Asianet Suvarna News Asianet Suvarna News

ಕರಾವಳಿಯ ಮೋದಿ ಹವಾಗೆ ಕಾಂಗ್ರೆಸ್ ಠಕ್ಕರ್ ಕೊಡುತ್ತಾ? ಖರ್ಗೆ ಸೂಚನೆಯಂತೆ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ

ಮಂಗಳೂರಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣಾ ಸಮಾವೇಶ
ಕರಾವಳಿಯ ಮೋದಿ ಹವಾಗೆ ಕಾಂಗ್ರೆಸ್ ಠಕ್ಕರ್ ಕೊಡುತ್ತಾ..?
ಖರ್ಗೆ ಸೂಚನೆಯಂತೆ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ

ಬಿಜೆಪಿ ಭದ್ರಕೋಟೆಯಿಂದಲೇ ಕಾಂಗ್ರೆಸ್ ಲೋಕಸಭೆಗೆ ಕಹಳೆ ಮೊಳಗಿಸಿದೆ. ಮಂಗಳೂರಿನಿಂದಲೇ(Mangalore) ಲೋಕಸಭಾ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ಕೇಸರಿ(BJP) ಪಡೆಯ ಭದ್ರ ಕೋಟೆಯಲ್ಲಿ ಕೈ ಪಡೆ  ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದೆ. ಮಂಗಳೂರಲ್ಲಿ ಕಾಂಗ್ರೆಸ್(Congress) ಲೋಕಸಭಾ ಚುನಾವಣಾ ಸಮಾವೇಶ ನಡೆಸಲು ಮುಂದಾಗಿದೆ. ಕರಾವಳಿಯ ಮೋದಿ ಹವಾಗೆ ಕಾಂಗ್ರೆಸ್ ಠಕ್ಕರ್ ಕೊಡಲು ಮುಂದಾಗಿದೆ. ಮಲ್ಲಿಕಾರ್ಜುನ ಖರ್ಗೆ(Mallikarjuna kharge) ಸೂಚನೆಯಂತೆ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ರಾಜ್ಯಾದ್ಯಂತ ಸುಮಾರು 1 ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ದೇಶದ ಪ್ರತೀ ರಾಜ್ಯದ ಒಂದು ಜಿಲ್ಲೆಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕದಲ್ಲಿ ಮಂಗಳೂರನ್ನೇ ಆಯ್ಕೆ ಮಾಡಿದ ಕೈ ನಾಯಕರು. ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಲೋಕಸಭೆ ಚುನಾವಣೆಗೆ ಕಾರ್ಯಕರ್ತರ ಸಜ್ಜುಗೊಳಿಸಲು ಸಮಾವೇಶ ನಡೆಸಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆಶಿ ಭಾಗಿಯಾಗಲಿದ್ದಾರೆ. ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳು ಭಾಗಿಯಾಗಲಿದ್ದು, ಮೊದಲ‌ ಚುನಾವಣಾ ಸಮಾವೇಶದಲ್ಲಿ ಮುಂಚೂಣಿ ನಾಯಕರಿಗೆ ಸಂದೇಶ ರವಾನಿಸಲಿದ್ದಾರೆ. ಲೋಕಸಭಾ ಚುನಾವಣೆ ಎದುರಿಸಲು ನಾಯಕರಿಂದ ಸಂದೇಶ ಬರಲಿದೆ. ಕಾರ್ಯಕರ್ತರ ಶಕ್ತಿ ಪ್ರದರ್ಶನದ ಮೂಲಕ ಚುನಾವಣೆಗೆ ಸಿದ್ಧರಾಗಲು ಕರೆ. 

ಇದನ್ನೂ ವೀಕ್ಷಿಸಿ: ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದೇನೆ: ರಾಜೀವ್ ಚಂದ್ರಶೇಖರ್

Video Top Stories