News Hour: ಸಿಎಂ ಸೊಸೆ-ಹೆಂಡ್ತಿ ಬಗ್ಗೆ ಮಾತಾಡಿದ್ರೆ ಕೇಸ್, ಉಡುಪಿ ಹೆಣ್ಮಕ್ಕಳಿಗೆ ನ್ಯಾಯ ಕ್ಲೋಸ್!
ಉಡುಪಿ ಕೇಸ್ ವಿಚಾರದಲ್ಲಿ ಸರ್ಕಾರ ತನಿಖೆನೇ ಮಾಡೋದಿಲ್ಲವೇನು ಎನ್ನುವಷ್ಟು ಅನುಮಾನಗಳ ವ್ಯಕ್ತವಾಗಿದೆ. ಕಾರಣವೇನೆಂದರೆ, ಇಡೀ ಪ್ರಕರಣಕ್ಕೆ ಕಾರಣವಾದ ಮೂವರು ಹುಡುಗಿಯರು ಆರಾಮವಾಗಿ ತಿರುಗಾಡಿಕೊಂಡಿದ್ದರೆ, ಈ ವಿಚಾರದ ಬಗ್ಗೆ ಸರ್ಕಾರವನ್ನು ಟೀಕಿಸಿದವರ ಮೇಲೆ ಕೇಸ್‌ಗಳು ಬೀಳುತ್ತಿದೆ.
ಬೆಂಗಳೂರು (ಜು.28): ಉಡುಪಿ ಕಾಲೇಜಿನಲ್ಲಿ ವಿಡಿಯೋ ಮಾಡಿದ್ದಾರೆ ಎನ್ನಲಾದ ಆ ಮೂವರು ಹುಡುಗಿಯರಿಗೆ ವಿಚಾರಣೆಗೆ ಬನ್ನಿ ಎನ್ನುವ ಕನಿಷ್ಠ ನೋಟಿಸ್‌ಅನ್ನು ಕೂಡ ಪೊಲೀಸ್ ಇಲಾಖೆ, ಸಿಎಂ ಅವರ ಸೊಸೆ-ಹೆಂಡ್ತಿ ಬಗ್ಗೆ ಟ್ವೀಟ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ತನ್ನ ಪೊಲೀಸ್ ಅಧಿಕಾರಿಗಳನ್ನು ತುಮಕೂರಿಗೆ ಕಳಿಸಿ ಶಂಕುಂತಲಾ ಎನ್ನುವವರು ಬಂಧಿಸಿದ್ದಾರೆ.
ಇದಕ್ಕೂ ಮುನ್ನ ಇದೇ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದ ರಶ್ಮಿ ಸಮಂತ್ ಎನ್ನುವ ಹುಡುಗಿಯ ಮನೆಗೆ ಇದೇ ಪೊಲೀಸರು ರಾತ್ರೋರಾತ್ರಿ ತೆರಳಿದ್ದರು. ಒಟ್ಟಾರೆ, ಇಡೀ ಪ್ರಕರಣ ಹೋಗುತ್ತಿರುವ ರೀತಿಯನ್ನು ನೋಡಿದರೆ ವಿಚಾರಣೆಯೇ ನಡೆಯದೇ ಕೇಸ್ ಕ್ಲೋಸ್ ಆಗುವ ಅನುಮಾನಗಳು ವ್ಯಕ್ತವಾಗಿದೆ.
'ಈಗ್ಲೇ 65, ಮುಂದೆ ಇನ್ನೆಷ್ಟು ಸೀಟ್‌ಗೆ ಜನ ಇಳಿಸ್ತಾರೋ..' ಯಶ್‌ಪಾಲ್ ಸುವರ್ಣಗೆ ಗೃಹ ಸಚಿವರ ತಿರುಗೇಟು
ಶುಕ್ರವಾರ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ 6 ಮಂದಿ ಅಧಿಕಾರಿಗಳು ತುಮಕೂರಿಗೆ ತೆರಳಿ ಅಲ್ಲಿದ್ದ ಶಕುಂತಲಾ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಆದರೆ, ಇಡೀ ಉಡುಪಿ ಕೇಸ್‌ನಲ್ಲಿ ಆರೋಪಿ ಎಂದು ಹೇಳಲಾಗುತ್ತಿರುವ ಮೂವರು ವಿದ್ಯಾರ್ಥಿನಿಯರಿಗೆ ಒಂದು ನೋಟಿಸ್ ಕಳಿಸಿ ವಿಚಾರಣೆಗೆ ಬನ್ನಿ ಎಂದು ಹೇಳಲು ಇನ್ನೂ ಸಾಧ್ಯವಾಗಿಲ್ಲ.