ಶಿವಮೊಗ್ಗ ಈದ್‌ ಮಿಲಾದ್ ಗಲಾಟೆ: ಪೊಲೀಸರ ಮೇಲೆಯೇ ಮನಸೋ ಇಚ್ಛೆ ಕಲ್ಲು ತೂರಿದ ಪುಂಡರು !

ಶಿವಮೊಗ್ಗದಲ್ಲಿ ಗಲಾಟೆಯನ್ನು ನಿಯಂತ್ರಿಸಲು ಹೋದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಹ ಲಭ್ಯವಾಗಿದೆ.
 

Share this Video
  • FB
  • Linkdin
  • Whatsapp

ಶಿವಮೊಗ್ಗದ ಈದ್‌ ಮಿಲಾದ್ ಗಲಾಟೆಗೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯ ಲಭ್ಯವಾಗಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್‌ ದೃಶ್ಯ ಲಭ್ಯವಾಗಿದೆ. ಗಲಾಟೆ ನಿಯಂತ್ರಿಸಲು ಬಂದಿದ್ದ ಎಸ್‌ಪಿ ಮೇಲೆಯೇ ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಆರು ಜನ ಪೊಲೀಸರಿಗೆ ಗಾಯವಾಗಿದೆ ಎಂದು ಹೇಳಲಾಗ್ತಿದೆ. ಈದ್‌ ಮಿಲಾದ್‌ ಮೆರವಣಿಗೆ ಬಳಿಕ ಕಿಡಿಗೇಡಿಗಳು ಹಲವು ಹಿಂದೂಗಳ ಮನೆ ಮೇಲೆ ಕಲ್ಲನ್ನು ತೂರಿದ್ದರು. ಇದನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಲಾಗಿದೆ. 

ಇದನ್ನೂ ವೀಕ್ಷಿಸಿ: ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆರೋಪ: ಈ ಹೇಳಿಕೆ ಅಸಲಿ ಸತ್ಯವೇನು ?

Related Video