ರಸ್ತೆ ಕಾಮಗಾರಿ ಗಲಾಟೆಯಲ್ಲಿ ಕೊಲೆಗೆ ಸ್ಕೆಚ್: ತಾ.ಪಂ. ಮಾಜಿ ಸದಸ್ಯನ ಹತ್ಯೆಗೆ 2 ಲಕ್ಷ ಸುಪಾರಿ !
ರಾಜಕೀಯದಲ್ಲಿ ಧ್ವೇಷ, ಅಸೂಹೆ ಕಾಮನ್.. ಆದರೆ ಕೊಲೆ ಮಾಡುವ ಹಂತಕ್ಕೆ ದ್ವೇಷ ಬೆಳೆಯುತ್ತೆ ಅಂದರೆ ನೀವೆ ಊಹಿಸಿಕೊಳ್ಳಿ. ಇಲ್ಲೊಂದು ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯ ಹಾದಿ ಹಿಡಿದಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 2016ರಲ್ಲಿ ನಡೆದ ಮರ್ಡರ್ (Murder)ಕೇಸ್‌ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಈಗಲೂ ಬೇಲ್ ಮೇಲೆ ಇದ್ದಾರೆ. ಇದರ ನಡುವೆ ಈಗ ಕೊಪ್ಪಳದಲ್ಲಿ(Koppal) ತಾಲೂಕು ಪಂಚಾಯತ್ ಮಾಜಿ ಸದಸ್ಯನೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದರು. ಆದ್ರೆ, ಸುಫಾರಿ ಹಂತಕರ ಪ್ಲಾನ್ ಅದೊಂದು ಆಡಿಯೋ ಸಂಭಾಷಣೆಯಿಂದ ಉಲ್ಟಾ ಹೊಡೆದಿದೆ. ಇದು ಗಂಗಾವತಿಯ ಡಣಾಪುರ ಗ್ರಾಮದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಫಕೀರಪ್ಪನ ಹತ್ಯೆಗೆ ನಡೆದ ಸಂಚಿನ ರಹಸ್ಯ. ಫಕರೀಪ್ಪನನ್ನು ಮುಗಿಸಲು ಅದೇ ಊರಿನ ಶಶಿಧರ್ ಮಾಲಿ ಪಾಟೀಲ್ ಅಂಡ್ ಗ್ಯಾಂಗ್ ಸ್ಕೆಚ್ ಹಾಕಿತ್ತು. ಅಷ್ಟಕ್ಕೂ ಇದೆಲ್ಲ ನಡೆದಿದ್ದು ಊರಿನ ರಸ್ತೆ ಕಾಮಾರಿ ವಿಚಾರದಲ್ಲಿ. ಊರಿನಲ್ಲಿ ನಿರ್ಮಾಣವಾಗಿದ್ದ ರಸ್ತೆಯನ್ನು ಶಶಿಧರ್ ಪಾಟೀಲ್ ಕಿತ್ತುಹಾಕಿದ್ರು. ಇದನ್ನು ವಿರೋಧಿಸಿ ಫಕೀರಪ್ಪ ಗ್ರಾಮ ಪಂಚಾಯತ್ಗೆ ದೂರು ನೀಡಿದ್ರು.. ಇಷ್ಟೇ.. ಇದಕ್ಕೇ ದ್ವೇಷ ಸಾಧಿಸಿದ ಪಾಟೀಲ್, ಫಕೀರಪ್ಪನ ಕೊಲೆ ಮಾಡಲು ಫಕೀರಪ್ಪನ ಟ್ರ್ಯಾಕ್ಟರ್ ಚಾಲಕ ಮಲ್ಲೇಶ್ ಎಂಬಾತನಿಗೆ ಸುಫಾರಿ ಕೊಟ್ಟಿದ್ದಾನೆ. ವಿಷ ಹಾಕಿದ ಮದ್ಯ ಬಾಟಲನ್ನು ಫಕೀರಪಪಗೆ ನೀಡಲು ಹೇಳಿದ್ದಾನೆ. ಇದಕ್ಕೆ ಮಹೇಶ್ ನಿರಾಕರಿಸಿದಾಗ ಲೈನ್ ಮನ್ (Line man)ಹೆಲ್ಪರ್ ಮಹೇಶ್ ಎಂಬಾತನಿಗೆ ಟಾಸ್ಕ್ ಕೊಟ್ಟಿದ್ದಾನೆ. ಆದ್ರೆ ಮಹೇಶ್ ಕೂಡ ಧೈರ್ಯ ಸಾಲದೆ ಹಿಂಜರಿದಿದ್ದಾನೆ. ಅಷ್ಟೊತ್ತಿಗಾಗಲೇ ಕೊಲೆಗೆ ಸ್ಕೆಚ್ಹಾಕಿದ್ದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಇದನ್ನೂ ವೀಕ್ಷಿಸಿ: ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !