ಶ್ರೀಕಿ ಬಳಿ ಬಿಟ್ ಕಾಯಿನ್ ವರ್ಗಾಹಿಸಿಕೊಂಡ್ರಾ ಅಧಿಕಾರಿಗಳು..? ಆ 3 ಪೊಲೀಸ್ ಅಧಿಕಾರಿಗಳು ಯಾರು..?
ಟಿ.ಪಿ.ಶೇಷಾ, ಮಹಾದೇವ ನಾಯ್ಕ್, ಎಚ್.ಎ.ಪರಮೇಶ್ವಗೀಗೆ ಸಮನ್ಸ್
ಶ್ರೀಕಿ ಜೈಲಿನಲ್ಲಿದ್ದಾಗ ಪರಪ್ಪನ ಅಗ್ರಹಾರದ ಡಿಐಜಿಯಾಗಿದ್ದ ಟಿ.ಪಿ ಶೇಷಾ
2000 ದಲ್ಲಿ ಜೈಲು ಸೂಪರಿಂಟೆಂಡೆಂಟ್ ಆಗಿದ್ದ ಮಹಾದೇವ್ ನಾಯ್ಕ್
ಬಿಟ್ ಕಾಯಿನ್ ಹಗರಣಕ್ಕೆ ಮತ್ತೆ ಮರುಜೀವ ಬಂದಿದ್ದು, ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತೊಂದು EXCLUSIVE ಸ್ಟೋರಿಯಾಗಿದೆ. ಬಿಜೆಪಿ(BJP) ಸರ್ಕಾರದಲ್ಲಿ ಈ ಪ್ರಕರಣ ದೊಡ್ಡ ಸಂಚನ ಸೃಷ್ಟಿಸಿತ್ತು. ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದ್ದು, ಜೈಲು ಅಧಿಕಾರಿಗಳನ್ನು SIT ವಿಚಾರಣೆ ನಡೆಸಿದೆ. 3 ಐಪಿಎಸ್ ಅಧಿಕಾರಿಗಳಿಗೆ SIT ಸಮನ್ಸ್ ಜಾರಿ(summons) ಮಾಡಿದೆ. ಹ್ಯಾಕರ್ ಶ್ರೀಕಿ ಜೈಲಿನಲ್ಲಿದ್ದಾಗ ಬಿಟ್ ಕಾಯಿನ್ ವರ್ಗಾವಣೆ ಆರೋಪ ಕೇಳಿಬಂದಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾಗ ಕೆಲವು ಬಿಟ್ ಕಾಯಿನ್ ಟ್ರಾನ್ಸ್ಫರ್ ಆಗಿದೆ ಎನ್ನಲಾಗ್ತಿದೆ. ಜೈಲಿನಲ್ಲಿದ್ದ ಶ್ರೀಕಿಗೆ(Hacker Shriki ) ಕಂಪ್ಯೂಟರ್, ಲ್ಯಾಪ್‌ಟ್ಯಾಪ್ ಪೂರೈಕೆ ಮಾಡಿ, ಡಾರ್ಕ್ನೆಟ್ ಮೂಲಕ ಬಿಟ್ ಕಾಯಿನ್‌ನನ್ನು ಅಧಿಕಾರಿಗಳು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಟಿ.ಪಿ.ಶೇಷಾ, ಮಹಾದೇವ ನಾಯ್ಕ್, ಎಚ್.ಎ.ಪರಮೇಶ್ವಗೀಗೆ ಸಮನ್ಸ್ ಜಾರಿ ಮಾಡಿದ್ದು, ಶ್ರೀಕಿ ಜೈಲಿನಲ್ಲಿದ್ದಾಗ ಪರಪ್ಪನ ಅಗ್ರಹಾರದ ಡಿಐಜಿಯಾಗಿದ್ದ ಟಿ.ಪಿ ಶೇಷಾ, ಸದ್ಯ ಬೆಳಗಾವಿಯಲ್ಲಿ ಡಿಐಜಿಯಾಗಿದ್ದಾರೆ.2000ದಲ್ಲಿ ಜೈಲು ಸೂಪರಿಂಟೆಂಡೆಂಟ್ ಆಗಿದ್ದ ಮಹಾದೇವ್ ನಾಯ್ಕ್, ಎಡಿಷನಲ್ SP ಎಚ್.ಎ.ಪರಮೇಶ್ವಗೀಗೂ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ದತ್ತ ಪೀಠದಲ್ಲಿ ಜೆಡಿಎಸ್ -ಬಿಜೆಪಿ ಒಗ್ಗಟ್ಟಿನ ಪ್ರದರ್ಶನ: ದತ್ತ ಮಾಲೆ ಧರಿಸಲು ಮುಂದಾದ್ರ ಕುಮಾರಸ್ವಾಮಿ..?