ಅಕ್ಷರಶಃ ಸ್ತಬ್ಧವಾಯ್ತು ಪ್ರಜ್ವಲ್ ಕ್ಷೇತ್ರ..ಪ್ರತಿಭಟನೆಯಲ್ಲಿ ಮಹಿಳಾ ಸಾಹಿತಿಗಳು..ಚಿಂತಕರು..ವೈದ್ಯರು ಭಾಗಿ!

ಹೆಜ್ಜೆ ಹೆಜ್ಜೆಯಲ್ಲೂ ಇತ್ತು ಹೆಣ್ಣುಮಕ್ಕಳ ಆಕ್ರೋಶ..!
ಹಾಸನ ಜಿಲ್ಲೆಗೆ ಹರಿದು ಬಂದ ಹೋರಾಟಗಾರರ ದಂಡು
34 ದಿನಗಳ ಬಳಿಕ ಮರಳಿ ಬೆಂಗಳೂರಿನತ್ತ ಪ್ರಜ್ವಲ್​..!

First Published May 31, 2024, 9:22 AM IST | Last Updated May 31, 2024, 9:23 AM IST

100ಕ್ಕೂ ಹೆಚ್ಚು ಸಂಘಟನೆಗಳು ಸುಮಾರು 10,000ಕ್ಕೂ ಹೆಚ್ಚು ಮಹಿಳೆಯರು(Women) ಹೋರಾಟವನ್ನು ಮಾಡಿದ್ದಾರೆ. ಹಾಸನದ(Hassan) ಕಡೆಗೆ.. ಸ್ತಬ್ಧವಾಯ್ತು ಪ್ರಜ್ವಲ್(Prajwal Revanna) ಕ್ಷೇತ್ರ.. ಹೆಜ್ಜೆ ಹೆಜ್ಜೆಯಲ್ಲೂ ಆಕ್ರೋಶ ವ್ಯಕ್ತವಾಗಿದೆ. ಆ ಹೆಣ್ಣು ಮಕ್ಕಳ ಕಣ್ಣಲ್ಲಿದ್ದು ಒಂದೇ ಕಿಡಿ. ರಾಜ್ಯದೆಲ್ಲೆಡೆ ಆಕ್ರೋಶದ ಕಿಚ್ಚು ಧಗಧಗನೆ ಹೊತ್ತಿ ಉರಿಯುತ್ತಿದೆ. ಆದರೆ ಅಲ್ಲಿ ದೊಡ್ಡ ಗೌಡರ ಕುಟುಂಬದಲ್ಲೇ ಮಾತ್ರ ನಿಗೂಢ ಮೌನ ಆವರಿಸಿಕೊಂಡಿದೆ. ಅದರಲ್ಲೂ ಹೆಚ್‌ ​ಡಿ ಕುಮಾರಸ್ವಾಮಿ ಈ ಹಿಂದೆ ಹಾಸನ ಫೈಲ್ಸ್​ ಬಗ್ಗೆ ಹೇಳಿದ್ದೇನು ಗೊತ್ತಾ..? 34 ದಿನ ನಾಪತ್ತೆಯಾಗಿದ್ದ ಪ್ರಜ್ವಲ್​ ಈಗ ಪ್ರತ್ಯಕ್ಷ ಆಗ್ತಿದ್ದಾನೆ. ಈಗ ಎಸ್​ಐಟಿ ಮುಂದೆ ಸರೆಂಡರ್​ ಕೂಡ ಆಗಿದ್ದಾನೆ​. ಕಾಮಕಾಂಡದ ಪ್ರೆನ್‌ಡ್ರೈವ್‌​​ ಪ್ರಕರಣ ಬೆಳಕಿಗೆ ಬಂದಾಗಿನಿಂದ, ರಾಜ್ಯಾದ್ಯಂತ  ನಡೆದಿರುವ ಪ್ರತಿಭಟನೆಗಳು(Protest) ಒಂದೆರಡಲ್ಲ. ಈಗ ಪ್ರಜ್ವಲ್​ ಮರಳಿ ಬೆಂಗಳೂರಿಗೆ ಬರ್ತಿದ್ದಾನೆ. ಹಾಗಾದ್ರೆ ಪ್ರತಿಭಟನೆಗು ಇಲ್ಲಿಗೆನೇ ನಿಲ್ಲುತ್ತಾ ಅಥವಾ ಇನ್ನಷ್ಟು ಉಗ್ರ ರೂಪ ಪಡೆದುಕೊಳ್ಳುತ್ತಾ ಎಂಬುದು ತಿಳಿದಿಲ್ಲ. ಪ್ರಜ್ವಲ್‌ ರೇವಣ್ಣ​ ಕಾಮಕಾಂಡ ಬಟಾಬಯಲಾಗಿದ್ದ ಕ್ಷಣದಿಂದ ಜನರು ರೊಚ್ಚಿಗೆದ್ದಿದ್ದರು. ದಿನದಿಂದ ದಿನಕ್ಕೆ ಇದೇ ಪ್ರತಿಭಟನೆ ರೂಪ ಜ್ವಾಲಾಮುಖಿಯಿಂತೆ ಉಗ್ರ ರೂಪ ತಾಳುತ್ತ ಹೋಯಿತು.

ಇದನ್ನೂ ವೀಕ್ಷಿಸಿ:  ಕೊಲೆಗಾರನನ್ನು ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ..ನಿಜವಾಯ್ತು ವರ್ತೆ ಪಂಜುರ್ಲಿ ನುಡಿ!