ಉಪಖಾತೆ ಆರಂಭಿಸಿದ್ದು, ಮಾನ್ಯ ಸಚಿವರ ಮೌಖಿಕ ಸೂಚನೆ ಇದೆ ಎಂದು ಹೇಳಿ ಉಪಖಾತೆ ಶುರು ಮಾಡಲಾಗಿದೆ. ಎಂ.ಡಿ ಸೂಚನೆ ಆಧಾರದ ಮೇಲೆ ಎಂಜಿ ರೋಡ್ ಶಾಖೆಯಲ್ಲಿ ಉಪಖಾತೆ ತೆರೆಯಲಾಗಿದೆ. ಸರ್ಕಾರದ ಅನುದಾನದ 187 ಕೋಟಿ ಹಣ ನಿಗಮದ ಉಪಖಾತೆಗೆ ವರ್ಗ ಮಾಡಿ, ನಿಗಮದ ಎಂ.ಡಿ ಪದ್ಮನಾಭ ಅವರಿಂದ ಒತ್ತಾಯಪೂರ್ವಕವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಎಂಡಿ ಒತ್ತಡಕ್ಕೆ ಬೆದರಿ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ( Officer suicide case) ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.  

ಇದನ್ನೂ ವೀಕ್ಷಿಸಿ:  ಅಕ್ಷರಶಃ ಸ್ತಬ್ಧವಾಯ್ತು ಪ್ರಜ್ವಲ್ ಕ್ಷೇತ್ರ..ಪ್ರತಿಭಟನೆಯಲ್ಲಿ ಮಹಿಳಾ ಸಾಹಿತಿಗಳು..ಚಿಂತಕರು..ವೈದ್ಯರು ಭಾಗಿ!

Video Top Stories