Asianet Suvarna News Asianet Suvarna News

ಎಲ್ಲಾ ಬೆಳಗ್ಗೆ ಕೆಲಸಕ್ಕೆ ಹೋದ್ರೆ, ಇವ್ರು ಹೋಗೋದು ಮಾತ್ರ ಕಳ್ಳತನಕ್ಕೆ..ಇಲ್ಲೊಂದು ಕಳ್ಳರ ಕುಟುಂಬ..!

ಇಲ್ಲೊಂದು ಕುಟುಂಬದ ಐವರು ಸದಸ್ಯರೂ ಕಳ್ಳರಾಗಿದ್ದು, ಕಳ್ಳತನದಿಂದಲೇ ಬೆಂಗಳೂರಿನ ಬನಶಂಕರಿಯಲ್ಲಿ ಮನೆಯೊಂದನ್ನು ಕಟ್ಟಿದ್ದಾರೆ.

ಇವರದು ತುಂಬು ಕುಟುಂಬ ಆದ್ರೆ ಮಾಡೋದು ಮಾತ್ರ ಮನೆಹಾಳ್‌ ಕೆಲಸ. ಸಂಪಂಗಿರಾಮನಗರ ಪೊಲೀಸರು (Sampangiramanagar police) ಭರ್ಜರಿ ಕಾರ್ಯಾಚರಣೆ ನಡೆಸಿ, ಈ ಖತರ್ನಾಕ್‌ ಕಳ್ಳರನ್ನು(theives) ಹಿಡಿದಿದ್ದಾರೆ. ಈ ಇಡೀ ಕುಟುಂಬದ ಕೆಲಸವೇ ಕಳ್ಳತನವಾಗಿದೆ. ಎಲ್ಲಾರು ಬೆಳಗ್ಗೆ ಎದ್ದು ಕೆಲಸಕ್ಕೆ ಹೋದ್ರೆ, ಇವರು ಮಾತ್ರ ಕಳ್ಳತನ(theft) ಮಾಡಲು ಹೋಗುತ್ತಾರೆ. ಮೆಜೆಸ್ಟಿಕ್‌, ಮಾರ್ಕೆಟ್‌, ಶಾಂತಿನಗರ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಸ್ಥಳವನ್ನು ಇವರು ಟಾರ್ಗೆಟ್ ಮಾಡಿ, ಕಳ್ಳತನ ಮಾಡುತ್ತಾರೆ. ಕದ್ರಿವೇಲು, ಸಾಯಿದ್‌, ಮಹೇಶ್‌, ಕನ್ಯಾಕುಮಾರ್‌, ಸುಂದರರಾಜು ಇವರೆಲ್ಲಾ ಒಂದೇ ಕುಟುಂಬದ ಕಳ್ಳರಾಗಿದ್ದಾರೆ. ಇವರು ಪ್ರಯಾಣಿಕರ ಸೋಗಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು. ಕಳ್ಳತನದಿಂದಲೇ ಬನಶಂಕರಿಯಲ್ಲಿ(Banashankari) ಸ್ವಂತ ಮನೆ ಸಹ ಕಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಲಬುರಗಿಯಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವು: ಭರ್ತಿ ಸನಿಹಕ್ಕೆ ಕಬಿನಿ ಜಲಾಶಯ

Video Top Stories