Raichur Murder: ಗೆಳೆಯನ ಲವರ್‌ಗಾಗಿ ಸ್ವಂತ ತಾತನನ್ನೇ ಹತ್ಯೆಗೈದ ಮೊಮ್ಮಗ..!

*  ನ.21 ರಂದು ನಡೆದಿದ್ದ ಬರ್ಬರ ಕೊಲೆ
*  ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿದ್ದ ರಾಯಚೂರು
*  ಕೊಲೆಯಾದ ಕೇವಲ 40 ಗಂಟೆಗಳಲ್ಲೇ ಆರೋಪಿಗಳನ್ನ ಬಂಧಿಸಿದ ಪೊಲೀಸರು  
 

Share this Video
  • FB
  • Linkdin
  • Whatsapp

ರಾಯಚೂರು(ಡಿ.01): ಹಣ ಅಂದ್ರೆ ಹೆಣ ಕೂಡ ಬಾಯಿಬಡುತ್ತೆ ಅನ್ನೋದು ಸುಳ್ಳಳ್ಳ. ಸಂಬಂಧ, ಸ್ನೇಹ ಯಾವುದು ಕಾಸಿನ ಮುಂದೆ ಲೆಕ್ಕಕ್ಕೆ ಬರೋದಿಲ್ಲ. ಅದರಲ್ಲೂ ಟೀನ್‌ಏಜ್‌ ಹುಡುಗರಿಗೆ ದುಡ್ಡಿನ ರುಚಿ ಚಿಕ್ಕರೆ ದೇವರೇ ಗತಿ. ಅದೇ ಸ್ನೇಹಿತ ಗರ್ಲ್‌ಫ್ರೆಂಡ್‌ಗೆ ಮೊಬೈಲ್‌ ಕೊಡಿಸೋಕೆ ಆ ಪಾಪಿ ಮಾಡಿದ ಘನಂದಾರಿ ಕೆಲಸವನ್ನ ತೋರಿಸ್ತೀವಿ ಇವತ್ತಿನ ಎಫ್‌ಐಆರ್‌ನಲ್ಲಿ. 

Madhagaja Release Date: ಡಿ.3 ರಂದು ಶ್ರೀಮುರಳಿ ನಟನೆಯ 'ಮದಗಜ' ಬಿಡುಗಡೆ

ನ.21 ರಂದು ಮಧ್ಯಾಹ್ನ ಇಡೀ ರಾಯಚೂರು ನಗರ ನುಡುಗಿ ಹೋಗಿತ್ತು. ನಗರದ ಎಟಿಎಂ ಸರ್ಕಲ್‌ ಬಳಿ ನಿಜಲಿಂಗಪ್ಪ ಕಾಲೋನಿಯ ಮನೆಯಯೊಂದರಲ್ಲಿ ವೃದ್ಧ ವ್ಯಕ್ತಿಯೊಬ್ಬರ ಬರ್ಬರ ಹತ್ಯೆಯಾಗಿತ್ತು. ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧನ ಕತ್ತನ್ನು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದರು. ಪಂಪಾಪತಿ(77) ಎಂಬುವರನ್ನೇ ದುಷ್ಕರ್ಮಿಗಳು ಕೊಲೆಗೈದಿದ್ದರು. ಕೊಲೆಯಾದ ಕೇವಲ 40 ಗಂಟೆಗಳಲ್ಲೇ ಆರೋಪಿಗಳನ್ನ ರಾಯಚೂರು ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪಂಪಾಪತಿ ಅವರನ್ನ ದುಷ್ಕರ್ಮಿಗಳು ಕೊಲೆ ಮಾಡಿದ್ದೇಕೆ? ಎಂಬುದರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

Related Video