Asianet Suvarna News Asianet Suvarna News

ಕಲಬುರಗಿ ನಾಗರಿಕರೇ ಎಚ್ಚರ..ಎಚ್ಚರ ! ಹಣ ಎಗರಿಸುವ ಕಳ್ಳರ ಗ್ಯಾಂಗ್‌ ಬಂದಿದೆ ಹುಷಾರ್ !

ಕಿರಾಣಿ ಅಂಗಡಿಯ ಮಾಲೀಕ ನಿತಿನ್ ಬಾವ ಎನ್ನುವವರಿಗೆ ಸೇರಿದ ಹಣವನ್ನು ಕಳ್ಳರು ಕ್ಷಣ ಮಾತ್ರದಲ್ಲಿ ಎಗರಿಸಿರುವ ಘಟನೆ ಕಲಬುರಗಿ ನಗರದ ಚೌಕ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

First Published Feb 17, 2024, 2:36 PM IST | Last Updated Feb 17, 2024, 2:36 PM IST

ಕಲಬುರಗಿ: ಜಿಲ್ಲೆಯಲ್ಲಿ ಹಣ ಎಗರಿಸುವ ಕಳ್ಳರ(Thieves) ಗ್ಯಾಂಗ್‌ವೊಂದು ಬಂದಿದ್ದು, ಕ್ಷಣ ಮಾತ್ರದಲ್ಲಿ ನಿಮ್ಮ ಗಮನ ಬೇರೆಡೆ ಸೆಳೆದು ದುಡ್ಡನ್ನು ಎಗರಿಸುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಮೂಲದ ಕಳ್ಳರ ಗ್ಯಾಂಗ್‌ ಕಲಬುರಗಿಯಲ್ಲಿ ಆ್ಯಕ್ಟೀವ್ ಆಗಿದೆ. ಬೈಕ್‌(Bike) ಡಿಕ್ಕಿಯಲ್ಲಿ ಇದ್ದ 2 ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಕಳ್ಳನ ಈ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಪಿಟರ್‌ ಬೈಕ್‌ ಡಿಕ್ಕಿಯಲ್ಲಿ ಇಟ್ಟಿದ್ದ ಎರಡು ಲಕ್ಷ ರೂಪಾಯಿಯನ್ನು ಕಳ್ಳ ಕದ್ದಿದ್ದಾನೆ. ಕಲಬುರಗಿಯ(Kalaburagi) ಸೂಪರ್ ಮಾರ್ಕೆಟ್ ಘಟನೆ ನಡೆದಿದೆ. ಕಿರಾಣಿ ಅಂಗಡಿಯ ಮಾಲೀಕ ನಿತಿನ್ ಬಾವ ಎನ್ನುವವರಿಗೆ ಸೇರಿದ ಹಣ(Money) ಇದಾಗಿದೆ. ನಿನ್ನೆ ಸಂಜೆ ವ್ಯಾಪಾರ ಮುಗಿಸಿಕೊಂಡು ತನ್ನ ಅಂಗಡಿ ಬಂದ್ ಮಾಡಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಕಲಬುರಗಿ ನಗರದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ವೀಕ್ಷಿಸಿ: ಕರಾವಳಿಯ ಮೋದಿ ಹವಾಗೆ ಕಾಂಗ್ರೆಸ್ ಠಕ್ಕರ್ ಕೊಡುತ್ತಾ? ಖರ್ಗೆ ಸೂಚನೆಯಂತೆ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ

Video Top Stories