ಮನೆ ಬೆಳಗಲು ಬಂದವಳ ಮುಕ್ಕಿ ತಿಂದ ಅತ್ತೆ-ಮಾವ: ತಲೆಮರೆಸಿಕೊಂಡ ಫ್ಯಾಮಿಲಿ ಸಿಕ್ಕಿ ಬಿದ್ದಿದ್ಹೇಗೆ?..?

ಸಾವಿನಲ್ಲೂ ಮಾನವೀಯತೆ ಮೆರೆದ ಐಶ್ವರ್ಯ ಕುಟುಂಬ..!
ಮನೆ ಮಗಳ ಸಂಸಾರವನ್ನ ತಂದೆ ಕುಟುಂಬಸ್ಥರೇ ಕೆಡಸಿದ್ರು!
ಶ್ರೀಮಂತ ಮನೆಗೆ ಎಂಟ್ರಿ ಕೊಟ್ಟರೂ ನೆಮ್ಮದಿ ಇರಲಿಲ್ಲ..!

Share this Video
  • FB
  • Linkdin
  • Whatsapp

ಅವಳು ಸುಂದರ ಚೆಲುವೆ. ಚಿನ್ನದ ಚಮಚವನ್ನ ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದವಳು. ಓದಿನಲ್ಲೂ ಮುಂದು, ಇನ್ನೂ ಆಕೆಯ ಹೆತ್ತವರೂ ಆಕೆಗೆ ಸಣ್ಣ ನೋವು ಆಗದಂತೆ ನೋಡಿಕೊಂಡಿದ್ರು. ವಯಸ್ಸಿಗೆ ಬಂದ ಮೇಲೆ ಆಕೆಗೆ ಶ್ರೀಮಂತ ಮನೆತನವನ್ನ ಹುಡುಕಿ ಮದುವೆ ಮಾಡಿದ್ರು. ಆಕೆ ಕೂಡ ಗಂಡನ ಜೊತೆ ಸುಖವಾಗಿ ಸಂಸಾರ ಮಾಡಿಕೊಂಡು ಹೋಗ್ತಿದ್ಲು. ಆದ್ರೆ ಆವತ್ತೊಂದು ದಿನ ಆಕೆ ತನ್ನ ತವರು ಮನೆಯಲ್ಲಿ ಹೆಣವಾಗಿ ಹೋಗಿದ್ಲು. ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿದ್ಲು. ಯಾವಾಗ ಈಕೆ ಸತ್ತಳೋ ಗಂಡನ(Husband) ಮನೆಯವರೆಲ್ಲಾ ಎಸ್ಕೇಪ್ ಆಗಿದ್ದಾರೆ. ಆದ್ರೆ ಸತತ ಒಂದು ವಾರದ ಬಳಿಕೆ ಪೊಲೀಸರು ಗಂಡನ ಫ್ಯಾಮಿಲಿಯನ್ನ ಬಂಧಿಸಿದ್ದಾರೆ. ಯಾವುದೇ ಪ್ರಾಬ್ಲಮ್ ಇರಲಿಲ್ಲ. ದುಡ್ಡಿನ ಸಮಸ್ಯೆ ಕೂಡ ಇರಲಿಲ್ಲ ಆದ್ರೂ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ..? ಈ ಪ್ರಶ್ನೆ ಸದ್ಯ ನಿಮ್ಮೆಲ್ಲರನ್ನ ಕಾಡುತ್ತಿರುತ್ತೆ. ಆದ್ರೆ ಐಶ್ವರ್ಯ ಹೆತ್ತವರಿಗೆ ಮಾತ್ರ ಮಗಳ ಸಾವಿಗೆ ಕಾರಣ ಕಾರಣಕತೃ ಎಲ್ಲವೂ ಗೊತ್ತಿತ್ತು.5 ವರ್ಷದ ಹಿಂದೆ ಮದುವೆಯಾಗಿ ಹೋಗಿದ್ದ ಮಗಳು ಗಂಡನ ಜೊತೆ ಸುಖವಾಗಿ ಸಂಸಾರ ಮಾಡಿಕೊಂಡಿದ್ಲು. ಆದ್ರೆ ಈ ಸುಖಿ ಸಂಸಾರದಲ್ಲಿ ಹುಳಿ ಹಿಂಡಲು ಬಂದವರು ಐರ್ಶವರ್ಯಳ ಸೋದರ ಅತ್ತೆ.ಯಾವಾಗ ಆಕೆ ಎಂಟ್ರಿ ಕೊಟ್ಟಳೋ ಐಶ್ವರ್ಯಳ ಬದುಕೇ ಬದಲಾಗಿಬಿಡ್ತು. 

ಇದನ್ನೂ ವೀಕ್ಷಿಸಿ: ಇಸ್ರೇಲ್ ಮೇಲೆ 3 ಉಗ್ರ ಪಡೆಗಳ ರಕ್ಕಸ ದಾಳಿ! ಹೇಗೆ ಸಾಗಿದೆ ಗೊತ್ತಾ ನೆಲದಾಳದ ಕದನ..?

Related Video