ಇಸ್ರೇಲ್ ಮೇಲೆ 3 ಉಗ್ರ ಪಡೆಗಳ ರಕ್ಕಸ ದಾಳಿ! ಹೇಗೆ ಸಾಗಿದೆ ಗೊತ್ತಾ ನೆಲದಾಳದ ಕದನ..?

ಕೆಲವೇ ಗಂಟೆಗಳಲ್ಲಿ ಉರುಳಿದ್ದು 130 ಉಗ್ರರ ಹೆಣ!
ಗಾಜಾ ಉತ್ತರ ಭಾಗದಲ್ಲಿ ಇಸ್ರೇಲ್ ಸೇನೆ ಆರ್ಭಟ!
ಇಸ್ರೇಲ್ ಅಬ್ಬರಕ್ಕೆ ತತ್ತರಿಸಿದೆ ಹಮಾಸ್ ಉಗ್ರಪಡೆ!

Share this Video
  • FB
  • Linkdin
  • Whatsapp

ಇಸ್ರೇಲ್ ಮೇಲೆ ಹಮಾಸ್(Hamas) ಮಾತ್ರವೇ ಅಲ್ಲ. ಒಟ್ಟು ಮೂರು ಉಗ್ರ ಪಡೆಗಳು ರಕ್ಕಸ ದಾಳಿ ನಡೆಸ್ತಾ ಇದಾವೆ. ಆ 3 ಉಗ್ರರ ಬಳಿ ಇರೋದು 2 ಪ್ಲಾನ್. ಆದ್ರೆ ಟಾರ್ಗೆಟ್ ಮಾತ್ರ ಒಂದೇ, ಅದು ಇಸ್ರೇಲ್( Israel ). ಆದ್ರೆ, ಈ ಉಗ್ರರನ್ನ ಸಂಪೂರ್ಣವಾಗಿ ನಾಶ ಮಾಡೋಕ್ಕಂತಲೇ ಇಸ್ರೇಲ್ ಚತುರ್ಮುಖ ವ್ಯೂಹ ಸಿದ್ಧವಾಗಿದೆ. ಹಮಾಸ್ ಉಗ್ರರ ಜೇಡರಬಲೆ ನಾಶಕ್ಕೆ ವೀಸಲ್ ಮಂತ್ರ ಪಠಿಸ್ತಾ ಇದೆ ಇಸ್ರೇಲ್. ಕಳೆದ ಅಕ್ಟೋಬರ್ 7ರಂದು ಆರಂಭವಾದ ಯುದ್ಧ, ಈಗ 28 ದಿನಗಳನ್ನ ಪೂರೈಸಿದೆ. ಇಷ್ಟೂ ದಿನಗಳಲ್ಲಿ ಎರಡೂ ಕಡೆಯಲ್ಲಿ ಬರೋಬ್ಬರಿ 9 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ 3ವರೆ ಸಾವಿರಕ್ಕೂ ಅಧಿಕ ಮಂದಿ, ಪುಟ್ಟ ಮಕ್ಕಳು ಅನ್ನೋದು, ದುಃಖದ ವಿಚಾರ. ಅವತ್ತು ಇಸ್ರೇಲಿನೊಳಗೆ ನುಗ್ಗಿದ ಹಮಾಸ್ ಉಗ್ರರು ಬರೋಬ್ಬರಿ 1400 ಮಂದಿಯ ಪ್ರಾಣ ತೆಗೆದಿದ್ರು. ಸುಮಾರು 250 ಮಂದಿನಾ ಒತ್ತೆಯಾಳುಗಳಾಗಿ ಕದ್ದೊಯ್ದಿದ್ರು. ಇಸ್ರೇಲ್ ಈ ದಾಳಿಯ ಬಗ್ಗೆ ಎಚ್ಚೆತ್ತುಕೊಂಡು ಪ್ರತಿದಾಳಿ ಮಾಡೋ ಹೊತ್ತಿಗೆ ಸಮಯ ಕೈಮೀರಿತ್ತು. ಆದ್ರೆ, ಈ ಕ್ಷಣಕ್ಕೂ ಇಸ್ರೇಲಿನ ಯುದ್ಧೋತ್ಸಾಹ ಕಡಿಮೆಯಾಗಿಲ್ಲ. ಹಮಾಸ್ ಉಗ್ರರ ಸರ್ವನಾಶ ಮಾಡೋ ತನಕ ನಿಟ್ಟುಸಿರನ್ನೂ ಬಿಡದ ಹಾಗೆ ಕಾದಾಡೋಕೆ ಇಸ್ರೇಲ್ ಸಂಸಿದ್ಧವಾಗಿಯೇ ರಣಾಂಗಣ ಪ್ರವೇಶಿಸಿದೆ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು(Benjamin Netanyahu) ಹೇಳಿರೋ ಮಾತುಗಳಿವು. ಗಾಜಾ ಸುತ್ತಲೂ ಇಸ್ರೇಲ್ ಸರ್ವಸನ್ನದ್ಧವಾಗಿ ನಿಂತಿದೆ. ಸದ್ಯಕ್ಕಂತೂ ಇಸ್ರೇಲ್‌ ಈ ಯುದ್ಧದಲ್ಲಿ ಮೇಲುಗೈ ಸಾಧಿಸಿದೆ.ಹಮಾಸ್ ಉಗ್ರರ ಸರ್ವನಾಶ ಮಾಡೋಕೆ ಹೆಚ್ಚು ಟೈಮ್ ಬೇಕಿಲ್ಲ ಅಂತ ನೆತನ್ಯಾಹು ಹೇಳಿಕೆ ಕೊಟ್ಟಿದಾರೆ.

ಇದನ್ನೂ ವೀಕ್ಷಿಸಿ: ಎನ್‌ಡಿಎ ಒಳಗೂ ನಡೀತಿದೆಯಾ ಮುಸುಕಿನ ಗುದ್ದಾಟ..? ಐಎನ್‌ಡಿಐಎಗೆ ಶಾಪವಾಗುತ್ತಾ ಒಳಜಗಳ..?

Related Video