ಹುಬ್ಬಳ್ಳಿ ಧಾರವಾಡ ನಗರದಲ್ಲಿ ಹೆಚ್ಚಾದ ಸೈಬರ್ ಅಪರಾಧ: ದಿನಕ್ಕೊಂದು ವರಸೆ, ಮೋಸ..ಕ್ರಿಮಿನಲ್‌ಗಳ ನಾನಾ ವೇಷ!
ಮೂವರು ವ್ಯಕ್ತಿಗಳಿಗೆ ಹುಬ್ಬಳ್ಳಿಯಲ್ಲಿ 1.4 ಕೋಟಿ ರೂಪಾಯಿ ವಂಚನೆ
ಕ್ರಿಪ್ಪೋ ಕರೆನ್ಸಿ ಖರೀದಿ ಮಾಡಿದ್ರೆ ಲಾಭ ಪಡೆಯಬಹುದೆಂದು ವಂಚನೆ
ಹುಬ್ಬಳ್ಳಿ ಉದ್ಯಮಿ ಶಿವಾನಂದ ಪಾವಸ್ಕರ್ , ಇಬ್ಬರು ಸ್ನೇಹಿತರಿಗೆ ವಂಚನೆ
ಹುಬ್ಬಳ್ಳಿ-ಧಾರವಾಡ (Hubli-Dharwad)ನಗರದಲ್ಲಿ ಸೈಬರ್ ಅಪರಾಧಗಳು(Cyber crimes) ಹೆಚ್ಚಾಗುತ್ತಿದ್ದು, ದಿನಕ್ಕೊಂದು ವರಸೆ, ಮೋಸವನ್ನು ಕ್ರಿಮಿನಲ್‌ಗಳು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಜನ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಕ್ರಿಪ್ಪೋ ಕರೆನ್ಸಿ(Crypto currency) ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ. ಮೂವರು ವ್ಯಕ್ತಿಗಳಿಗೆ ಬರೋಬ್ಬರಿ 1.4 ಕೋಟಿ ರೂ. ವಂಚನೆ ಮಾಡಲಾಗಿದೆ. ಕ್ರಿಪ್ಪೋ ಕರೆನ್ಸಿ ಖರೀದಿಸಿದ್ರೆ ಹೆಚ್ಚಿನ ಲಾಭ ಪಡೆಯಬಹುದೆಂದು ವಂಚನೆ ಮಾಡಲಾಗಿದೆ. ಹುಬ್ಬಳ್ಳಿ(Hubli) ಉದ್ಯಮಿ ಶಿವಾನಂದ ಪಾವಸ್ಕರ್ ಹಾಗೂ ಇಬ್ಬರು ಸ್ನೇಹಿತರಿಗೆ ವಂಚನೆ ಮಾಡಲಾಗಿದ್ದು, ಗೋಕುಲ ರಸ್ತೆಯ ಶಿವಾನಂದ, ಪ್ರವೀಣ ಕುಲಕರ್ಣಿ, ಸುಜೀತ್ ಕಲಬುರ್ಗಿಗೆ ವಂಚನೆ ಮಾಡಲಾಗಿದೆ. ಫೇಸ್‌ಬುಕ್‌ನಲ್ಲಿ ಕ್ರಿಪ್ಲೋ ಕರೆನ್ಸಿ ಜಾಹೀರಾತು ನೋಡಿ ವ್ಯಕ್ತಿಗಳು ಮೋಸ ಹೋಗಿದ್ದಾರೆ. ಫೇಸ್ ಬುಕ್‌ನಲ್ಲಿದ್ದ ನಂಬರ್ ಮೂಲಕ ಛಾಯಾಸಿಂಗ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು, ವೆಬ್‌ಸೈಟ್‌ಗಳ ಲಿಂಕ್ ಕಳಿಸಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಲು ಸೂಚನೆ ನೀಡಲಾಗಿದೆ. ಇದನ್ನು ನಂಬಿದ ಮೂವರಿಂದಲೂ ಲಿಂಕ್ ಇನ್‌ಸ್ಟಾಲ್ ಮಾಡಲಾಗಿದೆ. ಮೂವರ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ. ಶಿವಾನಂದ ಖಾತೆಯಿಂದ 68.99 ಲಕ್ಷ ರೂ., ಸುಜಿತ್ ಖಾತೆಯಿಂದ 14.85 ಲಕ್ಷ, ಪ್ರವೀಣ್ ಕುಲಕರ್ಣಿ ಖಾತೆಯಿಂದ 21.5 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ನಟ ದರ್ಶನ್‌ಗೆ ಜೈಲಲ್ಲಿ ಊಟ ಸೇರ್ತಿಲ್ವಾ..? ನಿದ್ರೆ ಬರ್ತಿಲ್ವಾ..? ಪೊಲೀಸರ ಆಕ್ಷೇಪಣೆಯಲ್ಲಿ ಏನಿದೆ..?