Asianet Suvarna News Asianet Suvarna News

ಉಡುಪಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಕೇಸ್: ಆರೋಪಿಗಳ ವಿರುದ್ಧ ದುರ್ಬಲ ಸೆಕ್ಷನ್ ದಾಖಲು..?

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೋರ್ಟ್‌ನಿಂದ ಜಾಮೀನು
ಬಹಿರಂಗ ಹೇಳಿಕೆ ನೀಡಿದ್ದ ವಿದ್ಯಾರ್ಥಿನಿಗೆ ಬೆದರಿಕೆ..?
ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ

ಉಡುಪಿಯ ನೇತ್ರಾ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ(Udupi Hindu girls video case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಪ್ರತಿಭಟನೆ(BJP protest), ಆಕ್ರೋಶ ಹೆಚ್ಚಾಗುತ್ತಲೇ ಇದೆ. ಇನ್ನೂ ಪ್ರತಿಭಟನೆಗೆ ಮಣಿದು ಕೇಸ್ ದಾಖಲಿಸಿಕೊಂಡ ಮಲ್ಪೆ ಪೊಲೀಸರು(Police) ಆಮೆ ನಡಿಗೆಯಲ್ಲಿದ್ದಂತೆ ಕಾಣ್ತಿದೆ. ಆರೋಪಿಗಳಾದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ದಾಖಲಿಸಿ 3 ದಿನ ಕಳೆದ್ರೂ ಇದುವರೆಗೂ ಅವರ ವಿಚಾರಣೆ ನಡೆಸದೆ ಮೌನ ವಹಿಸಿದೆ. ಜುಲೈ 18 ರಂದು ಘಟನೆ ನಡೆದಿದ್ದು, 10 ದಿನಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣ ದಾಖಲಾಗಿ ಮೂರು ದಿನ ಕಳೆದ್ರೂ ಅವರ ವಿಚಾರಣೆ ನಡೆಸಿಲ್ಲ. ಸಂತ್ರಸ್ತ ಹಿಂದೂ ಯುವತಿಯರ(Hindu girls statement) ಹೇಳಿಕೆಯನ್ನೂ ಪಡೆಯದ ಪೊಲೀಸರ ನಿರ್ಲಕ್ಷ್ಯ ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ವೀಕ್ಷಿಸಿ:  News Hour: ಸಿಎಂ ಸೊಸೆ-ಹೆಂಡ್ತಿ ಬಗ್ಗೆ ಮಾತಾಡಿದ್ರೆ ಕೇಸ್‌, ಉಡುಪಿ ಹೆಣ್ಮಕ್ಕಳಿಗೆ ನ್ಯಾಯ ಕ್ಲೋಸ್‌!