
ಅವಳಿನಗರ ಪೊಲೀಸರ ಮುಂದೆ ಚಾಲೆಂಜಿಂಗ್ ಟಾಸ್ಕ್..! ಸಣ್ಣ ಸುಳಿವೂ ಇಲ್ಲದ ಕೇಸ್‌ನಲ್ಲಿ ಖದೀಮರ ಬಂಧಿಸಿದ್ದೇಗೆ..?
ಇದೊಂದು ಪೊಲೀಸರ ಚಾಲೆಂಜಿಂಗ್ ಟಾಸ್ಕ್ ಸ್ಟೋರಿ. ಅಲ್ಲೊಂದು ಕಳ್ಳತನವಾಗಿತ್ತು. ಆದ್ರೆ, ಕಳ್ಳತನ ಮಾಡಿದ್ಯಾರು ಅನ್ನೋದಕ್ಕೆ ಒಂದೇ ಒಂದು ಸಣ್ಣ ಕ್ಲೂ ಕೂಡ ಇರಲಿಲ್ಲ. ಇಂಥ ಚಾಲೆಂಜಿಂಗ್ ಕೇಸ್ ಬೆನ್ನತ್ತಿದ ಅವಳಿನಗರ ಪೊಲೀಸರು, ಕೇವಲ ಐದೇ ದಿನದಲ್ಲಿ ಖದೀಮರ ಕೈಗೆ ಕೋಳ ತೊಡಿಸಿ ಶಹಬ್ಬಾಶ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್. ಇದು ಜನಸಾಮಾನ್ಯರಿಗೆ ಸಾಲ ಸೌಲಭ್ಯ. ಜನಸಾಮಾನ್ಯರ ಶ್ರೇಯೋಭಿವೃದ್ಧಿ ಕೆಲಸ ಮಾಡಿಕೊಂಡು ಬರ್ತಿರು ಸಂಘ. ಬಡವರ ಪಾಲಿನ ಭರವಸೆ ಬೆಳಕು. ಧಾರವಾಡದ(Dharwad) ರಾಯಾಪೂರದ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕೂಡ ಹೀಗೆ ಜನರ ಸೇವೆ ಮಾಡಿಕೊಂಡು ಬರ್ತಿದೆ. ಹೀಗಿರುವಾಗ ಅಕ್ಟೋಬರ್ 24ರಂದು ಈ ಟ್ರಸ್ಟ್ ಸಿಬ್ಬಂದಿಗೆ ದೊಡ್ಡ ಶಾಕ್ ಕಾದಿತ್ತು.ಯಾಕಂದ್ರೆ, ಖದೀಮರು ಟ್ರಸ್ಟ್ನಲ್ಲಿದ್ದ ಬರೋಬ್ಬರಿ ಒಂದು ಕೋಟಿ 24 ಲಕ್ಷದ 48 ಸಾವಿರದ 87 ರೂಪಾಯಿ ಕಳ್ಳತನ(Theft) ಮಾಡಿಬಿಟ್ಟಿದ್ರು. ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಹಣ ಕಳ್ಳತನವಾಗಿದೆ. ಯಾರು ಕಳ್ಳತನ ಮಾಡಿದ್ದು. ಸಾಕ್ಷಿಗೆ ಸಿಸಿಟಿವಿ ನೋಡೋಣ ಅಂದ್ರೆ ಸಿಸಿಟಿವಿಯನ್ನೇ ಅಳವಡಿಸಿಲ್ಲ. ಧಾರವಾಡ ವಿದ್ಯಾಗಿರಿ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಚಾಲೆಂಜಿಂಗ್ ಕೇಸ್ ಬೆನ್ನತ್ತಿದ್ದ ಪೊಲೀಸರು ಸಾಧಿಸಿಯೇ ಬಿಟ್ಟಿದ್ದಾರೆ.. ಬರೋಬ್ಬರಿ 10 ಮಂದಿ ಖದೀಮರ ಕೈಗೆ ಕೋಳ ತೊಡಿಸಿದ್ದಾರೆ. ಒಂದೇ ಒಂದು ಪ್ರತ್ಯಕ್ಷ ಸಾಕ್ಷಿಗಳು, ಸುಳಿವಿಲ್ಲದ ಕೇಸ್ನ್ನು ಬೆನ್ನತ್ತಿದ ಪೊಲೀಸರಿಗೆ(Police) ಕಳ್ಳರ ಹಿಡಿಯೋದೆ ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಅವಳಿ ನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ವಿಶೇಷ ತಂಡವೊಂದನ್ನ ರಚಿಸಿದ್ರು..ಎಸಿಪಿ ಪ್ರಶಾಂತ ಸಿದ್ದನಗೌಡರ, ಸಿಪಿಐ ಸಂಗಮೇಶ ದಿಡಗಿನಾಳ್ ಮಾರ್ಗದರ್ಶನದಲ್ಲಿ ಫಿಲ್ಡಿಗಿಳಿದ ಪೊಲೀಸರು ಐದೇ ದಿನಗಳಲ್ಲಿ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಕೇವಲ ವೈಜ್ಞಾನಿಕ ಕುರುಗಳ ಆಧಾರದ ಮೇಲೆ 10 ಮಂದಿ ಬಂಧಿಸಿದ್ದಾರೆ.ಆದ್ರೆ, ಇಲ್ಲೊಂದು ಶಾಕಿಂಗ್ ವಿಷ್ಯ ಏನಂದ್ರೆ ಬಂಧಿತ 10 ಮಂದಿಯಲ್ಲಿ ಮೂವರು ಆರೋಪಿಗಳು ಇದೇ ಟ್ರಸ್ಟ್ನಲ್ಲಿ ಕೆಲಸ ಮಾಡುತ್ತಿದ್ದವರು. ಧರ್ಮಸ್ಥಳ ಟ್ರಸ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಕುಶಾಲ ಕುಮಾರ್ , ಬಸವರಾಜ್, ಮಹಾಂತೇಶ್.. ಈ ಮೂವರು ಉಳಿದ 7 ಜರನ್ನು ಸೇರಿಸಿಕೊಂಡು ಸ್ಕೆಚ್ ಹಾಕಿ ಹಣ ದೋಚಿದ್ದಾರೆ. ಸಿಸಿಟಿವಿಯಿಲ್ಲ.. ತಗಲಾಕ್ಕೊಳ್ಳೋಕೆ ಸಾಧ್ಯವೇ ಇಲ್ಲ ಅನ್ನೋ ಯೋಚನೆಯಲ್ಲಿದ್ದ ಖದೀಮರಿಗೆ ಅವಳಿನಗರದ ಸೂಪರ್ ಕಾಪ್ ಕೋಳ ತೊಡಿಸಿದೆ. ತಮ್ಮ ಸಿಬ್ಬಂದಿ ಕಾರ್ಯ ವೈಖರಿಗೆ ಫಿದಾ ಆದ ಪೊಲೀಸ್ ಕಮಿಷನರ್, ಎಲ್ಲಾ ಸಿಬ್ಬಂದಿಗೆ ಶೇಕ್ ಹ‌್ಯಾಂಡ್ ಮಾಡಿ ಶಹಬ್ಬಾಶ್ ಗಿರಿ ಕೊಟ್ಟರು.
ಇದನ್ನೂ ವೀಕ್ಷಿಸಿ: ದಾಂಪತ್ಯ ಕಲಹಕ್ಕೆ ಎರಡು ಜೀವಗಳು ಬಲಿ: ಹೆಂಡತಿ ಕರೆಯಲು ಬಂದವ ಮಾವನನ್ನೇ ಕೊಂದ !