Madhagaja Release Date: ಡಿ.3 ರಂದು ಶ್ರೀಮುರಳಿ ನಟನೆಯ 'ಮದಗಜ' ಬಿಡುಗಡೆ

ನಟ ಶ್ರೀಮುರಳಿ (Sriimurali) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ (madagaja) ಚಿತ್ರ ಡಿ.3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 01): ನಟ ಶ್ರೀಮುರಳಿ (Sriimurali) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ (madagaja) ಚಿತ್ರ ಡಿ.3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ (Theatre) ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದೆ ಚಿತ್ರತಂಡ. ಅಯೋಗ್ಯ ಮಹೇಶ್‌ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಉಮಾಪತಿ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಬರುವ ಬಹಳಷ್ಟುಪೋಷಕರ ಪಾತ್ರಗಳ ಪೈಕಿ ಈ ಮೂರು ಪಾತ್ರಗಳಿಗೂ ಮಹತ್ವ ಇದೆ. ಈಗಾಗಲೇ ಜಗಪತಿ ಬಾಬು ಕ್ಯಾರೆಕ್ಟರ್‌ ಲುಕ್‌ ಆಚೆ ಬಂದಿದೆ. ಅದೇ ರೀತಿ ರತ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದೇವಯಾನಿ, ಬಸವನಾಗಿ ನಟಿಸುತ್ತಿರುವ ರಂಗಾಯಣ ರಘು ಹಾಗೂ ತಾಂಡವ ಪಾತ್ರಧಾರಿ ಆಗಿರುವ ಗರುಡ ರಾಮ್‌ ಕೂಡ ‘ಮದಗಜ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಲಿದ್ದಾರಂತೆ.

Related Video