ನಟ ದರ್ಶನ್‌ಗೆ ಜೈಲಲ್ಲಿ ಊಟ ಸೇರ್ತಿಲ್ವಾ..? ನಿದ್ರೆ ಬರ್ತಿಲ್ವಾ..? ಪೊಲೀಸರ ಆಕ್ಷೇಪಣೆಯಲ್ಲಿ ಏನಿದೆ..?

ಜೈಲಿನಲ್ಲಿ ಇರುವಾಗಲೂ ಸಮಸ್ಯೆ ಇದೆ ಅಂತ ಮೆಡಿಕಲ್ ರೆಕಾರ್ಡ್ ಇಲ್ಲ
ದರ್ಶನ್‌ಗೆ ಆರೋಗ್ಯ ಸಮಸ್ಸೆ ಇದೆ ಅಂತಾ ಅಧಿಕಾರಿಗಳು ವರದಿ ನೀಡಿಲ್ಲ
ಯಾವುದೇ ವೈದ್ಯರು ದರ್ಶನ್‌ಗೆ ಸಮಸ್ಯೆ ಇದೆ ಅಂತ ಮಾಹಿತಿ ನೀಡಿಲ್ಲ
 

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ದರ್ಶನ್ (Darshan) ಟೀಂ ಜೈಲಿಗೆ ಹೋಗಿ 29 ದಿನವಾಗಿದ್ದು, ನಟನಿಗೆ ಜೈಲಲ್ಲಿ ಊಟ ಸೇರ್ತಿಲ್ವಾವಂತೆ ಜೊತೆಗೆ ನಿದ್ರೆ ಬರ್ತಿಲ್ವಾವಂತೆ. ಜೈಲಲ್ಲಿ ಟೈಂ ಪಾಸ್ ಮಾಡೋದಕ್ಕೆ ಆಗದೇ ದರ್ಶನ್‌ ಹೈರಾಣಾಗಿದ್ದಾರಂತೆ. ಮನೆ ಊಟ, ಹಾಸಿಗೆ, ಪುಸ್ತಕವನ್ನು ದರ್ಶನ್‌ ಕೋರಿದ್ದರು. ಈ ಎಲ್ಲಾ ಸವಲತ್ತಿಗೆ ನಟ ದರ್ಶನ್‌ ಹೈಕೋರ್ಟ್‌ಗೆ(High court) ಅರ್ಜಿ ಸಲ್ಲಿಸಿದ್ದಾರಂತೆ. ನಿನ್ನೆ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಅರ್ಜಿಗೆ ಪೊಲೀಸರ(Police) ಪರ ಎಸ್‌ಪಿಪಿ(SPP) ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಕೋರ್ಟ್‌ ಮುಂದೂಡಿದೆ. ಹೈಕೋರ್ಟ್‌ಗೆ ಕೊಟ್ಟ ಆಕ್ಷೇಪಣೆಯಲ್ಲಿ ಹಲವು ಅಂಶ ಉಲ್ಲೇಖ ಮಾಡಲಾಗಿದ್ದು, ರಿಟ್ ಅರ್ಜಿ ಸಲ್ಲಿಸುವ ಮೊದಲು ಅಗತ್ಯ ಕಾನೂನು ಪ್ರಕ್ರಿಯೆ ಅಗತ್ಯವಾಗಿದೆ. ಹಲವು ಮಾಹಿತಿ ಉಲ್ಲೇಖಿಸಿ ರಿಟ್ ಅರ್ಜಿಯನ್ನು ಎಸ್‌ಪಿಪಿ ಸಲ್ಲಿಸಿದೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರ ವಿರುದ್ಧ ಅಪಸ್ವರ: ಸಿಎಂ ಮುಂದೆ ಅನುದಾನಕ್ಕೆ ಬಿಗಿಪಟ್ಟು ಹಿಡಿದ ಶಾಸಕರು!

Related Video