ಜವಾಬ್ದಾರಿ ಯಾರಿಗೆ ಕೊಡಬೇಕು ಅಂತಾ ಪಕ್ಷ ನಿರ್ಧರಿಸುತ್ತದೆ: ಸಿ.ಟಿ.ರವಿ
ನಾನು ಯಾವುದೇ ಹುದ್ದೆ ಆಕಾಂಕ್ಷಿಯಲ್ಲ. ಜವಾಬ್ದಾರಿ ಯಾರಿಗೆ ಕೊಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ. ರವಿಗೆ(CT Ravi) ಕೊಕ್ ನೀಡಲಾಗಿದೆ. ಈ ಘಟನೆ ಬೆನ್ನಲ್ಲೇ ರಾಜ್ಯಾಧ್ಯಕ್ಷ ರೇಸ್‌ನಲ್ಲಿ( State president) ಮಾಜಿ ಶಾಸಕನ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೇ ಆಗಸ್ಟ್ 2 ರಂದು ಬಿಜೆಪಿ ಹೈಕಮಾಂಡ್ (BJP Highcommand) ನಾಯಕರನ್ನು ಸಿ.ಟಿ. ರವಿ ಭೇಟಿಯಾಗಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರಾಜ್ಯಾಧ್ಯಕ್ಷ ಹುದ್ದೆ ಹೇಳಿ ಕೇಳಿ ಪಡೆಯುವ ಹುದ್ದೆಯಲ್ಲ. ಜವಾಬ್ದಾರಿ ಯಾರಿಗೆ ಕೊಡಬೇಕು ಅಂತಾ ಪಕ್ಷ ನಿರ್ಧರಿಸುತ್ತದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಿ.ಟಿ.ರವಿ ಹೇಳಿದ್ದಾರೆ. ನನಗೆ ಯಾವುದೇ ಹುದ್ದೆ ಕೊಟ್ಟರೂ ಸ್ವೀಕರಿಸುತ್ತೇನೆ. ಇಲ್ಲ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ. ನಾನು ಸದಕಾಲ ಪಕ್ಷಕ್ಕಾಗಿಯೇ ದುಡಿಯುತ್ತೇನೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ವಿರುದ್ಧ ಮತ್ತೊಂದು ತನಿಖಾಸ್ತ್ರ : ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಸಾಧ್ಯತೆ