ಮಾಮಾ ಮಚ್ಚ ಅಂತಿದ್ದವರೇ ಮಚ್ಚು ಬೀಸಿದ್ರು: ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಟೆ ಕಟ್ಟಿದ್ರು..
ರೌಡಿಸಂ ಮಾಡಬೇಕು ಅಂತಲೇ ಹಪಹಪಿಸುತ್ತಿದ್ದವರು ಅವರು. ಇನ್ನೂ ಅವರ ಕಥೆ ಮುಗಿಸಿದ ಗ್ಯಾಂಗ್ ಕೂಡ ಇವರಿಗೆ ಗೊತ್ತಿರಲಿಲ್ಲ ಅಂತೇನಿಲ್ಲ. ಹೊಡೆದೋರು, ಹೊಡೆಸಿಕೊಂಡವರು ಎಲ್ರೂ ಒಟ್ಟಿಗೇ ರೀಲ್ ಮಾಡಿದವರೇ. ಹಾಗಾದ್ರೆ ಒಟ್ಟಿಗೇ ಇದ್ದವರೇ ಮೂಟೆ ಕಟ್ಟಿದ್ದೇಕೆ ಇಲ್ಲಿದೆ ಡಿಟೇಲ್ಸ್.
ಅವರು ಇನ್ನೂ 25 ಕೂಡ ದಾಟಿರದ ಹುಡುಗರು. ಮೀಸೆ ಚಿಗುರುತ್ತಿದ್ದಂತೆ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಿಕೊಳ್ಳಬೇಕು ಅಂತ ಹೊರಟವರು. ಅವರು ಮಾಡ್ತಿದ್ದ ರೀಲ್ಸ್‌ಗಳೇ ಹೇಳ್ತಿದ್ವು ಆ ಹುಡುಗರ ಮನಸ್ಥಿತಿ ಹೇಗಿತ್ತು ಅಂತ. ಬರೀ ರೌಡಿಸಂ ರೀಲ್ಸ್‌ಗಳನ್ನು ಮಾಡಿಕೊಂಡು ಕೈಲಾಗದವರು ಸಿಕ್ರೆ ತಮ್ಮ ಪೌರುಷ ತೋರಿಸಿ ಓಡಾಡಿಕೊಂಡಿದ್ದ ಅದೊಂದು ಗ್ಯಾಂಗ್ ಅವತ್ತು ಎರಡು ಭಾಗವಾಗಿಬಿಟ್ಟಿತ್ತು. ಅವರವರಲ್ಲೇ ಜಗಳ ಶುರುವಾಗಿಬಿಟ್ಟಿತ್ತು. ಮಾಮಾ ಮಚ್ಚ ಅಂತಿದ್ದವರು ಅಮ್ಮ ಅಕ್ಕ ಅಂತ ಕರೆಯೋದಕ್ಕೆ ಶುರು ಮಾಡಿಬಿಟ್ಟಿದ್ರು. ಆದ್ರೆ ಕೊನೆಗೆ ಒಬ್ಬರನ್ನೊಬ್ಬರ ಮೇಲೆ ಮಚ್ಚು ಬೀಸುವಷ್ಟರ ಮಟ್ಟಿಗೆ ಬಂದು ನಿಂತುಬಿಟ್ರು. ಆ ಎರಡು ಗ್ಯಾಂಗ್ ಗಳ ವೈಷಮ್ಯದ ಪರಿಣಾಮ ಇವತ್ತು 2 ಹೆಣಗಳು ಬಿದ್ದಿವೆ. ಡಾನ್, ರೌಡಿ ಅಂತ ರೀಲ್ಸ್ ಮಾಡುತ್ತಿದ್ದ ಪುಡಿ ರೌಡಿಗಳು ಬೀದಿ ಹೆಣವಾಗಿದ್ದಾರೆ. ಆ ದುರಂತದ ಡಿಟೇಲ್ಡ್ ಸ್ಟೋರಿ ಇಲ್ಲಿದೆ... ವಿಡಿಯೋ ನೋಡಿ